ಈಶ್ವರಪ್ಪ ಭಾವಚಿತ್ರಕ್ಕೆ ಕ್ಷೀರಾಭಿಷೇಕ..!

Social Share

ತಿ.ನರಸೀಪುರ, ಫೆ.20- ಸನಾತನ ಹಿಂದೂ ಧರ್ಮದ ತತ್ವವನ್ನು ಪ್ರತಿಪಾದಿಸಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನವರನ್ನು ಪ್ರತಿಯೊಬ್ಬ ಹಿಂದೂ ಧರ್ಮದ ವ್ಯಕ್ತಿಯು ಬೆಂಬಲಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ತೋಟದಪ್ಪ ಬಸವರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಕುಪ್ಯ ಗ್ರಾಮದಲ್ಲಿ ಸಚಿವ ಈಶ್ವರಪ್ಪ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಅವರು ಮಾತನಾಡಿದರು. ಈಶ್ವರಪ್ಪ ನವರು ದೇಶಪ್ರೇಮವನ್ನು ಎತ್ತಿಹಿಡಿದು ಕಾಂಗ್ರೆಸ್ ಪಕ್ಷಕ್ಕೆ ಗುರು ವಾಗಿ ರೂಪಿತವಾಗಿದ್ದಾರೆ. ನಮ್ಮ ದೇಶ ಅನಾದಿ ಕಾಲದಿಂದಲೂ ಹಿಂದೂ ಬಾಹುಳ್ಯವುಳ್ಳ ದೇಶ. ಅಲ್ಲದೆ ಜಾತ್ಯ ತೀತ ರಾಷ್ಟ್ರ, ಬಹುಸಂಖ್ಯಾತರಾದ ಹಿಂದೂಗಳು ತಮ್ಮ ಧರ್ಮದ ಅಭಿವೃದ್ಧಿಗೆ ಶ್ರಮಿಸುವುದು ಒಳ್ಳೆಯ ನಡೆ.
ಹಾಗಾಗಿ ಈಶ್ವರಪ್ಪ ನವರು ತಮ್ಮ ಹೇಳಿಕೆಗೆ ಬದ್ಧರಾಗಬೇಕು.ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆಯೇ ಹೊರತು ಅವರಿಗೆ ದೇಶದ ಅಭಿವೃದ್ಧಿ ಬಗ್ಗೆ ಚಿಂತೆಯಿಲ್ಲ ಎಂದು ಆರೋಪಿಸಿದರು.
ಈಶ್ವರಪ್ಪ ಅಪ್ಪಟ ದೇಶಪ್ರೇಮಿ ಯಾಗಿದ್ದು ಹಿಂದೂ ಸಂಸ್ಕøತಿಯನ್ನು ಎತ್ತಿ ಹಿಡಿದಿದ್ದಾರೆ. ಮುಂದೊಂದು ದಿನ ರಾಷ್ಟ್ರದ್ವಜದ ಜೊತೆಗೆ ಹಿಂದೂ ದ್ವಜವೂ ಪ್ರಾಮುಖ್ಯತೆ ಪಡೆಯಲಿದೆ ಎಂಬುದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಕಾಂಗ್ರೆಸ್ ಪಕ್ಷ ಈಶ್ವರಪ್ಪರವರ ಮೇಲೆ ವಾಗ್ದಾಳಿ ನಡೆಸಿರುವುದು ಖಂಡನೀಯ.ಇಷ್ಟು ದಿನ ರಾಷ್ಟ್ರ ದ್ವಜದ ಮೇಲಿರದ ಅಭಿಮಾನ ಈಶ್ವರಪ್ಪ ಹಿಂದೂ ದ್ವಜದ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ಜಾಗೃತಗೊಂಡಿದ್ದೇಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವು ಈಶ್ವರಪ್ಪನವರು ರಾಜೀನಾಮೆ ನೀಡುವಂತೆ ಸದನ ದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದು, ನಾಚಿಕೆಗೇಡಿನ ಸಂಗತಿ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಬಿಜೆಪಿ ಅಧ್ಯಕ್ಷ ಎಂ.ಮಹದೇವಯ್ಯ, ಟಿಎಪಿಸಿಎಂಎಸ್ ನಿರ್ದೇಶಕ ಮೂಗೂರು ಜಯಣ್ಣ, ಎಸ್‍ಸಿ ಮೋರ್ಚಾ ಅಧ್ಯಕ್ಷ ಆಲಗೂಡು ಮಂಜು, ಯುವ ಮೋರ್ಚಾ ಅಧ್ಯಕ್ಷ ಮೋಹನ್, ಗ್ರಾ.ಪಂ. ಸದಸ್ಯ ಮೋಹನ್, ಮುಖಂಡರಾದ ಕಾರ್ ಮಂಜು, ವಾಸು, ಮಿಲ್ ರಮೇಶ್, ಗಾರೆ ಶಿವಣ್ಣ, ದೊರೆಸ್ವಾಮಿ, ಸಿದ್ದರಾಜು, ಮಲ್ಲಯ್ಯ ಮತ್ತಿತರರಿದ್ದರು.

Articles You Might Like

Share This Article