ವಾರಕ್ಕೊಂದು ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ : ಡಿಕೆಶಿ

Social Share

ಬೆಂಗಳೂರು,ಡಿ.15- ವಾರಕ್ಕೊಂದು ಸಭೆ ನಡೆಸಿ ಕ್ಷೇತ್ರವಾರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಕಾಂಕ್ಷಿಗಳ ಅರ್ಜಿಗಳು ತುಂಬಾ ಇವೆ,ಯಾರ ಹೆಸರನ್ನು ಸದ್ಯಕ್ಕೆ ಬಹಿರಂಗ ಮಾಡುವುದಿಲ್ಲ. ಪ್ರತಿವಾರ ಸಭೆ ನಡೆಸಲಾಗುವುದು. ಹಂತ ಹಂತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಎಂದರು.

ಬಿಜೆಪಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಭವಿಷ್ಯ ಇಲ್ಲ ಎಂದು ಬಹಳಷ್ಟು ಜನ ಕಾಂಗ್ರೆಸ್ ಸೇರುತ್ತಿದ್ದಾರೆ. ಈಗಾಗಲೇ ಹಿರೇಕೆರೂರಿನ ಮಾಜಿ ಶಾಸಕ ಯು.ಬಿ.ಬಣಕಾರ್ ಕಾಂಗ್ರೆಸ್ ಸೇರಿದ್ದಾರೆ. ಇಂದು ಯಲ್ಲಾಪುರದ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರಿದ್ದಾರೆ.

ಇನ್ನೂ ಹಲವು ಮಂದಿ ಕಾಂಗ್ರೆಸ್ ಸೇರಲು ತಯಾರಾಗಿದ್ದಾರೆ. ವಿಧಾನ ಮಂಡಲ ಅಧಿವೇಶನ ಮುಗಿಯಲಿ ಎಂದು ಕೆಲವರು ಕಾಯುತ್ತಿದ್ದಾರೆ ಎಂದರು.

136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ : ಭವಿಷ್ಯ ನುಡಿದ ಡಿಕೆಶಿ

ಚುನಾವಣೆ ತಯಾರಿ ಸಂಬಂಧಪಟ್ಟಂತೆ ರಾಜ್ಯಾದ್ಯಂತ ಪ್ರವಾಸ ನಡೆಸಲು ಈಗಾಗಲೇ ದೆಹಲಿಯಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗಿದೆ. ಅದರಂತೆ ನಮ್ಮ ಪ್ರವಾಸ ನಡೆಯಲಿದೆ. ಆರಂಭದಲ್ಲಿ ನಾನು ಮತ್ತು ಸಿದ್ದರಾಮಯ್ಯ 20 ಜಿಲ್ಲೆಗಳಲ್ಲಿ ಜೊತೆಯಾಗಿ ಪ್ರವಾಸ ನಡೆಸುತ್ತೇವೆ. ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತೇವೆ. ಉಳಿದ ಜಿಲ್ಲೆಗಳಲ್ಲಿ ಭಾರತ್ ಜೋಡೋ ಯಾತ್ರೆ ನಡೆದಿದೆ. ಅಲ್ಲಿ ಸದ್ಯಕ್ಕೆ ಯಾತ್ರೆ ನಡೆಸುವುದು ಬೇಡ. ಚುನಾವಣೆ ಸಮೀಪ ಬಂದಾಗ ಅಲ್ಲಿ ಕಾರ್ಯಕ್ರಮ ನಡೆಸುವುದು ಸೂಕ್ತ ಎಂದು ಚರ್ಚಿಸಲಾಗಿದೆ.

20 ಜಿಲ್ಲೆಗಳ ನಂತರ ನಾನು ಮತ್ತು ಸಿದ್ದರಾಮಯ್ಯ ಪ್ರತ್ಯೇಕವಾಗಿ ಪ್ರವಾಸ ಹಮ್ಮಿಕೊಳ್ಳುತ್ತೇವೆ. ನಾನು ದಕ್ಷಿಣ ಭಾಗ ಮತ್ತು ಮಧ್ಯ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡರೆ, ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ನಡೆಸುತ್ತಾರೆ. ನಮ್ಮೊಟ್ಟಿಗೆ ತಲಾ 10 ಮಂದಿ ಹಿರಿಯ ನಾಯಕರ ತಂಡ ರಚಿಸಲಾಗಿದೆ. ಈಗಾಗಲೇ ಆಯೋಜಕರಿಗೆ ತಿಳಿಸಲು ಮಾರ್ಗ ನಕ್ಷೆ ಸಿದ್ದವಾಗಿದೆ.

ಜಿ-20 ಶೃಂಗ : ಹಣಕಾಸು ಅಜೆಂಡಾಗಳಿಗೆ ಕೇಂದ್ರೀಯ ಬ್ಯಾಂಕ್‍ಗಳ ಬೆಂಬಲ

ಚುನಾವಣೆ ಸಮೀಪಿಸುತ್ತಿದ್ದಂತೆ ನಾನು ಉತ್ತರ ಕರ್ನಾಟಕ ಭಾಗಕ್ಕೆ ತೆರಳಲಿದ್ದು, ಸಿದ್ದರಾಮಯ್ಯ ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರಚಾರ ನಡೆಸುತ್ತಾರೆ. ಒಟ್ಟಿನಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲೂ ಪ್ರವಾಸ ಮಾಡುತ್ತೇವೆ ಎಂದರು.

ಸದ್ಯಕ್ಕೆ ಹೆಲಿಕಾಫ್ಟರ್‍ನಲ್ಲಿ ಯಾತ್ರೆ ನಡೆಸುವ ಕಾಲ ನಮಗಿನ್ನೂ ಬಂದಿಲ್ಲ. ಚುನಾವಣೆ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡಬೇಕಿರುವುದರಿಂದ ಹೆಲಿಕಾಫ್ಟರ್ ಬಳಕೆ ಮಾಡುತ್ತೇವೆ. ಸದ್ಯಕ್ಕೆ ಬಸ್ ಯಾತ್ರೆ ಮಾಡುತ್ತೇವೆ. ತುರ್ತಾಗಿ ಹೋಗಬೇಕಾದಾಗ ಕಾರು ಬಳಕೆ ಮಾಡುತ್ತೇವೆ. ದೂರದೂರಿಗೆ ಪ್ರಯಾಣ ಮಾಡಬೇಕಾದರೆ ವಿಮಾನದಲ್ಲಿ ಪ್ರಯಾಣಿಸುತ್ತೇವೆ. ಜನರ ಧ್ವನಿಯಾಗಿ, ಜನರ ನಡುವೆ ಇರುತ್ತೇವೆ ಎಂದರು.

ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹಮ್ಮದ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.

KPCC president, DKSivakumar, Congress, candidates,

Articles You Might Like

Share This Article