ಬೆಂಗಳೂರು, ಫೆ.16- ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವ ಕುರಿತು ಸಚಿವ ಈಶ್ವರಪ್ಪ ಅವರು ನೀಡಿದ ಹೇಳಿಕೆಯನ್ನು ನಿಲುವಳಿ ಸೂಚನೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ನೀಡಿದ್ದ ಸೂಚನೆಯನ್ನು ಸಭಾಪತಿ ತಿರಸ್ಕರಿಸಿದ್ದು, ಚರ್ಚೆಗೆ ಪಟ್ಟು ಹಿಡಿದು ಕಾಂಗ್ರೆಸ್ ಧರಣಿ ನಡೆಸಿದ್ದರಿಂದ ಮಧ್ಯಾಹ್ನದವರೆಗಿನ ಕಲಾಪ ಅಸ್ಥವ್ಯಸ್ಥವಾಯಿತು.
ಇಂದು ವಿಧಾನ ಪರಿಷತ್ ಕಲಾಪದ ಆರಂಭದಲ್ಲೇ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ನಿಲುವಳಿ ಸೂಚನೆಯ ಪೂರ್ವ ಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದರು. ಮೊದಲು ಪ್ರಶ್ನೋತ್ತರ ಕೈಗೆತ್ತಿಕೊಳ್ಳಿ ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದರು. ಎರಡು ಕಡೆಯಿಂದ ವಾಗ್ವಾದಗಳು ಹೆಚ್ಚಾದಾಗ ಕೆಲ ಕಾಲ ಕಲಾಪವನ್ನು ಮುಂದೂಡಲಾಯಿತು, ಮತ್ತೆ ಸದನ ಸಮಾವೇಶಗೊಂಡಾಗ ಸಭಾಪತಿ ಬಸವರಾಜ ಹೊರಟ್ಟಿ ಅವರು ನಿಲುವಳಿ ಸೂಚನೆಯ ಪೂರ್ವ ಭಾವಿ ವಿಷಯ ಮಂಡನೆಗೆ ಅವಕಾಶ ನೀಡಿದರು.
ಚರ್ಚೆ ಆರಂಭಿಸಿ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು, ಈಶ್ವರಪ್ಪ ಅವರ ಹೇಳಿಕೆ ಪ್ರಿವೆನ್ಸನ್ ಆಫ್ ಇನ್ಸಲ್ಟï ಟು ನ್ಯಾಷನಲ್ ಹಾನರ್ಸ್ ACT 1971 ಸೆಕ್ಷನ್ 2ರ ( Prevention of Insult to National Honours Act ) ರಾಷ್ಟ್ರದ್ರೋಹವಾಗಿದ್ದು, ಮೂರು ವರ್ಷ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಸಲು ಅವಕಾಶ ಇದೆ. ಕೂಡಲೇ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಅವರು ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಅವರ ವಿರುದ್ಧ ರಾಷ್ಟ್ರದ್ರೋಹದ ಅಡಿ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ದ್ರೋಹದ ಆರೋಪಕ್ಕಾಗಿ ಬಂಸಿದ್ದರು, ಕೆಂಪುಕೋಟೆಯ ಮೇಲೆ ರೈತ ದ್ವಜ ಹಾರಿಸಿದ ಸಿದ್ದು ಎಂಬುವರನ್ನು ಬಂಸಲಾಗಿತ್ತು. ಅವರು ಸತ್ತು ಹೋದರು. ರಾಜ್ಯದಲ್ಲಿ ಸಚಿವರಾಗಿದ್ದುಕೊಂಡು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಈಶ್ವರಪ್ಪ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನ ಬಂಡಾಯ ಸದಸ್ಯ ಸಿ.ಎಂ.ಇಬ್ರಾಹಿಂ ಅವರು, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರು ತಕ್ಷಣವೇ ಈಶ್ವರ ವಿರುದ್ಧ ಕ್ರಮ ಜರುಗಿಸಬೇಕಿತ್ತು ಅಥವಾ ಈಶ್ವರಪ್ಪ ತನ್ನ ತಪ್ಪು ತಿಳಿದುಕೊಂಡು ಕ್ಷಮೆ ಕೇಳಬೇಕಿತ್ತು. ಎರಡು ಆಗಿಲ್ಲ. ಬಿಜೆಪಿಯವರು ಈಶ್ವರಪ್ಪ ಅವರ ಹೇಳಿಕೆಯನ್ನು ಬೆಂಬಲಿಸಿಲ್ಲ. ಅವರಿಗೆ ರ್ಆ ಎಸ್ ಎಸ್ ಮೇಲೆ ಪ್ರೀತಿ ಇರಲಿ, ಅದಕ್ಕೆ ನಮ್ಮ ವಿರೋಧ ಇಲ್ಲ.
