ಪಿಎಸ್‍ಐ ಹಗರಣಕ್ಕೆ ಸರ್ಕಾರವೇ ಹೊಣೆ: ಡಿಕೆಶಿ

Social Share

ಬೆಂಗಳೂರು,ಜ.28- ಪಿಎಸ್‍ಐ ಹಗರಣದಲ್ಲಿ ಸರ್ಕಾರದ ಬೆಂಬಲ ಇರುವುದು ಖಚಿತ, ಈ ಸರ್ಕಾರ ನೇಮಕಾತಿ, ವ್ಯಾಸಂಗ ಹಾಗೂ ಪರೀಕ್ಷೆಗಳಲ್ಲೂ ಭ್ರಷ್ಟಚಾರ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‍ಐ ಹಗರಣದ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಾರೆ. ಸರ್ಕಾರದ ಬೆಂಬಲ ಇಲ್ಲದೆ ಅವರಿಗೆ ಜಾಮೀನು ಸಿಗಲು ಸಾಧ್ಯವಿರಲಿಲ್ಲ. ಸರ್ಕಾರದ ಎಲ್ಲಾ ಪ್ರಮುಖರು ಇದರಲ್ಲಿ ಹೊಣೆಯಾಗಿದ್ದಾರೆ ಎಂದಿದ್ದಾರೆ.

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವಿಸರ್ಜನೆ ಮಾಡುವುದಾಗಿ ಆ ಪಕ್ಷದ ಮುಖ್ಯಸ್ಥರು ಆಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಇದರಿಂದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ.

ಭಾರತದಲ್ಲಿ ವಿವಾದ ಸೃಷ್ಟಿಸಿದ ಬಿಬಿಸಿ ಸಾಕ್ಷ್ಯ ಚಿತ್ರಗಳ ಸರಣಿ

ಅಂತಹವರಿಗೆ ನಾನೀದ್ದೇನೆ, ಕಾಂಗ್ರೆಸ್‍ಗೆ ಬನ್ನಿ ಎಂದು ಕರೆಯುತ್ತಿದ್ದೇನೆ. ವಿಸರ್ಜನೆಗೂ ಮೊದಲು ಕಾಂಗ್ರೆಸ್‍ಗೆ ಸೇರ್ಪಡೆಯಾಗಿ ಎಂದು ಆ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ. ಹಾಗಾಗಿ ನನ್ನ ಕನಕಪುರ ಸೇರಿದಂತೆ ಎಲ್ಲಾ ಕ್ಷೇತ್ರಗಳಿಂದಲೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಜೆಡಿಎಸ್ ವಿಷಯದಲ್ಲಿ ನನಗೆ ಯಾವ ಮೃಧು ದೋರಣೆಯೂ ಇಲ್ಲ. ಹಾಗೇ ನೋಡಿದರೆ ಜೆಡಿಎಸ್‍ನಿಂದ ಹೆಚ್ಚು ಕಾರ್ಯಕರ್ತರು ಈ ಅವಧಿಯಲ್ಲೇ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಒಂದು ರಾಜಕೀಯ ಪಕ್ಷಕ್ಕೆ ವಿಸರ್ಜನೆ ಎಂಬ ಪದ ಗೋತ್ತಿರುವುದಿಲ್ಲ. ಆದರೆ ಕುಮಾರಸ್ವಾಮಿ ಹೇಳಿ ಬಿಟ್ಟಿದ್ದಾರೆ. ಜೆಡಿಎಸ್‍ನ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ ಎಂದರು.

ಕುಕ್ಕರ್ ಕಿರಾತಕ ಶಾರಿಕ್ ಎನ್‍ಐಎ ವಶಕ್ಕೆ!

ಜೆಡಿಎಸ್ ಗೆಲ್ಲುವುದಿಲ್ಲ ಎಂದು ನಾನು ಹೇಳುವುದಿಲ್ಲ. ಅವರು ಒಂದು ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯವಾಗಿ ಅವರು ಇರಬೇಕು ಎಂಬುದು ನಮ್ಮ ನಿಲುವು. ಅದನ್ನು ಮೃಧು ದೋರಣೆ ಎಂದರೆ ಹೇಗೆ, ದಿನಾ ಬೆಳಗ್ಗೆ ನಾನು ಅವರ ಜೊತೆ ಕುಸ್ತಿ ಮಾಡಬೇಕಾ ಎಂದು ಪ್ರಶ್ನಿಸಿದರು.

KPCC president, D.K.Sivakumar, PSI scam,

Articles You Might Like

Share This Article