ಕೋಲ್ಕತ್ತಾ,ಡಿ.30- ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸಲಾಗುತ್ತಿರುವ ದೇಶದ ಪ್ರಪ್ರಥಮ ಅಂಡರ್ ವಾಟರ್ ಮೆಟ್ರೋ ರೈಲು ಸಂಚಾರ ಡಿಸಂಬರ್ 2023ರೊಳಗೆ ಪೂರ್ಣಗೊಳ್ಳಲಿದೆ ಎಂದು ಕೋಲ್ಕತ್ತಾ ಮೆಟ್ರೋ ರೈಲು ನಿಗಮ ತಿಳಿಸಿದೆ.
ದೇಶದ ಮೊದಲ ನೀರೊಳಗಿನ ಮೆಟ್ರೋ ರೈಲು ಸಂಚಾರದ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದ್ದು, ಯೋಜನೆ 2023ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೆಎಂಆರ್ಸಿ ಎಂಡಿ ಶೈಲೇಶ್ ಕುಮಾರ್ ತಿಳಿಸಿದ್ದಾರೆ.
ಕೋಲ್ಕತ್ತಾದಲ್ಲಿ 1984ರಲ್ಲೇ ಮೆಟ್ರೋ ರೈಲು ಸಂಚಾರ ಆರಂಭಿಸಲಾಗಿದ್ದು, ಇಡಿ ನಗರವನ್ನು ಮೆಟ್ರೋ ರೈಲು ಸುತ್ತುವರೆದಿದೆ. ಇದೀಗ ಹೂಗ್ಲಿ ನದಿ ಮೂಲಕ ಹರಿಯುವ ನೀರೊಳಗಿನ ಮೆಟ್ರೋ ಸಂಚಾರ ಹೌರಾ ಮತ್ತು ಕೋಲ್ಕತ್ತಾವನ್ನು ಸಂಪರ್ಕಿಸಲಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ಕೆಲವು ಪುನರ್ವಸತಿ ಕಾಮಗಾರಿಗಳು ನಡೆಯುತ್ತಿರುವುದು ಸೇರಿದಂತೆ ಕೆಲವು ಸಮಸ್ಯೆಗಳಿಂದ ನೀರೊಳಗಿನ ಮೆಟ್ರೊ ಯೋಜನೆ ಪೂರ್ಣಗೊಳ್ಳಲು ವಿಳಂಬವಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮತ್ತಷ್ಟು ದುಬಾರಿಯಾಗಲಿದೆ ಬಿಎಂಟಿಸಿ ಪ್ರಯಾಣ.. ?
ಜರ್ಮನ್ ತಂತ್ರಜ್ಞರು ಮತ್ತು ಅತ್ಯಾಧುನಿಕ ಯಂತ್ರಗಳ ಮೂಲಕ ನೀರೊಳಗೆ ಸುರಂಗ ಕೊರೆಯುವ ಕಾರ್ಯ ನಡೆಸಲಾಗುತ್ತಿದ್ದು, ಯೋಜನೆ ಸಾಕಾರಗೊಂಡರೆ ದೇಶದ ಪ್ರಪ್ರಥಮ ನೀರೋಳಗಿನ ಮೆಟ್ರೋ ಸಂಚಾರ ಎಂಬ ಹಿರಿಮೆ ಕೋಲ್ಕತ್ತಾ ಪ್ರಾಪ್ತವಾಗಲಿದೆ.
157 ಕೋಟಿ ರೂ. ವೆಚ್ಚದಲ್ಲಿ ಕೋಲ್ಕತ್ತಾ ಮೆಟ್ರೋ ರೈಲ್ವೇ ಕಾರ್ಪೊರೇಷನ್ ಜರ್ಮನ್ ಯಂತ್ರಗಳು ಮತ್ತು ಅತ್ಯುತ್ತಮ ತಜ್ಞರ ಸಹಾಯದಿಂದ ಸುರಂಗವನ್ನು ತಯಾರಿಸುವ ಕಷ್ಟಕರವಾದ ಕೆಲಸವನ್ನು ಕೈಗೆತ್ತಿಕೊಂಡಿದೆ. ಸುರಂಗದ ಒಳಗಿನ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.
#Kolkata, #UnderwaterMetro, ##Completed, #December2023,