ಒಂದೇ ಮತದಿಂದ ಗೆದ್ದು ಇತಿಹಾಸ ಬರೆದಿದ್ದ ಧ್ರುವನಾರಾಯಣ್

Social Share

ಬೆಂಗಳೂರು,ಮಾ.11- ಹೃದಯಾಘಾತದಿಂದ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಕೆ.ಧ್ರುವನಾರಾಯಣ್ ಅವರು 2004ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಮತದಿಂದ ಗೆದ್ದು ಇತಿಹಾಸ ಬರೆದಿದ್ದರು.

ಭಾರತದ ಇತಿಹಾಸದಲ್ಲೇ ಗ್ರಾಮಪಂಚಾಯ್ತಿ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ಒಂದೇ ಮತದಿಂದ ಗೆದ್ದು ಇತಿಹಾಸ ಬರೆದಿರುವ ದಾಖಲೆ ಅವರ ಹೆಸರಿನಲ್ಲೇ ಇದೆ. ಚಾಮರಾಜನಗರ ಜಿಲ್ಲೆ ಸಂತೆಮಾರನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಆರ್.ಕೆ.ಧ್ರುವನಾರಾಯಣ, ಬಿಜೆಪಿ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರನ್ನು ಒಂದು ಮತದಿಂದ ಪರಾಭವಗೊಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧೃವ ನಾರಾಯಣ್ ನಿಧನ

ಕೊನೆ ಕ್ಷಣದವರೆಗೂ 20-20 ಕ್ರಿಕೆಟ್ ಪಂದ್ಯದಂತೆ ರೋಚಕ ಘಟ್ಟ ತಲುಪಿದ್ದ ಮತ ಎಣಿಕೆ ಕೊನೆಯ ಸುತ್ತಿನ ಮನ ಎಣಿಕೆ ಮುಗಿದಾಗ ಒಂದು ಮತದ ಅಂತರದಲ್ಲಿ ಗೆದ್ದು ವಿಜಯದ ನಗೆ ಬೀರಿದ್ದರು.

2004ರಲ್ಲಿ ಇವಿಎಂ ಬರುವ ಬದಲು ಬ್ಯಾಲೆಟ್ ಮತದಾನದ ಪದ್ದತಿ ಇತ್ತು. ಒಂದು ಮತದಿಂದ ಗೆದ್ದಾಗ ಎದುರಾಳಿ ಕೃಷ್ಣಮೂರ್ತಿ ಅವರು ಮತ್ತೆ ಮರು ಎಣಿಕೆ ಮತದಾನ ನಡೆಯಬೇಕೆಂದು ಮನವಿ ಮಾಡಿದ್ದರು.

ಜೈಲಿಗೆ ಹಾಕಬಹುದು ನನ್ನ ಉತ್ಸಾಹ ಕುಂದಿಸಲು ನಿಮ್ಮಿಂದ ಸಾಧ್ಯವಿಲ್ಲ : ಮನೀಶ್ ಸಿಸೋಡಿಯಾ

ಅಂತಿಮವಾಗಿ ಚುನಾವಣಾ ಆಯೋಗ ಮರು ಎಣಿಕೆಗೆ ಸೂಚನೆ ನೀಡಿತ್ತು. ಆಗಲೂ ಕೂಡ ಧ್ರುವನಾರಾಯಣ ಒಂದೇ ಮತದಲ್ಲಿ ಗೆದ್ದು ದಾಖಲೆ ಬರೆದರು. 2006ರ ನಂತರ ಕ್ಷೇತ್ರ ಪುನರ್‍ವಿಂಗಡಣೆಯಾದ ಬಳಿಕ ಸಂತೆಮಾರನಹಳ್ಳಿ ವಿಧಾನಸಭಾ ಕ್ಷೇತ್ರ ಬಹುತೇಕ ಕೊಳ್ಳೆಗಾಲ ಕ್ಷೇತ್ರದಲ್ಲಿ ಸೇರ್ಪಡೆಯಾಯಿತು.

ಒಂದು ಮತದಿಂದ ಸೋತಿದ್ದ ಕೃಷ್ಣಮೂರ್ತಿ ಬಳಿಕ ಎರಡು ಬಾರಿ ಚುನಾವಣೆಯಲ್ಲಿ ಸ್ರ್ಪಧಿಸಿ ಕೆಲವೇ ಸಾವಿರ ಮತಗಳ ಅಂತರದಿಂದ ಪರಾಭವಗೊಂಡರು. ಈಗಲೂ ಕೂಡ ಅವರು ಗೆಲ್ಲಲು ಸಾಧ್ಯವಾಗಿಲ್ಲ.

KPCC, working, president, R Dhruvanarayana, passes away,

Articles You Might Like

Share This Article