ಪಣಜಿ, ಜ.28- ದೇಶ ರಕ್ಷಣೆಗಾಗಿ ತಮ್ಮನ್ನು ಅರ್ಪಣೆ ಮಾಡಿಕೊಂಡಿರುವ ಸೈನಿಕರಿಗೆ ಮತ್ತು ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಯಲ್ಲಿ ನೀಡಲಾಗಿದ್ದ ಸೌಲಭ್ಯ ಮತ್ತು ಸವಲತ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಿಂಪಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಗೋವಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸೇನೆಯಲ್ಲಿ 1.3 ಲಕ್ಷ ಹುದ್ದೆಗಳು ಖಾಲಿ ಇವೆ. ಅವುಗಳಿಗೆ ಭರ್ತಿ ಮಾಡದೆ ಇರುವುದು ನಾಚಿಕೆಗೇಡಿನ ಸಂಗತಿ ಎಂದರು.
ಈ ಮೊದಲು ಸೈನಿಕರು ಮತ್ತು ಮಾಜಿ ಯೋಧರಿಗಾಗಿ ಉತ್ತಮವಾದ ಆರೋಗ್ಯ ವಿಮೆ ಮತ್ತು ರಿಯಾಯಿತಿ ಸೌಲಭ್ಯದ ಕ್ಯಾಂಟಿನ್ ಒದಗಿಸಲಾಗಿತ್ತು. ಕೇಂದ್ರ ಸರ್ಕಾರ ಆರೋಗ್ಯ ವಿಮೆಯನ್ನು ಪರಿಷ್ಕರಣೆ ಮಾಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ.
ವಿಮಾ ಸೌಲಭ್ಯ ಪಡೆಯಲು ಹಲವು ನಿರ್ಬಂಧಗಳನ್ನು ವಿಸಿದೆ. ಇನ್ನೂ ಕ್ಯಾಂಟಿನ್‍ನಲ್ಲಿ ಖರೀದಿಗೆ 10 ಸಾವಿರ ರೂಪಾಯಿಗಳ ಮಿತಿ ವಿಸಲಾಗಿದೆ. ಪ್ರಸ್ತುತ ಬೆಲೆ ಏರಿಕೆ ಪರಿಸ್ಥಿತಿಯಲ್ಲಿ ಕೇವಲ 10 ಸಾವಿರ ರೂಪಾಯಿಗಳ ಅಗತ್ಯ ವಸ್ತುಗಳನ್ನು ಖರೀದಿ ಮಾಡಿ ಸೈನಿಕರು ಜೀವನ ನಡೆಸಲು ಸಾಧ್ಯವೇ. ಕ್ಯಾಂಟಿನ್‍ನಲ್ಲಿ ಈ ಮೊದಲು ತೆರಿಗೆ ವಿನಾಯಿತಿ ಇತ್ತು, ಈಗ ಜಿಎಸ್‍ಟಿಯಲ್ಲಿ ಶೇ.50ರಷ್ಟನ್ನು ಪಾವತಿಸಬೇಕು ಎಂಬ ನಿಯಮ ಮಾಡಲಾಗಿದೆ. ಈ ಹಿಂದಿನ ಸರ್ಕಾರಗಳು ನೀಡಿದ್ದ ಸೌಲಭ್ಯಗಳನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ದಿವಂಗತ ಲಾಲ್ ಬಹುದೂರ್ ಶಾಸ್ತ್ರಿ ಅವರು ಜೈ ಜವಾನ್-ಜೈ ಕಿಸಾನ್ ಎಂಬ ಘೋಷಣೆ ನೀಡಿದ್ದರು. ಮೋದಿ ಅವರ ಆಡಳಿತದಲ್ಲಿ ರೈತ ವಿರೋ ಕಾನೂನು ರೂಪಿಸಲಾಯಿತು. ಅದನ್ನು ವಿರೋಸಿ ದೆಹಲಿಯಲ್ಲಿ ರೈತರು ಒಂದು ವರ್ಷ ಕಾಲ ಪ್ರತಿಭಟನೆ ನಡೆಸಿದರು, ಏಳು ನೂರು ಮಂದಿ ಸಾವನ್ನಪ್ಪಿದರು. ಪ್ರತಿಭಟನೆಗೆ ಹೆದರಿ ಮೋದಿ ಕಾನೂನನ್ನು ಹಿಂಪಡೆದರು ಆದರೆ ರೈತರನ್ನು ಒಂದು ವರ್ಷ ಕಾಲ ಬೀದಿಯಲ್ಲಿ ಮಲಗುವ ಪರಿಸ್ಥಿತಿ ನಿರ್ಮಿಸಿದರು ಎಂದು ಆರೋಪಿಸಿದರು.
ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಸೇನೆಯಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ, ಇನ್ನೊಂದೆಡೆ ನಿರುದ್ಯೋಗವೂ ಹೆಚ್ಚಿದೆ. ಮೋದಿ ಅವರ ಸರ್ಕಾರ ಚುನಾವಣೆ ವೇಳೆ ನೀಡಿದ್ದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ರೈತರು, ಸೈನಿಕರು, ಯುವಕರು ನೆಮ್ಮದಿಯಾಗಿಲ್ಲ.ಗೋವ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ರಾಜ್ಯಪಾಲರೇ ಒಪ್ಪಿಕೊಂಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಗೋವಾ ಜನ ಕಾಂಗ್ರೆಸ್‍ಗೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಟ್ಟಿದ್ದರು. ಆದರೆ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡಿ ನಮ್ಮ ಶಾಸಕರನ್ನು ಕಸಿದುಕೊಂಡು ಗೋವಾದಲ್ಲಿ ಸರ್ಕಾರ ರಚನೆ ಮಾಡಿತ್ತು. ಈ ಬಾರಿ ಚುನಾವಣೆಯಲ್ಲಿ ಗೋವಾದ ಜನತೆ ಸ್ಥಿರ ಸರ್ಕಾರ ರಚನೆಗೆ ಅಗತ್ಯವಾದ ಬಹುಮತ ನೀಡಲಿದ್ದಾರೆ ಎಂದು ಹೇಳಿದರು.
