ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ದಿವಾಳಿತನ

Social Share

ಬೆಂಗಳೂರು,ಜ.3- ಬಿಜೆಪಿಯ ಕೊನೆಯ ದಿನಗಳಿವು, ಅವರ ದೀಪ ಹಾರಿ ಹೋಗುತ್ತಿದೆ, ಕಾಂಗ್ರೆಸ್ ದೀಪ ಹತ್ತಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಜನವರಿ 11ರ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ.

ಪ್ರತಿಯೊಬ್ಬರನ್ನು ತಲುಪುತ್ತೇವೆ, ಬಿಜೆಪಿ ಏನೇಲ್ಲಾ ಅವಾಂತರಗಳನ್ನು ಸೃಷ್ಟಿಸಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. ನಂತರ ಬಿಜೆಪಿಯ ದೀಪ ಹಾರಿ ಹೋಗಲಿದೆ, ಕಾಂಗ್ರೆಸ್ ದೀಪ ಹೊತ್ತಿಕೊಳ್ಳಲಿದೆ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದಾಗ ರಾಜ್ಯದಲ್ಲಿ ಬಿಜೆಪಿಗೆ ಸ್ಥಳೀಯ ನಾಯಕರಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತಾ ಶಾ ಬರಲೇ ಬೇಕಿದೆ. ಇದರರ್ಥ ರಾಜ್ಯದ ಸ್ಥಳೀಯ ನಾಯಕರು ಸಂಪೂರ್ಣ ವಿಫಲರಾಗಿದ್ದಾರೆ. ರಾಷ್ಟ್ರೀಯ ನಾಯಕರನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯದಲ್ಲಿ ಮತಕೇಳುವ ಪರಿಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು.

ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರ ಕಂಬನಿ

ಈ ಮೊದಲು ರಾಜ್ಯದಲ್ಲಿ ನಡೆದ ಅಭಿವೃದ್ಧಿಯನ್ನು ಹಾಳುಗೆಡವಿದ್ದಾರೆ. ಈ ಮೊದಲು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಮತ್ತು ಆಡಳಿತ ಮಾದರಿಯಾಗಿತ್ತು, ಬಹಳಷ್ಟು ಸಾಧನೆಗಳಾಗಿದ್ದವು. ನಾಯಕತ್ವದ ದಿವಾಳಿತನದಿಂದ ಈಗ ಸರ್ಕಾರದ ಅಭಿವೃದ್ಧಿಯೂ ಹಾಳಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಭ್ರಷ್ಟಚಾರ ಮುಕ್ತ, ಸ್ವಚ್ಚ, ದಕ್ಷ, ಜನಪರ ಆಡಳಿತ ಕಾಂಗ್ರೆಸ್ ಪಕ್ಷದ ಸಂಕಲ್ಪವಾಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಭರವಸೆ ನೀಡಲು ಎರಡು ದಿನಗಳಲ್ಲಿ ಜನರ ಮುಂದೆ ಬರುವುದಾಗಿ ಹೇಳಿದರು.

ಉದ್ಯಮಿ ಪ್ರದೀಪ್ ಆತ್ಮಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಶಾಸಕರ ದುವರ್ತನೆಯಿಂದ ಅನೇಕ ಸಾವುಗಳಾಗುತ್ತಿವೆ. ಈ ಸಾವುಗಳಿಗೆ ಕೊನೆ ಹಾಡಬೇಕಿದೆ. ಪ್ರದೀಪ್ ಸಾವಿಗೆ ನ್ಯಾಯಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಸರ್ಕಾರ ಲಂಚ, ಮಂಚದ ಆರೋಪಕ್ಕೆ ಗುರಿಯಾದ ಎಲ್ಲರನ್ನು ರಕ್ಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಆತ್ಮಹತ್ಯೆ ಮಾಡಿಕೊಂಡ ಪ್ರದೀಪ್ ಮರಣ ಪತ್ರ ಬರೆದಿದ್ದಾರೆ. ಅದನ್ನು ನಾನಾಗಲೀ, ಸಿದ್ದರಾಮಯ್ಯ ಅವರಾಗಲಿ ಹೇಳಿ ಬರೆಸಿಲ್ಲ. ಆತ ಅರವಿಂದ ಲಿಂಬಾವಳಿ ಅವರ ಕಡೆಯವರು. ಈ ಪ್ರಕರಣದಲ್ಲಿ ನಮ್ಮ ಪಾತ್ರವಿಲ್ಲ. ಕಾನೂನಿನ ಪ್ರಕಾರ ಅರವಿಂದ ಲಿಂಬಾವಳಿ ಅವರ ವಿಚಾರಣೆ ನಡೆಯಬೇಕು ಎಂದು ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

ಇಂದಿನಿಂದ ಮತ್ತೆ ಆರಂಭವಾದ ಭಾರತ್ ಜೋಡೋ ಯಾತ್ರೆ

ಅಮೂಲ್ ಜೊತೆ ಕೆಎಂಎಫ್ ಜೊತೆ ವಿಲೀನ ಮಾಡುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ. ಈಗ ಮುಖ್ಯಮಂತ್ರಿಯವರು ಸಮಜಾಯಿಷಿ ನೀಡಿ ಡ್ಯಾಮೆಜ್ ಕಂಟ್ರೋಲ್ ಮಾಡುವ ಯತ್ನ ನಡೆಸಿದ್ದಾರೆ. ಗುಜರಾತ್‍ನ ಅಮೂಲ್ ಹೈನೋದ್ಯಮದಲ್ಲಿ ಕ್ರಾಂತಿ ಮಾಡಿರಬಹುದು. ಆದರೆ ನಮ್ಮ ಕೆಎಂಎಫ್ ಏಷ್ಯಾದಲ್ಲೇ ಅತ್ಯಾಧುನಿಕವಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಅಮೂಲ್‍ಗಿಂತಲೂ ಮುಂಚೂಣಿಯಲ್ಲಿದೆ. ಇದನ್ನು ವಿಲೀನ ಮಾಡುವ ಪ್ರಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದರು.

KPCC president, DK Shivakumar, Karnataka, BJP, leadership,

Articles You Might Like

Share This Article