ಕೋರೆಗಾಂವ್-ಭೀಮಾ ಹಿಂಸಾಚಾರ ತನಿಖಾ ಆಯೋಗದ ಅಧಿಕಾರವಧಿ ವಿಸ್ತರಣೆ

Social Share

ಪುಣೆ,ಜ.19- ಪುಣೆ ನಗರದ ಹೊರವಲಯದಲ್ಲಿ 2018ರ ಜನವರಿ 1ರಂದು ನಡೆದ ಹಿಂಸಾಚಾರದ ಕುರಿತು ತನಿಖೆ ನಡೆಸುತ್ತಿರುವ ಕೋರೆಗಾಂವ್-ಭೀಮಾ ತನಿಖಾ ಆಯೋಗದ ಅಧಿಕಾರವಯನ್ನು ಮಹಾರಾಷ್ಟ್ರ ಸರ್ಕಾರ ಮೂರು ತಿಂಗಳವರೆಗೂ ವಿಸ್ತರಣೆ ಮಾಡಿದೆ.

ಮತ್ತಷ್ಟು ಸಾಕ್ಷಿಗಳನ್ನು ದಾಖಲಿಸಬೇಕಿರುವುದರಿಂದ ಮತ್ತಷ್ಟು ಕಾಲಾವಕಾಶ ಅಗತ್ಯವಿದೆ ಎಂದು ಸಮಿತಿ ಮನವಿ ಮಾಡಿತ್ತು. ಹಿಂಸಾಚಾರದ ವಿಚಾರಣೆಗಾಗಿ ರಚಿಸಲಾಗಿರುವ ಆಯೋಗದಲ್ಲಿ ಇಬ್ಬರು ಸದಸ್ಯರಿದ್ದಾರೆ. ಆಯೋಗಕ್ಕೆ 2022ರ ಡಿಸೆಂಬರ್ 31ರವರೆಗೆ ಕಾಲಾವಕಾಶವಿತ್ತು. ಅದನ್ನು ಈ ವರ್ಷದ ಮಾರ್ಚ್ 31ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

1818 ರಲ್ಲಿ ಪುಣೆಯ ಬ್ರಾಹ್ಮಣ ಪೇಶ್ವೆ ದೊರೆಗಳ ಸೈನ್ಯದ ಮೇಲೆ ದಲಿತ ಸೈನಿಕರನ್ನು ಒಳಗೊಂಡ ಬ್ರಿಟಿಷ್ ಪಡೆಗಳ ವಿಜಯದ ಸ್ಮರಣಾರ್ಥವಾಗಿ 2018ರ ಜನವರಿ 1ರಂದು ಪುಣೆ ಜಿಲ್ಲೆಯ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ವೇಳೆ ಹಿಂಸಾಚಾರ ನಡೆದಿತ್ತು. ಪ್ರತಿ ವರ್ಷ ಕೋರೆಗಾಂವ್-ಭೀಮಾ ಯುದ್ಧದ ಗೆಲುವನ್ನು ಸಂಭ್ರಮಿಸಲು ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಸ್ಮಾರಕಕ್ಕೆ ಭೇಟಿ ನೀಡುತ್ತಾರೆ.

ಅಧಿಕಾರಿಗಳು, ನೌಕರರ ವರ್ಗಾವಣೆಗೆ ಬ್ರೇಕ್ ಹಾಕಿದ ಸಿಎಂ ಬೊಮ್ಮಾಯಿ

ಕಲ್ಕತ್ತಾ ಹೈಕೋರ್ಟ್ನ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ.ಎನ್.ಪಟೇಲ್, ಮಹಾರಾಷ್ಟ್ರದ ಮಾಜಿ ಮುಖ್ಯ ಕಾರ್ಯದರ್ಶಿ ಸುಮಿತ್ ಮುಲ್ಲಿಕ್ ಅವರನ್ನೊಳಗೊಂಡ ದ್ವಿಸದಸ್ಯ ಆಯೋಗವು ಹಿಂಸಾಚಾರದ ತನಿಖೆ ನಡೆಸುತ್ತಿದೆ.

2018 ರಲ್ಲಿ ದೇವೇಂದ್ರ ಫಡ್ನಾವಿಸ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆಯೋಗ ರಚನೆಯಾಗಿತ್ತು. ಅಂದಿನಿಂದ ಹಲವು ಬಾರಿ ಆಯೋಗದ ಅಧಿಕಾರವಧಿಯನ್ನು ವಿಸ್ತರಣೆ ಮಾಡಲಾಗುತ್ತಿದೆ.

ಮೈಕೊರೆಯುವ ಚಳಿಯಲ್ಲೂ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

2017 ರ ಡಿಸೆಂಬರ್ 31 ರಂದು ನಗರದಲ್ಲಿ ನಡೆದ ಎಲ್ಗಾರ್ ಪರಿಷತ್ತಿನ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳು ಹಿಂಸಾಚಾರವನ್ನು ಪ್ರಚೋದಿಸಿದವು ಎಂದು ಪುಣೆ ಪೊಲೀಸರು ಆರೋಪಿಸಿದ್ದರು.

Koregaon, Bhima, inquiry, commission, another, extension,

Articles You Might Like

Share This Article