ಮೇಲ್ಛಾವಣಿ ಸೌರ ವಿದ್ಯುತ್ ಯೋಜನೆ ಮೂಲಕ ಕೊಂಕಣ ರೈಲ್ವೆಗೆ 31 ಲಕ್ಷ ರೂ.ಉಳಿತಾಯ

Social Share

ಪಣಜಿ, ಡಿ .9 -ಸುಮಾರು ಎರಡು ವರ್ಷಗಳ ಹಿಂದೆ ದಕ್ಷಿಣ ಗೋವಾದ ಮಡಗಾಂವ್ ರೈಲು ನಿಲ್ದಾಣದಲ್ಲಿ 180 ಕಿಲೋವ್ಯಾಟ್ ಸಾಮಥ್ರ್ಯದ ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಯನ್ನು ಸ್ಥಾಪಿಸಿದಾಗಿನಿಂದ ಕೊಂಕಣ ರೈಲ್ವೆ ಕಾಪೆರ್ರೇಷನ್ ಲಿಮಿಟೆಡ್‍ಗೆ 31 ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿತಾಯ ಮಾಡಲಾಗಿದೆ.

ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಯನ್ನು ಕಳೆದ ಜನವರಿ 2021 ರಲ್ಲಿ ನಿಲ್ದಾಣದಲ್ಲಿ ಸ್ಥಾಪಿಸಲಾಗಿತ್ತು ಉತ್ತಮ ನಿರ್ವಹಣೆಯಿಂದ ಈ ಸಾಧನೆ ಮಾಡಲಾಗಿದೆ ಎಂದು ಕೆಆರ್‍ಸಿಎಲ್‍ನ ಉಪ ಪ್ರದಾನ ವ್ಯವಸ್ತಾಪಕ ಬಬನ್ ಘಾಟ್ಗೆ ತಿಳಿಸಿದರು.

ಚಂಡಮಾರುತ : ತಮಿಳುನಾಡು ಪುದುಚರಿ ಕರಾವಳಿಯಲ್ಲಿ ಭಾರಿ ಕಟ್ಟೆಚ್ಚರ

ಮಡಗಾಂವ್ ರೈಲು ನಿಲ್ದಾಣದ ಪ್ಲಾಟ್‍ಫಾರ್ಮ್‍ಗಳ ಎರಡು ಶೆಡ್‍ಗಳ ಮೇಲ್ಛಾವಣಿಯಲ್ಲಿ 1,235 ಚದರ ಮೀಟರ್‍ನಲ್ಲಿ ಹರಡಿರುವ ಪ್ಯಾನಲ್‍ನಿಂದ ವಿದ್ಯುತ್ ಉತ್ಪಾದನೆ ಕಾರ್ಯಾರಂಭ ಮಾಡಿದ ನಂತರ ನಿಗಮವು ಇಲ್ಲಿಯವರೆಗೆ 31,37,536 ರೂಪಾಯಿಗಳನ್ನು ಉಳಿಸಿದೆ ಎಂದರು.

ಅಮೆರಿಕ ವೀಸಾ ವಿಳಂಬಕ್ಕೆ ಶೀಘ್ರ ಪರಿಹಾರ – ಶ್ವೇತಭವನ

ಸುಮಾರು 1.32 ಕೋಟಿ ವೆಚ್ಚದ ಯೋಜನೆಗೆ ಅಂದಿನ ದಕ್ಷಿಣ ಗೋವಾ ಪ್ರಾಯೋಜಿಸಿತ್ತು. ಈ ಯೋಜನೆಯು ಮಡಗಾಂವ್ ರೈಲು ನಿಲ್ದಾಣದ ಶೇಕಡಾ 30 ಕ್ಕಿಂತ ಹೆಚ್ಚು ವಿದ್ಯುತ್ ಅಗತ್ಯವನ್ನು ಪೂರೈಸುತ್ತದೆ. ಇದು ಸುಮಾರು ಏಳು ವರ್ಷಗಳಲ್ಲಿ ನಂತರ ಹೂಡಿಕೆಯ ಮೇಲೆ ಲಾಭ ಗಳಿಸುವ ನಿರೀಕ್ಷೆಯಿದೆ ಎಂದು ಘಾಟ್ಗೆ ಹೇಳಿದರು.
ಈವರೆಗೆ 4,53,404 ಯೂನಿಟ್ ವಿದ್ಯುತ್ ಉತ್ಪಾದಿಸಿದೆ ಪರಿಸರ ಸ್ನೇಹಿ ಕ್ರಮ ಮುಂದುವರೆಯಲಿದೆ ಎಂದರು.

Konkan Railway, saves, Rs 31 lakh, solar power, project,

Articles You Might Like

Share This Article