ಬಾಸ್ಕೆಟ್ ಬಾಲ್, ಫುಟ್ ಬಾಲ್‌ನಲ್ಲಿ ಕ್ರಿಸ್ತು ಜಯಂತಿ ಕಾಲೇಜು ಚಾಂಪಿಯನ್ ಶಿಪ್

Social Share

ಬೆಂಗಳೂರು,ಆ.2- ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಆಯೋಜಿಸಿದ್ಧ ಅಂತರ ಕಾಲೇಜು ಕ್ರೀಡಾಕೂಟದಲ್ಲಿ ಪುರುಷರ ಬಾಸ್ಕೆಟ್ ಬಾಲ್ ಮತ್ತು ಫುಟ್ ಬಾಲ್ ಚಾಂಪಿಯನ್ ಶಿಪ್ -2022 ಕ್ರಿಸ್ತು ಜಯಂತಿ ಪಾಲಾಗಿದೆ.

ನಗರದ ಸೆಂಟ್ ವಿನ್ಸೆಂಟ್ ಪಲ್ಲೋಟಿ ಕ್ಯಾಂಪಸ್‍ನಲ್ಲಿ ಆಯೋಜಿಸಲಾಗಿದ್ದ ಪುರುಷರ ಫುಟ್ ಬಾಲ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಎಚ್ ಬಿ ಕೆ ಪದವಿ ಕಾಲೇಜು ವಿರುದ್ದ 5-3 ಅಂತರದಲ್ಲಿ ಜಯ ಗಳಿಸುವ ಮೂಲಕ ಕ್ರಿಸ್ತು ಜಯಂತಿ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕೋಲಾರದ ಎಸ್ ಡಿ ಸಿ ಕಾಲೇಜು ವಿರುದ್ದದ ಪ್ರಿಕ್ವಾರ್ಟರ್ನ ಮೊದಲ ಪಂದ್ಯದಲ್ಲಿ 2-0 ಗೋಲುಗಳಿಂದ ಜಯ, ಎರಡನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೆಜಿಎಫ್ ಎಸ್ ಬಿ ಎಮ್ ಜೈನ್ ಕಾಲೇಜು ವಿರುದ್ದ 3-0 ಗೋಲುಗಳಿಂದ ಮತ್ತು ಮೂರನೇ ಪಂದ್ಯವನ್ನು ಡಾ.ಎಸ್.ಆರ್ ಚಂದ್ರಶೇಖರ್ ಸ್ಪೀಚ್ ಅಂಡ್ ಇಯರಿಂಗ್ ಇನ್ಸ್ಟಿಟ್ಯೂಟ್ ವಿರುದ್ಧ 2-0 ಅಂತರದಲ್ಲಿ ಜಯಗಳಿಸಿತು.

ಗೌರಿಬಿದನೂರಿನ ಎಇಎಸ್ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಪುರುಷರ ಬಾಸ್ಕೆಟ್ ಬಾಲ್ ವಿಭಾಗದ ಫೈನಲ್ ಪಂದ್ಯದಲ್ಲಿ ಗೌರಿಬಿದನೂರಿನ ಎಇಎಸ್ ನ್ಯಾಷನಲ್ ಕಾಲೇಜಿನ ವಿರುದ್ಧ 64-41 ರ ಅಂತರದಲ್ಲಿ ಕ್ರಿಸ್ತು ಜಯಂತಿ ಕಾಲೇಜು ಜಯಗಳಿಸಿತು.

ಪ್ರಿಕ್ವಾರ್ಟರ್ನ ಅಂತಿಮ ಪಂದ್ಯದಲ್ಲಿ ಕ್ರಿಸ್ತು ಜಯಂತಿ ಕಾಲೇಜು ಚಿಕ್ಕಬಳ್ಳಾಪುರದ ಎಸ್ ಕೆ ವಿ ದೈಹಿಕ ಶಿಕ್ಷಣ ಕಾಲೇಜು ವಿರುದ್ಧ 40-28 ರ ಅಂತರದಲ್ಲಿ ಜಯಗಳಿಸಿ, 2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೋಲಾರದ ಸೇಂಟ್ಎಸ್ ಡಿ ಸಿ ಕಾಲೇಜು ವಿರುದ್ಧ 60-42 ರ ಅಂತರದಲ್ಲಿ ಜಯಗಳಿಸಿತು. ಸೇಂಟ್ ಅಲೋಶಿಯಸ್ ಪದವಿ ಕಾಲೇಜು ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ 50-30 ರ ಅಂತರದಲ್ಲಿ ಜಯಗಳಿಸಿತು.

ಈ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ಡಾ.ಆಗಸ್ಟಿನ್‍ಜಾರ್ಜ್, ಉಪ ಪ್ರಾಂಶುಪಾಲರಾದ ಸಿಎಫ್‍ಒ ಲಿಜೋ ಪಿ ಥಾಮಸ್ ಮತ್ತು ಕಾಲೇಜಿನ ಆಡಳಿತ ಮಂಡಳಿ ಶುಭ ಕೋರಿದರು.

Articles You Might Like

Share This Article