ರಾಷ್ಟ್ರದ್ರೋಹದ ವಿಷಯದಲ್ಲಿ ಮಾತ್ರ ಬೆಂಬಲಿಸಬೇಡಿ, ನಿಮ್ಮ ದೇಶಭಕ್ತಿಯನ್ನು ಇಲ್ಲೂ ಪ್ರದರ್ಶನ ಮಾಡಿ ಎಂದು ಆಗ್ರಹಿಸಿದ್ದಲ್ಲದೆ, ಯಾರಾದರೂ ಹುಡುಗರು ತಪ್ಪು ಮಾಡಿದರೆ ಕಾನೂನು ಪಾಲನೆಯ ಅಕಾರಿಗಳು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸುತ್ತಾರೆ. ಈಶ್ವರಪ್ಪ ವಿರುದ್ಧ ಯಾಕೆ ಕೇಸು ದಾಖಲಿಸಿಲ್ಲ.
ಕಾನೂನು ಪಾಲನೆ ಅಕಾರಿಗಳು ವಿರುದ್ಧ ನಾವು ಹಕ್ಕುಚ್ಯುತಿ ಮಂಡಿಸುತ್ತೇವೆ. ಅದರ ಚರ್ಚೆಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ನ ಸಲಿಂ ಅಹಮ್ಮದ್ ಅವರು, ರಾಷ್ಟ್ರಧ್ವಜವನ್ನು ಅವಮಾನಿಸಿದ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಬಿಜೆಪಿ ಸದಸ್ಯ ರವಿಕುರ್ಮಾ ಈಶ್ವರಪ್ಪ ಅವರು ತಪ್ಪು ಹೇಳಿಕೆ ನೀಡಿಲ್ಲ ಎಂದಿದ್ದಾರೆ. ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಎಂದು ಆಗ್ರಹಿಸಿದರು.
ಜೆಡಿಎಸ್ ನ ಸದಸ್ಯರು ತಾವು ಕೂಡ ಇದೇ ವಿಷಯಕ್ಕೆ ನಿಲುವಳಿ ಸೂಚನೆ ನೀಡಿದ್ದೇವೆ. ಚರ್ಚೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಜೆಡಿಎಸ್ ನ ನಿಲುವಳಿ ಸೂಚನಾ ಪತ್ರ 11.25ಕ್ಕೆ ಬಂದಿದೆ. ಕಲಾಪ ಆರಂಭಕ್ಕೂ ಒಂದು ಗಂಟೆ ಮೊದಲು ಸೂಚನಾ ಪತ್ರ ನೀಡಬೇಕಿತ್ತು. ವಿಳಂಭವಾಗಿ ನೀಡಿರುವುದರಿಂದ ತಿರಸ್ಕಾರ ಮಾಡುತ್ತಿದ್ದೇನೆ ಎಂದು ಹೇಳಿದರು.
ಪ್ರತಿಪಕ್ಷಗಳ ಸದಸ್ಯರ ಟೀಕೆಗಳಿಗೆ ಉತ್ತರ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಈಶ್ವರಪ್ಪ ಅವರು ರಾಷ್ಟ್ರಧ್ವಜಕ್ಕೆ ಅಗೌರವ ವಾಗುವಂತ ಹೇಳಿಕೆಯನ್ನು ನೀಡಿಲ್ಲ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಯಾವುದೋ ಕಾಲದಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿದರೆ ನಗುತ್ತಿದ್ದರು. ಈಗ ಹಿಂಧುತ್ವ ತನ್ನ ಶಕ್ತಿ ತೋರಿಸಿಲ್ಲವೇ. ಹಾಗೆ ಮುಂದೊಂದು ದಿನ 200 ಅಥವಾ 500 ವರ್ಷವಾಗಲೂ ಬಹುದು ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸಬಹುದು ಎಂದಿದ್ದಾರೆ. ಆದರೆ ಈಗ ನಾವೆಲ್ಲಾ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿದ್ದೇವೆ.
