ಕೆಆರ್‌ಎಸ್‌ನಿಂದ 75000 ಕ್ಯೂಸೆಕ್ ನೀರು ಬಿಡುಗಡೆ

Social Share

ಮೈಸೂರು, ಜು.11- ಕಳೆದೊಂದು ವಾರದಿಂದ ಮಡಿಕೇರಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಕಾವೇರಿ ಜಲಾನಯನ ಪ್ರದೇಶದಲ್ಲಿ ಹರಿಯುತ್ತಿದೆ. ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜಸಾಗರ ಜಲಾಶಯದಿಂದ 75000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು ಶ್ರೀರಂಗಪಟ್ಟಣದಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಐತಿಹಾಸಿಕ ವೆಲ್ಲೇಸ್ಲಿ ಸೇತುವೆಗೆ ತೆರಳುವ ಮಾರ್ಗದಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ನದಿಯ ಬಳಿ ನಾಗರಿಕರು ತೆರಳದಂತೆ ಪ್ರವೇಶ ನಿರ್ಬಂಧಿಸಲಾಗಿದೆ. ಕೆಆರ್‌ಎಸ್‌ ಜಲಾಶಯದಲ್ಲಿ ಒಳಹರಿವಿನಿಲ್ಲಿ ಹೆಚ್ಚಳವಾಗಿದ್ದು, 50ಸಾವಿರ ಕ್ಯೂಸೆಕ್ ಹೆಚ್ಚಳವಾಗಿದೆ. ಜಲಾಶಯದ ಹೊರಹರಿವು ಕೂಡ ಭಾರೀ ಹೆಚ್ಚಳವಾಗಿದ್ದು 75000ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ.

ಹೆಚ್ಚಿನ ನೀರು ಬಿಡುಗಡೆಯಾದ ಕಾರಣ ಜಲಾಶಯದ ಕೆಳಗೆ ನದಿಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸುರಕ್ಷಿತ ಸ್ಥಳಕ್ಕೆ ಜನರಿಗೆ ತೆರಳಲು ಸೂಚಿಸಲಾಗಿದೆ. ಪ್ರವಾಹದಿಂದ ರಂಗನತಿಟ್ಟು ಪಕ್ಷಿಧಾಮ ಜಲಾವೃತವಾಗಿದೆ.

Articles You Might Like

Share This Article