ಬೆಂಗಳೂರು,ಮಾ.11- ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಿಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನೆಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಕೆಪಿಸಿಸಿ ಕಚೇರಿಯಲ್ಲಿಂದು ಶ್ರದ್ಧಾಂಜಲಿ ಸಭೆ ನಡೆಸಿದೆ.
ಶ್ರದ್ಧಾಂಜಲಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಕುಟುಂಬಕ್ಕೆ ಧ್ರವನಾರಾಯಣ್‍ರ ಅಗಲುವಿಕೆ ಭರಿಸಲಾಗದ ನಷ್ಟವಾಗಿದೆ. ಅವರು ತಮಗೆ ವಹಿಸಿದ್ದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದರು. ಪಕ್ಷ ಸಂಘಟನೆಯಲ್ಲಿ ಬದ್ಧತೆಯಿದ್ದ ರಾಜಕಾರಣಿ, ಅವರ ಕಾರ್ಯವೈಖರಿ ಪಕ್ಷದ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಎಐಸಿಸಿ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ಸಂಸದ ಶ್ರೀನಿವಾಸ ಪ್ರಸಾದ್ ಮತ್ತು ನಾನು ಬಲವಂತವಾಗಿ ಅವರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಮಾಡಿದ್ದೇವು. ಚಾಮರಾಜನಗರ ಕ್ಷೇತ್ರದಿಂದ ಗೆದ್ದು ಅವರು ಸಂಸದರಾಗಿದ್ದರು.
ಸಕಲ ಸರ್ಕಾರಿ ಗೌರವದೊಂದಿಗೆ ಧೃವನಾರಾಯಣ್ ಅಂತ್ಯಕ್ರಿಯೆ: ಸಿಎಂ
ಕೆಳಗಡೆ ಅವರ ಕಚೇರಿ ಇದೆ, ಮೇಲಿನ ಮಹಡಿಯಲ್ಲಿ ನಾವು ಅವರ ಭಾವಚಿತ್ರ ಇಟ್ಟು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ. ಇದನ್ನು ಈ ಕ್ಷಣಕ್ಕೂ ನನಗೆ ನಂಬಲಾಗುತ್ತಿಲ್ಲ. ರಾಹುಲ್‍ಗಾಂ ಭಾರತ್ ಜೋಡೋ ಯಾತ್ರೆಯ ವೇಳೆ ನಂಜನಗೂಡಿನಲ್ಲಿ ಎರಡು ಸಮುದಾಯಗಳ ಜೊತೆ ಸಂಧಾನ ನಡೆಸಿ ಒಟ್ಟಿಗೆ ಊಟ ಮಾಡಿಸಿ ಭಾತೃತ್ವ ಮೆರೆದಿದ್ದ ವ್ಯಕ್ತಿ ಇಂದು ಇತಿಹಾಸದ ಪುಟ ಸೇರಿದ್ದಾರೆ ಎಂದು ಹೇಳಿದರು.
ಧ್ರುವನಾರಾಯಣ್‍ರ ಅಂತಿಮ ದರ್ಶನಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ವಿಶೇಷ ವಿಮಾನದಲ್ಲಿ ಆಗಮಿಸುತ್ತಿದ್ದಾರೆ. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸಂಜೆಯವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಮಧ್ಯಾಹ್ನ ಅಂತ್ಯಕ್ರಿಯೆ ನಡೆಸಲು ಕುಟುಂಬ ತಿರ್ಮಾನಿಸಿದೆ ಎಂದು ತಿಳಿಸಿದರು.
ರಣದೀಪ್‍ಸಿಂಗ್ ಸುರ್ಜೇವಾಲ ಮಾತನಾಡಿ, ಧ್ರುವನಾರಾಯಣ್ ಸದಾ ನಗುಮುಖದ ವ್ಯಕ್ತಿಯಾಗಿದ್ದರು, ಪ್ರತಿಯೊಬ್ಬರ ಮಾತುಗಳನ್ನು ಸಹನೆಯಿಂದ ಕೇಳುತ್ತಿದ್ದರು, ಬಡವರ ಪರವಾಗಿದ್ದರು. ಪ್ರತಿಹಂತದಲ್ಲೂ ಪರಿಶ್ರಮದಿಂದ ಮೇಲೆ ಬಂದವರು.
