ಕೆಆರ್‌ಎಸ್ ಜಲಾಶಯಕ್ಕೆ ಕಾದಿದೆಯಾ ಅಪಾಯ..?

Spread the love

KRS-4

ಬೆಂಗಳೂರು,ಸೆ.27-ಕಾವೇರಿ ಕಣಿವೆ ಜನರ ಜೀವನಾಡಿಯಾದ ಕೆಆರ್‍ಎಸ್ ಜಲಾಶಯಕ್ಕೆ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಾಗಿ ಅದರ ಸುತ್ತಮುತ್ತಲಿನ ಜನರು ಅಪಾಯದಲ್ಲಿ ಜೀವನ ನಡೆಸುವಂತಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಕೆಆರ್‍ಎಸ್ ಸುತ್ತಮುತ್ತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು ಅಲ್ಲಿ ಬಳಕೆಯಾಗುತ್ತಿರುವ ಸ್ಫೋಟಕಗಳಿಂದ ಜಲಾಶಯದ ಭದ್ರತೆಗೆ ಅಪಾಯ ಎದುರಾಗಿದೆ ಎಂದು ಈಗಾಗಲೇ ಪೊಲೀಸ್ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ. ಇದರ ಮಧ್ಯೆ ಎರಡು ದಿನಗಳ ಹಿಂದೆ ನಡೆದ ಘಟನೆವೊಂದು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ. ದಿನಾಂಕ 25/9ರ ಮಧ್ಯಾಹ್ನ 2:37ರ ವೇಳೆ ಕೆಆರ್‍ಎಸ್ ಸುತ್ತಮುತ್ತಲಿನ ಪ್ರದೇಶ ಕಂಪನಕ್ಕೊಳಗಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

ಅಲ್ಲದೆ ಪ್ರತಿದಿನ ನಡೆಯುತ್ತಿರುವ ವಿದ್ಯಮಾನಗಳ ಕುರಿತಾಗಿ ನಾವು ಸರ್ಕಾರಕ್ಕೆ ಮಾಹಿತಿ ನೀಡುತ್ತಿರುವುದಾಗಿ ಹೇಳಿರುವ ಕೆಎಸ್‍ಎನ್‍ಡಿಎಂಸಿ ನಿರ್ದೇಶಕರು, ಈ ಹಿಂದೆ 2011ರಲ್ಲೂ ಇಂತಹ ಘಟನೆ ನಡೆದಿತ್ತು ಎಂದು ತಿಳಿಸಿದ್ದಾರೆ. ಇನ್ನು ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್?ಟಿಐ ಕಾರ್ಯಕರ್ತರೊಬ್ಬರು ನೀಡಿದ ದೂರಿನನ್ವಯ ಮಂಡ್ಯ ಜಿಲ್ಲಾ ಪೊಲೀಸ್? ವರಿಷ್ಠಾಧಿಕಾರಿ ಕೆಆರ್‍ಎಸ್ ಸುತ್ತಲೂ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕುರಿತು ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಶ್ರೀರಂಗಪಟ್ಟಣ ವೃತ್ತದ ಡಿವೈಎಸ್‍ಪಿ ವಿಶ್ವನಾಥ್ ಅವರು ವರದಿ ಸಿದ್ಧಪಡಿಸಿದ್ದು, ಕೆಆರ್‍ಎಸ್‍ಗೆ ಅಪಾಯವಿದೆ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.

ಪಾಂಡವಪುರ ತಾಲೂಕಿನ ಚಿನಕುರಳಿ, ಬೇಬಿ ಬೆಟ್ಟದ ಕಾವಲು, ಹೊನಗಾನಹಳ್ಳಿ, ಬನ್ನಂಗಾಡಿ ಗ್ರಾಮಗಳ ಬೇಬಿ ಬೆಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಹಲವು ಕಲ್ಲು ಕ್ವಾರೆಗಳು ಅಕ್ರಮವಾಗಿ ನಡೆಯುತ್ತಿದ್ದು, ಇದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ವ್ಯವಸಾಯಕ್ಕೆ ತೊಂದರೆಯಾಗಿ, ಕಲ್ಲು ಸಿಡಿತಕ್ಕೆ ಬಳಸುವ ಸ್ಫೋಟಕಗಳಿಂದ ಮನೆಗಳು ಜಖಂಗೊಂಡಿವೆ. ಭಾರೀ ಸ್ಫೋಟಕ ಬಳಕೆಯಿಂದ ಕೃಷ್ಣರಾಜಸಾಗರ ಜಲಾಶಯಕ್ಕೂ ಗಂಡಾಂತರವಿದೆ ಎಂಬ ಆತಂಕ ವ್ಯಕ್ತವಾಗಿದೆ.

Facebook Comments

Sri Raghav

Admin