ಸಂವಿಧಾನ ತ್ರಿವರ್ಣಧ್ವಜವನ್ನು ರಾಷ್ಟ್ರಧ್ವಜ ಎಂದು ಒಪ್ಪಿಕೊಂಡಿದ್ದೇವೆ. ಯಾರೆ ಆದರೂ ರಾಷ್ಟ್ರಧ್ವಜವನ್ನು ಅಪಮಾನಿಸಿದರೆ ಅವನು ರಾಷ್ಟ್ರ ದ್ರೋಹಿಯಾಗುತ್ತಾನೆ ಎಂದು ಹೇಳಿದ್ದಾರೆ. ಈಶ್ವರಪ್ಪ ಹೇಳಿಕೆಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವಾಗುವಂತಹ ಅಂಶಗಳಿವೆ ಎಂದು ಒಪ್ಪಿತ ಪುರಾವೆಗಳನ್ನು ಒದಗಿಸಲು ವಿರೋಧ ಪಕ್ಷದ ನಾಯಕರು ವಿಫಲರಾಗಿದ್ದಾರೆ. ರಾಷ್ಟ್ರದ್ರೋಹಕ್ಕೆ ಸಂಬಂಸಿದ ಯಾವ ಅಂಶಗಳು ಇಲ್ಲ, ನಿಲುವಳಿ ಸೂಚನೆ ಕ್ರಮಬದ್ಧವಾಗಿಲ್ಲ. ಹಾಗಾಗಿ ಇದನ್ನು ವಜಾ ಮಾಡಬೇಕು ಎಂದು ಮನವಿ ಮಾಡಿದರು.
ಗೋಲಿರ್ಬಾ ಗೆ ಎದೆಯೊಡ್ಡಿ ರಾಷ್ಟ್ರಧ್ವಜ ಹಾರಿಸಿದ ಇತಿಹಾಸ ಹೊಂದಿರುವ ಪಕ್ಷ ನಮ್ಮದು. ಈಶ್ವರಪ್ಪ ರಾಷ್ಟ್ರಧ್ವಜವನ್ನು ಅಗೌರವಿಸಿದ್ದಾರೆ ಎಂದು ಇಲ್ಲಿ ಚರ್ಚೆ ಮಾಡುತ್ತಿರುವುದು ದುರಂತ. ಅಂಬೇಡ್ರ್ಕ ಭೌದ್ಧ ಕ್ಷೆ ಪಡೆದ ನಾಪ್ಪುರವನ್ನು ವಿರೋಧ ಪಕ್ಷದ ನಾಯಕರು ಹಾವಿನಪುರ ಎಂದು ವ್ಯಂಗ್ಯವಾಗಿ ಹೇಳಿ ಅಗೌರವಿಸಿದ್ದಾರೆ ಎಂದು ಪ್ರತ್ಯುತ್ತರಿಸಿದರು.
ಆಡಳಿತ ಮತ್ತು ಪ್ರತಿಪಕ್ಷದ ನಾಯಕರ ಚರ್ಚೆಯ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಅವರು ನಿಲುವಳಿ ಸೂಚನೆಯನ್ನು ರದ್ದುಗೊಳಿಸಿರುವುದಾಗಿ ರೂಲಿಂಗ್ ನೀಡಿದರು. ಆದರೆ ಇದನ್ನು ಒಪ್ಪದ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿದರು. ಸರ್ಕಾರವೇ ಕ್ರಮಬದ್ಧವಾಗಿಲ್ಲ, ಇನ್ನೂ ನಿಲುವಳಿ ಸೂಚನೆ ಕ್ರಮ ಬದ್ಧವಾಗಿರಲು ಹೇಗೆ ಸಾಧ್ಯ ಎಂದು ಆಕ್ಷೇಪಿಸಿ, ಸಭಾಪತಿ ಅವರ ಮುಂದಿನ ಬಾವಿಗೆ ಇಳಿದು ಧರಣಿ ನಡೆಸಿದರು.
ಈಶ್ವರಪ್ಪ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಡಿದರು. ಇದರಿಂದ ಮತ್ತೊಮ್ಮೆ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ತಹಬದಿಗೆ ಬರದಿದ್ದಾಗ ಸಭಾಪತಿ ಅವರು ಕಲಾಪವನ್ನು ಬೋಜನ ವಿರಾಮಕ್ಕೆ ಮುಂದೂಡಿದರು.
