ಸಂಗೊಳ್ಳಿ ರಾಯಣ್ಣ ಸಮಾಧಿಗೆ ತರಳಬಾಳು ಶ್ರೀಗಳಿಂದ ಗೌರವ ಪ್ರಾರ್ಥನೆ

Social Share

ಸಿರಿಗೆರೆ,ನ.13- ಕ್ರಾಂತಿವೀರ, ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ಮತ್ತು ಸಮಾಧಿ ಸ್ಥಳವಾದ ಬೆಳಗಾವಿಯ ನಂದಗಡಕ್ಕೆ ತಳಬಾಳು ಶ್ರೀಗಳು ಭೇಟಿ ನೀಡಿ ರಾಯಣ್ಣ ಪುತ್ಥಳಿಗೆ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಮ್ಮ ಸಂದೇಶ ರವಾನಿಸಿರುವ ಶ್ರೀ ಜಗದ್ಗುರುಗಳವರು ರಾಯಣ್ಣ ತನ್ನ ಹೋರಾಟ ಮತ್ತು ತ್ಯಾಗದಿಂದ ಮುಂದಿನ ಪೀಳಿಗೆಗೆ ಸೂರ್ತಿಯಾದವರು. ಕಿತ್ತೂರು ಸಾಮ್ರಾಜ್ಯದ ಮೇಲಿನ ಅವನ ನಿರಂತರ ಪ್ರೀತಿ ಮತ್ತು ಚೆನ್ನಮ್ಮ ರಾಣಿಗೆ ನಿಷ್ಠೆಯ ಸೇವೆ, ಆದರ್ಶ, ಸ್ವಾತಂತ್ರ್ಯ ಹೋರಾಟ, ಸಾಹಸ ಹಾಗೂ ನಾಡ ಪ್ರೇಮದಿಂದ ಲೆಜೆಂಡರಿ ವಾರಿಯರ್ ಎಂದು ಗೌರವಿಸಲ್ಪಟ್ಟನು. ಸಂಗೊಳ್ಳಿ ರಾಯಣ್ಣನಂತಹ ದೇಶಪ್ರೇಮಿಗೆ ಇದಕ್ಕಿಂತ ಉತ್ತಮವಾದ ವಿವರಣೆ ಇರಲಾರದು ಎಂದು ಇತಿಹಾಸದಲ್ಲಿ ದಾಖಲಾಗಿದೆ.

ಟಿಪ್ಪು ಪ್ರತಿಮೆ ನಿರ್ಮಿಸಿದರೆ ಜನ ಕಾಂಗ್ರೆಸಿಗರನ್ನು ಮನೆಗೆ ಕಳಿಸುತ್ತಾರೆ : ಜೋಷಿ

ಬ್ರಿಟಿಷರು ತಮ್ಮ ಕುಖ್ಯಾತ ಆಡಳಿತದಿಂದ ಡಾಕ್ಟ್ರಿನ್ ಆಫ್ ಲ್ಯಾಪ್ಸ್‍ಅನ್ನು ಅನುಸರಿಸಿ ಕಿತ್ತೂರು ರಾಜ್ಯವನ್ನು ಸ್ವಾೀಧಿನಪಡಿಸಿಕೊಳ್ಳಲು ಬಯಸಿದ್ದರು. ವಿರುದ್ಧ ಹೋರಾಡಿ ನೇಣಿಗೆ ಕೊರಳೊಡ್ಡಿದ ಸಂದರ್ಭದಲ್ಲಿಯೂ ಸಂಗೊಳ್ಳಿ ರಾಯಣ್ಣ ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರೆಸುವದಾಗಿದೆ ಹಾಗೂ ಬ್ರಿಟೀಷರನ್ನು ಹೊಡೆದೋಡಿಸಲು ಮನೆಗೊಬ್ಬ ರಾಯಣ್ಣ ಹುಟ್ಟಲಿ ಎಂದು ಹೇಳಿರುವುದು ರಾಯಣ್ಣನ ಪರಾಕ್ರಮ ಮತ್ತು ದೃಢಸಂಕಲ್ಪದ ದ್ಯೋತಕವಾಗಿದೆ.

ರಾಯಣ್ಣನಂತಹ ಸ್ವಾತಂತ್ರ್ಯ ಹೋರಾಟಗಾರರು ಎಂದಿಗೂ ಜಾತಿಗೆ ಸೀಮಿತರಾದವರಲ್ಲ ಅವರು ರಾಷ್ಟದ ಆಸ್ತಿ ಮುಂದಿನ ಪೀಳಿಗೆಗೆ ಸದಾ ಆದರ್ಶಪ್ರಾಯವಾದವರು ಎಂದು ಶ್ರೀ ಜಗದ್ಗುರುಗಳು ಅಭಿಪ್ರಾಯಪಟ್ಟಿದ್ದಾರೆ.

ಮೋದಿ ನಾಮಬಲವಿಲ್ಲದೆ ಬಿಜೆಪಿಯವರ ಯೋಗ್ಯತೆಗೆ ಠೇವಣಿ ಕೂಡ ಸಿಗಲ್ಲ : ಜೆಡಿಎಸ್

ಕಿತ್ತೂರು ಸಂಸ್ಥಾನದ ಮೇಲೆ ಅಪಾರ ಗೌರವ ಹೊಂದಿದ್ದ ಹೊಂದಿರುವ ಶ್ರೀ ತರಳಬಾಳು ಜಗದ್ಗುರುಗಳವರು ಕಿತ್ತೂರು ಕೋಟೆಯ ಅಭಿವೃದ್ಧಿಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಿರುವುದಲ್ಲದೆ ಬೃಹನ್ಮಠದಿಂದ ಧನ ಸಹಾಯವನ್ನು ಈ ಹಿಂದೆ ನೀಡಿರುವುದನ್ನು ಸ್ಮರಿಸಬಹುದು.

Articles You Might Like

Share This Article