ಬೆಂಗಳೂರು, 29- ಕೋಟಕ್ ಮಹಿಂದ್ರಾ ಬ್ಯಾಂಕ್ ಲಿಮಿಟೆಡ್ ಬೆಂಗಳೂರಿನಲ್ಲಿ ಆಧಾರ್ ಆನ್ ವೀಲ್ಸ್ ಸೇವೆಗೆ ಚಾಲನೆ ನೀಡಿದೆ. ಇದು ಒಂದು ಸಂಚಾರಿ ಆಧಾರ್ ಸೇವಾ ಕೇಂದ್ರವಾಗಿದ್ದು ಹಿರಿಯ ನಾಗರಿಕರೂ ಒಳಗೊಂಡಂತೆ, ವಿಶೇಷ ಸಾಮಥ್ರ್ಯವಿರುವವರು, ಮತ್ತು ಗರ್ಭಿಣಿ ಮಹಿಳೆಯರು ಮತ್ತು ಇತರ ನಾಗರಿಕರಿಗೆ ಸುಲಭವಾದ ಆಧಾರ್ ಸೇವೆಗಳನ್ನು ಒದಗಿಸುತ್ತದೆ.
ಆಧಾರ್ ಆನ್ ವೀಲ್ಸ್ ಆಧಾರ್‍ಗೆ ನೋಂದಣಿ ಮತ್ತು ಆಧಾರ್ ವಿವರಗಳ ನವೀಕರಣ ಮುಂತಾದ ಸಾಂಪ್ರದಾಯಿಕ ಆಧಾರ್ ಸೇವಾ ಕೇಂದ್ರವು ಒದಗಿಸುವ ಎಲ್ಲಾ ಪ್ರಮುಖ ಸೇವೆಗಳನ್ನೂ ಒದಗಿಸುತ್ತದೆ ಮತ್ತು ಇವೆಲ್ಲವೂ ನಗರದಲ್ಲಿ ವಾಸಿಸುತ್ತಿರುವ ನಾಗರಿಕರ ಮನೆಬಾಗಿಲಲ್ಲೇ ಲಭ್ಯವಾಗಲಿದೆ.
ಈ ಉಪಕ್ರಮಕ್ಕಾಗಿ ಬ್ಯಾಂಕ್‍ನೊಂದಿಗೆ ಭಾರತದ ವಿಶಿಷ್ಟ ಗುರುತಿನ ಚೀಟಿಯ ಪ್ರಾಕಾರ ಸಹಭಾಗಿತ್ವ ಏರ್ಪಡಿಸಿಕೊಂಡಿದೆ. ಈ ವ್ಯಾನುಗಳನ್ನು ಆಧಾರ್ ಆಪರೇಟರ್ ಮತ್ತು ಬ್ಯಾಂಕ್ ಸಿಬ್ಬಂದಿ ನಿರ್ವಹಿಸುವರು.
ಈ ಸಂದರ್ಭದಲ್ಲಿ ಆಧಾಶ್ರ್ ಆನ್ ವೀಲ್ಸ್ ಅನ್ನು ಬೆಂಗಳೂರು ವಿಭಾಗದ ಉಪಮಹಾನಿರ್ದೇಶಕ ಅನೂಪ್ ಕುಮಾರ್ ಮತ್ತು ಕೋಟಕ್ ಮಹಿಂದ್ರಾ ಬ್ಯಾಂಕ್ ಲಿ.,ನ ಜಂಟಿ ಅಧ್ಯಕ್ಷ ಹೇಮಲ್ ವಕೀಲ್ ಉಪಸ್ಥಿತರಿದ್ದರು.
#KotakMahindraBank, #announces, #AadhaaronWheels, #Van,