ಜಪಾನ್ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದವರ ಬಂಧನ
ಪಕ್ಷದ ಎಲ್ಲಾ ನಾಯಕರಿಗೆ ಪ್ರಿಯರಾಗಿದ್ದರು. ಅವರ ಸರಳ ಜೀವನ ಉತ್ತಮ ಉದಾಹರಣೆಯಾಗಿದೆ. ನಂಜನಗೂಡಿನಲ್ಲಿ ಇಂದು ಕಾಂಗ್ರೆಸ್ ಭರವಸೆಗಳ ಗ್ಯಾರಂಟಿ ಕಾರ್ಡ್ ಹಂಚಿಕೆ ಮಾಡುವ ಕುರಿತು ಮತ್ತು ಕ್ಷೇತ್ರದಲ್ಲಿ ಕೈಗೊಳ್ಳಬೇಕಾದ ಇತರ ಚಟುವಟಿಕೆಗಳ ಬಗ್ಗೆಯೂ ನಿನ್ನೆ ರಾತ್ರಿ ಚರ್ಚೆ ಮಾಡಿದ್ದರು. ಇಂದು ಬೆಳಗ್ಗೆ ಡಿ.ಕೆ.ಶಿವಕುಮಾರ್ ಅವರು ಕರೆ ಮಾಡಿ ನಿಧನದ ಸುದ್ದಿ ತಿಳಿಸಿದಾಗ ನನಗೆ ನಂಬಲಾಗಲಿಲ್ಲ. ಯಾರೂ ಕೂಡ ಈ ಕ್ಷಣದಲ್ಲಿ ಧ್ರುವನಾರಾಯಣ್ ಇಲ್ಲ ಎಂಬುದನ್ನು ನಂಬುತ್ತಿಲ್ಲ ಎಂದು ದುಖಿಃಸಿದರು.
ಬಿ.ಕೆ.ಹರಿಪ್ರಸಾದ್ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೂ ಕಾಂಗ್ರೆಸ್ ಪಕ್ಷ ಮತ್ತು ಸಿದ್ಧಾಂತದ ಬಗ್ಗೆ ನಂಬಿಕೆ ಇಟ್ಟು ಹಂತ ಹಂತವಾಗಿ ಬೆಳೆದು ಬಂದಿದ್ದರು. ಪಕ್ಷದ ಎನ್‍ಎಸ್‍ಯುಐ ಘಟಕದಿಂದ ರಾಜಕೀಯ ಜೀವನ ಆರಂಭಿಸಿದರು. ಸ್ವಚ್ಚ, ಕಳಂಕ ರಹಿತ ರಾಜಕಾರಣಿಗಳಲ್ಲಿ ಧ್ರುವನಾರಾಯಣ್ ಕೂಡ ಒಬ್ಬರು. ಈವರೆಗೂ ಅವರ ಮೇಲೆ ಒಂದೇ ಒಂದು ಆರೋಪಗಳಿಲ್ಲ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಸಾಮಾಜಿಕ ನ್ಯಾಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ಅಪಾರ ನಂಬಿಕೆ ಹೊಂದಿದ್ದರು ಎಂದು ಹೇಳಿದರು.
ಎಂ.ಬಿ.ಪಾಟೀಲ್ ಮಾತನಾಡಿ, ಸರಳಸಜ್ಜನಿಕೆ, ಕ್ರಿಯಾಶೀಲ ರಾಜಕಾರಣಿ, ಶಾಸಕರಾಗಿ, ಸಂಸದರಾಗಿ ರಾಜ್ಯದ ಹಿತ ಕಾಪಾಡಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಕಾಳಜಿ, ಬದ್ಧತೆ ಇದ್ದ ರಾಜಕಾರಣಿ. ಅವರ ಸರಳ ಗುಣಗಳು ಕಾಂಗ್ರೆಸ್‍ಗಷ್ಟೆ ಅಲ್ಲ ಇತರ ಪಕ್ಷಗಳಿಗೂ ಮಾದರಿ.
ಅಜಾತಶತ್ರುವಾಗಿದ್ದರು. ನಾನು ನೀರಾವರಿ ಸಚಿವನಾಗಿದ್ದಾಗ ತಮ್ಮ ಭಾಗದ ಕೆರೆಗಳನ್ನು ತುಂಬಿಸಲು ಯೋಜನೆಗಳನ್ನು ಮಂಜೂರು ಮಾಡಿಸಿಕೊಂಡಿದ್ದರು. ಕೆರೆ ತುಂಬಿದ ಬಳಿಕ ನನ್ನನ್ನು ಕರೆದುಕೊಂಡು ಹೋಗಿ ತೋರಿಸಿದರು. ವಿರಳ ಜನನಾಯಕನನ್ನು ರಾಜ್ಯ ಕಳೆದುಕೊಂಡಿದೆ ಎಂದು ವಿಷಾದಿಸಿದರು.
ಸಂಸದ ಡಿ.ಕೆ.ಸುರೇಶ್, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಮಾಜಿ ಸಂಸದ ಚಂದ್ರಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.
KPCC, office, Dhruvanarayan, Tribute, KPCC president DK Shivakumar