ನವದೆಹಲಿ,ಜ.7- ಚೀನಾ ಬಳಿಕ ಅಮೆರಿಕಾವನ್ನು ಕಾಡುತ್ತಿರುವ ಕೋವಿಡ್ನ ರೂಪಾಂತರ ಕ್ರಾಕೆನ್ ಉಪತಳಿ ಕ್ರಮೇಣ ಜಗತ್ತಿನ 28 ದೇಶಗಳಲ್ಲಿ ವ್ಯಾಪಿಸಲಾರಂಭಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೋವಿಡ್-19 ಹಾಗೂ ಅದರ ರೂಪಾಂತರಿಗಳಲ್ಲಿ ಕ್ರಾಕೆನ್ ಹೆಚ್ಚು ವೇಗವಾಗಿ ಹರಡುವ ಸೋಂಕಾಗಿದೆ. ಇದರಿಂದ ಅಮೆರಿಕಾದಲ್ಲಿ ಆಸ್ಪತ್ರೆ ದಾಖಲಾಗುವ ಪ್ರಮಾಣ ಶೇ.16.1ರಷ್ಟು ಹೆಚ್ಚಾಗಿದೆ.
ಡಿಸೆಂಬರ್ ಅರಂಭದಲ್ಲಿ ಅಮೆರಿಕಾದಲ್ಲಿ ಕಾಣಿಸಿಕೊಂಡ ಸೋಂಕು ಮೂರು ವಾರಗಳಲ್ಲಿ ಶೇ.41ರಷ್ಟು ಮಂದಿಯಲ್ಲಿ ಪಾಸಿಟಿವ್ ಆಗಿದೆ. ಈ ವಾರ ಅಮೆರಿಕಾದ ಸೋಂಕಿನಲ್ಲಿ ಕ್ರಾಕೆನ್ ಪಾಲು ಶೇ.75ರಷ್ಟಾಗಿಲಿದೆ ಎಂದು ಕೇಂದ್ರ ರೋಗ ನಿಯಂತ್ರಣ ಹಾಗೂ ಮುಂಜಾಗೃತಾ ಕೇಂದ್ರ ಅಂದಾಜಿಸಿದೆ.
ಕನ್ನಡಕ್ಕೆ ಸ್ಪಂದಿಸದ ಬ್ಯಾಂಕ್ಗಳನ್ನ ಧಿಕ್ಕರಿಸಿ : ದೊಡ್ಡರಂಗೇಗೌಡರು
ಅಮೆರಿಕಾದ ನ್ಯೂಯಾರ್ಕ್, ನ್ಯೂಜರ್ಸಿ, ರೋಡೆ ಇಸ್ಲ್ಯಾಂಡ್, ವೆರ್ಮೌಂಟ್, ಮೆಸ್ಸಾಚುಸ್ಟೆಟಸ್ ಸೇರಿದಂತೆ ಹಲವು ಪ್ರಾಂತ್ಯಗಳಲ್ಲಿ ಎಕ್ಸ್ಬಿಬಿ.1.5 ಎಂದು ಗುರುತಿಸಲಾಗಿದ್ದ ಕ್ರಾಕೆನ್ ಹಾವಳಿ ಹೆಚ್ಚಾಗಿದೆ.
ಇದು ಕೋವಿಡ್ನ ರೂಪಾಂತರಿ ಓಮಿಕ್ರಾನ್ನ ಎರಡು ಉಪತಳಿಗಳ ಮಿಶ್ರಣವಾಗಿದೆ. ಸಾಮಾನ್ಯವಾಗಿ ಕೋವಿಡ್ನ ಎಲ್ಲಾ ರೋಗ ಲಕ್ಷಣಗಳು ಇಲ್ಲಿಯೂ ಕಂಡು ಬರುತ್ತವೆ. ಮೂರು ಸೋರುವುದು, ಗಂಟಲು ಕೆರೆತ, ಕೆಮ್ಮ, ಜ್ವರಗಳು ಸಾಮಾನ್ಯ ಲಕ್ಷಣಗಳಾಗಿವೆ. ಚಳಿಗಾಲದಲ್ಲಿ ಈ ಎಲ್ಲಾ ಲಕ್ಷಣಗಳು ಸಾಮಾನ್ಯ ಎಂದು ನಿರ್ಲಕ್ಷ್ಯ ವಹಿಸುವಂತಿಲ್ಲ ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ಸಲಿಂಗ ವಿವಾಹ ಮಾನ್ಯತೆ ಬಯಸುವ ಅರ್ಜಿಗಳು ಸುಪ್ರೀಂ ಪೀಠಕ್ಕೆ ವರ್ಗಾವಣೆ
ಕ್ರಾಕೆನ್ ಅಪಾಯಕಾರಿಯಲ್ಲ ಎಂದು ಭಾಗವಿಸಲಾಗಿದ್ದರೂ ಸೋಂಕು ಹಬ್ಬುವ ವೇಗ ಮತ್ತು ಆಸ್ಪತ್ರೆ ದಾಖಲಾಗುವ ಪ್ರಮಾಣ ನೋಡಿದರೆ ಸೋಂಕನ್ನು ನಿರ್ಲಕ್ಷಿಸುವುದು ಅಪಾಯಕಾರಿ ಎಂದು ವೈದ್ಯರು ತಿಳಿಸಿದ್ದಾರೆ.
Kraken, COVID, symptoms, strain, sweeping, through, 28 countries,