ಅಲ್ಲಾ ಹೋ ಅಕ್ಬರ್, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಬೇಕಿತ್ತೇ..?”

Spread the love

ಶಿವಮೊಗ್ಗ, ಮಾ.13- ಭದ್ರಾವತಿ ಕಬಡ್ಡಿ ಪಂದ್ಯಾವಳಿ ವೇಳೆ ಅಲ್ಲಾ ಹೋ ಅಕ್ಬರ್, ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದ್ದರೆ ಕಾಂಗ್ರೆಸ್‍ನವರಿಗೆ ಖುಷಿಯಾಗುತ್ತಿತ್ತೇ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿಯಲ್ಲಿ ಕಬಡ್ಡಿ ಪಂದ್ಯಾವಳಿ ವೇಳೆ ನಡೆದ ಘಟನೆಯಲ್ಲಿ ಜೈಶ್ರೀರಾಮ್ ಎಂದು ಕೂಗಿದ್ದಕ್ಕೆ ಕಾಂಗ್ರೆಸ್ ಈ ರೀತಿ ಪ್ರತಿಭಟನಾ ಸಮಾವೇಶ ನಡೆಸುತ್ತಿದೆ.

ಘಟಾನುಘಟಿಗಳು ಭಾಗವಹಿಸುತ್ತಿದ್ದಾರೆ. ಆದರೆ, ಇದನ್ನು ನಡೆಸುವ ಮುಂಚೆ ಈ ನಾಯಕರುಗಳು ಭದ್ರಾವತಿಗೆ ಹೋಗಿ ಪಂದ್ಯಾವಳಿಯಲ್ಲಿ ಭಾಗವಹಿಸಿದವರ ಮಾತು ಆಲಿಸಲಿ ಎಂದು ಸಲಹೆ ನೀಡಿದರು. ಪಂದ್ಯಾವಳಿಯಲ್ಲಿ ರನ್ನರ್‍ಅಪ್ ಆದ ತಂಡವು ಭಾರತ್ ಮಾತಾ ಕಿ ಜೈ, ಜೈಶ್ರೀರಾಮ್ ಎಂದು ಕೂಗಿದ್ದಾರೆ.

ಈ ಘೋಷಣೆ ಯಾಕೆ ಶಾಸಕ ಸಂಗಮೇಶ್ವರ್ ಮತ್ತು ಅವರ ಪುತ್ರರಿಗೆ ಹಾಗೂ ಬೆಂಬಲಿಗರಿಗೆ ನೋವಾಯಿತೋ ಗೊತ್ತಿಲ್ಲ ಎಂದರು. ಹಾಗಾದರೆ ಪಾಕಿಸ್ತಾನ್ ಜಿಂದಾಬಾದ್ ಅಥವಾ ಅಲ್ಲಾ ಹೋ ಅಕ್ಬರ್ ಎಂದು ಹೇಳಿದ್ದರೆ ಶಾಸಕ ಸಂಗಮೇಶ್ ಖುಷಿ ಪಡುತ್ತಿದ್ದರೇ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಭದ್ರಾವತಿ ಘಟನೆಯನ್ನು ಕಾಂಗ್ರೆಸ್‍ನವರು ಸ್ಪರ್ಧಾ ಮನೋಭಾವದಲ್ಲಿ ತೆಗೆದುಕೊಳ್ಳಬೇಕಿತ್ತು. ಹಾಗೆ ಮಾಡದೇ ಸಮಾವೇಶ ನಡೆಸುತ್ತಿರುವುದು ಸರಿಯಲ್ಲ. ದೇಶದ ಜನ, ರಾಜ್ಯದ ಜನ ಅದರಲ್ಲೂ ಭದ್ರಾವತಿಯವರು ಇದನ್ನು ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಇದನ್ನೇ ಮುಂದುವರೆಸಿಕೊಂಡು ಹೋದರೆ ಆ ಪಕ್ಷ ಅಧೋಗತಿಗೆ ಹೋಗುವುದರಲ್ಲಿ ಅನುಮಾನವಿಲ್ಲ ಎಂದರು.

ಗೆದ್ದ ತಂಡಗಳು ಸಂಭ್ರಮಾಚರಣೆ ಮಾಡೋದು, ಘೋಷಣೆ ಕೂಗೋದು ಸಹಜ. ಆದರೆ ಇದಕ್ಕಾಗಿ ಇಷ್ಟು ದೊಡ್ಡಮಟ್ಟದ ಪ್ರತಿಭಟನೆಗೆ ಸಂಗಮೇಶ್ ಮುಂದಾಗಬಾರದಿತ್ತು ಎಂದು ಈಶ್ವರಪ್ಪ ಹೇಳಿದರು.

Facebook Comments