ನನಗೆ ಮಂತ್ರಿ ಸ್ಥಾನ ಬೇಡವೇ ಬೇಡ : ಕೆ.ಎಸ್.ಈಶ್ವರಪ್ಪ

Social Share

ಬೆಂಗಳೂರು,ಫೆ.3- ನನಗೆ ಮಂತ್ರಿ ಸ್ಥಾನ ನೀಡುವುದು ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಅವರನ್ನು ಭೇಟಿ ಮಾಡಿದ ವೇಳೆ ನನಗೆ ಮಂತ್ರಿ ಸ್ಥಾನ ಬೇಡವೇ ಬೇಡ ಎಂದು ಹೇಳಿದ್ದೇನೆ. ಸಂಪುಟ ವಿಸ್ತರಣೆ ಮಾಡಲು ಯಾವ ಸಮಸ್ಯೆ ಇದೆ ಎಂದು ಗೊತ್ತಿಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಸಂಪುಟ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದೆ. ಅವರು ಕೂಡ ಭರವಸೆ ನೀಡಿದ್ದರು. ಆದರೆ ಈಗ ಅವರಿಗೆ ಏನೇನು ಸಮಸ್ಯೆ ಇದೀಯೋ ಗೊತ್ತಿಲ್ಲ . ನನಗೆ ಮಾತ್ರ ಸಚಿವ ಸ್ಥಾನ ನನಗೆ ಬೇಡ ಎಂದು ಹೇಳಿ ಬಂದಿದ್ದೇನೆ. ಈ ಹಿಂದೆ ಸಹ ಹೇಳಿದ್ದು ಇವತ್ತು ಸಿಎಂ ಭೇಟಿ ಮಾಡಿದಾಗಲೂ ಹೇಳಿ ಬಂದಿದ್ದೇನೆ ಎಂದರು.

ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?

ಗುತ್ತಿಗೆದಾರರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಯಾರಿಗೂ ಕನಸು ಬಿದ್ದಿರಲಿಲ್ಲ. ಅವರು ಮಲಗಿದ್ದು ಒಂದು ಕಡೆ ಪತ್ರ ಸಿಕ್ಕಿದ್ದು ಮತ್ತೊಂದು ಕಡೆ ಆದರೂ ನನಗೆ ಕ್ಲೀನ್‍ಚಿಟ್ ಸಿಕ್ಕಿದೆ ಎಂದು ಸಮರ್ಥಿಸಿಕೊಂಡರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರಪ್ಪ, ಅವರು ತಿಹಾರ್ ಜೈಲಿಗೆ ಹೋಗಿದ್ದು ಯಾಕೆ ಎಂಬುದನ್ನು ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಅಪ್ಪಿತಪ್ಪಿ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ಹೆಚ್ಚಿನ ವಹಿವಾಟು ನಡೆಸೀರಿ ಜೋಕೆ.. !

ಇಡಿ, ಐಟಿ, ಸಿಬಿಐ ಏಕೆ ತನಿಖೆ ಮಾಡುತ್ತಿವೆ? ಭ್ರಷ್ಟಾಚಾರ, ಅಕ್ರಮ ಹಣ ವಿಚಾರವಾಗಿ ಅಲ್ಲವೇ? ಕಂತೆ ಕಂತೆ ನೋಟು ಸಿಕ್ಕಿದ್ದು ಸುಳ್ಳಾ? ಈಗ ಬಸ್ ಯಾತ್ರೆ ವೇಳೆ ಭ್ರಷ್ಟಾಚಾರ ಮಾತನಾಡುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.

KS Eshwarappa, cabinet, CM Bommai,

Articles You Might Like

Share This Article