ಸಂಪುಟದಿಂದ ನನ್ನನ್ನು ಏಕೆ ದೂರವಿಟ್ಟಿದ್ದಾರೆಂದು ಬೊಮ್ಮಾಯಿಯವರೇ ಹೇಳಬೇಕು : ಈಶ್ವರಪ್ಪ

Social Share

ಬಾಗಲಕೋಟೆ,ಡಿ.19-ನನ್ನನ್ನು ಸಚಿವ ಸಂಪುಟದಿಂದ ದೂರ ಇಟ್ಟಿರುವುದು ಏಕೆ ಎಂಬ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ರಾಜ್ಯದ ಜನರಿಗೆ ಉತ್ತರ ಹೇಳಬೇಕೆಂದು ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಬಾಗಲಕೋಟೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮವರ ವಿರುದ್ಧ ಕೇಳಿಬಂದಿದ್ದ ಪ್ರಕರಣದ ವಿಚಾರಣೆ ಪೂರ್ಣಗೊಂಡು ಕ್ಲೀನ್‍ಚಿಟ್ ಸಿಕ್ಕಿದೆ. ನಿರಪರಾ ಎಂದು ತೀರ್ಮಾನವಾದ ಮೇಲೂ ಸಂಪುಟಕ್ಕೆ ಏಕೆ ಸೇರಿಸಿಕೊಂಡಿಲ್ಲ ಎಂದು ರಾಜ್ಯದ ಜನ ಪ್ರಶ್ನೆ ಮಾಡುತ್ತಿದ್ದಾರೆ ಅದಕ್ಕೆ ನಾನು ಉತ್ತರ ನೀಡಲು ಬರುವುದಿಲ್ಲ. ಸಂಪುಟದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು, ಉಳಿಸಿಕೊಳ್ಳಬಾರದು ಎಂಬ ವಿವೇಚನೆಗೆ ಬಿಟ್ಟಿದೆ ಎಂದರು.

ಹೈಕಮಾಂಡ್ ನಿರ್ಧಾರ ಎಂದು ಮುಖ್ಯಮಂತ್ರಿಯವರು ಹೇಳಬಹುದು. ಆದರೆ ಹೈಕಮಾಂಡ್‍ಗೆ ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿವೆ. ಈ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲು ಕಾರಣವಿದೆ. ಜನ ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಾನು ಹೇಗೆ ಉತ್ತರ ನೀಡಲು ಸಾಧ್ಯ. ಮುಖ್ಯಮಂತ್ರಿಯವರೇ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.

ಕತಾರ್ ವಿಶ್ವಕಪ್‍ನಲ್ಲಿ ಅತಿ ಹೆಚ್ಚು ಗೋಲು, ಹೊಸ ದಾಖಲೆ

1989ರಲ್ಲಿ ನಾನು ವಿಧಾನಸೌಧಕ್ಕೆ ಪ್ರವೇಶ ಮಾಡಿದೆ. ನಾನು ಶಾಸಕನಾಗಿರುವ ಅವಯಲ್ಲಿ ಒಂದು ದಿನವೂ ಕಲಾಪಕ್ಕೆ ಗೈರು ಹಾಜರಾಗಿಲ್ಲ. ಸದನದ ಪಾವಿತ್ರತೆ ನನಗೆ ಗೊತ್ತಿದೆ. ಅನೇಕ ಮಹಾಪುರುಷರು ಅಲ್ಲೇ ನಿದ್ದೆ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ನಾನು ಸದನದಲ್ಲಿ ಅತ್ಯಂತ ಗೌರವದಿಂದ ಭಾಗವಹಿಸುತ್ತೇನೆ.ಇದೇ ಮೊದಲ ಬಾರಿಗೆ ಸೌಜನ್ಯದ ಪ್ರತಿಭಟನೆಗಾಗಿ ದೂರ ಉಳಿದಿದ್ದೇನೆ. ಮುಖ್ಯಮಂತ್ರಿ ವಿರುದ್ಧ ಮಾತನಾಡಲು ನಾನು ಬಯಸುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಈಶ್ವರಪ್ಪ ಕಿಡಿಕಾರಿದರು.ಕರ್ನಾಟಕಕ್ಕೆ ಸಾರ್ವಕರ್ ಅವರ ಕೊಡುಗೆ ಏನು ಎಂದು ಡಿ.ಕೆ.ಶಿವಕುಮಾರ್ ನಿನ್ನೆ ಪ್ರಶ್ನೆ ಮಾಡಿದ್ದಾರೆ. ಅವರು ಇತಿಹಾಸವನ್ನು ತಿಳಿದುಕೊಳ್ಳಲಿ. ಬಾಯಿಗೆ ಬಂದಂತೆ ಮಾತನಾಡುವುದರೆ ಜನರಿಂದ ತಿರಸ್ಕಾರವಾಗುತ್ತಾರೆ ಎಂದರು.

ಹಾಗೆ ನೋಡಿದರೆ ದೇಶಕ್ಕೆ ಸೋನಿಯಾ ಗಾಂ ಮತ್ತು ರಾಹುಲ್ ಗಾಂಯವರ ಕೊಡುಗೆ ಏನು ಎಂದು ಈಶ್ವರಪ್ಪ ಪ್ರಶ್ನಿಸಿದರು. ಸೋನಿಯಾ ಗಾಂ ವಿದೇಶದಿಂದ ಬಂದ ವ್ಯಕ್ತಿ. ವೈಯಕ್ತಿಕವಾಗಿ ನಾನು ಅವರನ್ನು ಟೀಕಿಸುವುದಿಲ್ಲ. ಅವರು ಯಾವ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ, ಜೈಲು ಶಿಕ್ಷೆ ಅನುಭವಿಸಿದ್ದಾರೆ ಅವರ ಕೊಡುಗೆ ಏನು ಎಂದರು.

ಡಿ.ಕೆ.ಶಿವಕುಮಾರ್ ಅವರು ವೈಯಕ್ತಿಕವಾಗಿ ಮಾಡಿದ ಕೃತ್ಯಗಳಿಂದಾಗಿ ಜೈಲಿಗೆ ಹೋಗಿ ಬಂದಿದ್ದಾರೆ. ಅವರು ವೀರ ಸಾರ್ವಕರ್ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ. ಕಾಂಗ್ರೆಸಿಗರಿಗೆ ಯಾವ ಸಮಯದಲ್ಲಿ ರಾಜಕಾರಣ ಮಾಡಬೇಕು ಎಂಬುದೇ ಗೊತ್ತಿಲ್ಲ ಎಂದರು.

#KSEshwarappa, #BasavarajBommai,

Articles You Might Like

Share This Article