ಈಶ್ವರಪ್ಪ ವಜಾಗೊಳಿಸಿ ರಾಷ್ಟ್ರಭಕ್ತಿ ಸಾಬೀತುಪಡಿಸಿ : ಪ್ರಿಯಾಂಕ್ ಖರ್ಗೆ

Social Share

ಬೆಂಗಳೂರು,ಫೆ.19- ರಾಷ್ಟ್ರದ್ರೋಹಿ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವ ಮೂಲಕ ಬಿಜೆಪಿ ತನ್ನ ರಾಷ್ಟ್ರಭಕ್ತಿಯನ್ನು ಸಾಬೀತುಪಡಿಸಿಕೊಳ್ಳಬೇಕಾಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಸಂಘ ಪರಿವಾರದ ದೇಶಭಕ್ತಿ ನಕಲಿ ಎಂದು ಆರೋಪಿಸಿದರು.
ಬಿಜೆಪಿ ಸಂಘಪರಿವಾರಕ್ಕೆ ರಾಷ್ಟ್ರ ಧ್ವಜ ಹಾಗೂ ಸಂವಿಧಾನದ ಬಗ್ಗೆ ಮೊದಲಿನಿಂದಲೂ ಅಸಹನೆಯಿದೆ ಎಂದು ದಾಖಲೆ ಸಮೇತ ವಿವರಿಸಿದರು.
1921ರಲ್ಲಿ ಲಾಹೋರ್ ನಲ್ಲಿ ಕಾಂಗ್ರೆಸ್ ಸಮಾವೇಶ ನಡೆದಿತ್ತು. ಅಲ್ಲಿ ದೇಶದ ಎಲ್ಲರೂ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಎಂದು ತೀರ್ಮಾನಿಸಲಾಗಿದೆ. ಅದನ್ನು ಪ್ರತಿಯೊಬ್ಬರು ಒಪ್ಪಿಕೊಂಡಿದ್ದರು. ಆದರೆ ಸಂಘದ ಪರಿವಾರದ ಆಗಿನ ಮುಖ್ಯಸ್ಥ ಹೆಗಡೇವಾರ್ ತಮ್ಮ ಶಾಖೆಗಳಿಗೆ 1930ರಲ್ಲಿ ಪತ್ರ ಬರೆದು ತ್ರಿವರ್ಣ ಧ್ವಜ ಹಾರಿಸಬಾರದು, ಭಗಧ್ವಜ ಹಾರಿಸಬೇಕು ಎಂದು ಆದೇಶಿಸಿದ್ದರು. ಈ ಕುರಿತ ಪತ್ರ ತಮ್ಮ ಬಳಿ ಇದೆ ಎಂದರು.
1947 ಆಗಸ್ಟ್ 27ರಲ್ಲಿ ಆರ್‍ಎಸ್‍ಎಸ್‍ನ ಮುಖವಾಣಿ ಆರ್ಗನೈಜರ್ ಪತ್ರಿಕೆಯಲ್ಲಿ ತ್ರಿವರ್ಣ ಧ್ವಜವನ್ನು ಅವಹೇಳನ ಮಾಡಿದ್ದಾರೆ. ಮೂರು ಬಣ್ಣದ ದೇಶಕ್ಕೆ ಅಪಶಕುನ ಮತ್ತು ಆಪತ್ತು ತರಲಿದೆ ಎಂದಿದ್ದಾರೆ.
ಗಾಂೀಧಿಜಿ ಅವರನ್ನು ನಾತುರಾಮ್ ಗೋಡ್ಸೆ ಕೊಂದ ಮೇಲೆ ಆಗಿನ ಗೃಹಸ ಸಚಿವ ಸರ್ಧಾರ್ ವಲ್ಲಭಬಾಯಿ ಪಟೇಲ್ ಆರ್‍ಎಸ್‍ಎಸ್‍ಗೆ ನಿಷೇಧ ಹೇರಿದ್ದರು. ಹಲವು ನಾಯಕರು ಒತ್ತಡ ಹೇರಿದಾಗ ಪಟೇಲರು ಸಂಘಪರಿವಾರಕ್ಕೆ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸಬಾರದು ಮತ್ತು ಸಂವಿಧಾನವನ್ನು ಗೌರವಿಸಬೇಕು ಎಂಬ ಷರತ್ತು ಹಾಕಿ ನಿಷೇಧ ತೆರವು ಮಾಡಿದ್ದರು.
ಈ ಷರತ್ತಿನ ಬಗ್ಗೆ ಸದಾರ್ ಸರ್ದಾರ ಪಟೇಲ್ ಅವರು ಗುಜರಾvನ ಸಾರ್ವಜನಿಕ ಭಾಷಣದಲ್ಲಿ ಆರ್ ಎಸ್ ಎಸ್ ಗೆ ವಿಸಿದ್ದ ಷರತ್ತಿನ ಬಗ್ಗೆ ವಿವರವಾಗಿ ಹೇಳಿದ್ದಾರೆ. ಗೋಲ್ವಾಲ್ಕರ್ ಅವರು ತಮ್ಮ ಪುಸ್ತಕದಲ್ಲಿ ತ್ರಿವರ್ಣ ಧ್ವಜ ಯಾಕೆ ಬೇಕು ಎಂದು ಪ್ರಶ್ನಿಸಿದ್ದಲ್ಲದೆ, ಪ್ರಾಚಿನ ಭಾರತದಲ್ಲಿ ಇದ್ದ ಧ್ವಜವನ್ನು ಏಕೆ ಅಳವಡಿಸಿಕೊಳ್ಳಲಿಲ್ಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
52 ವರ್ಷ ಆರ್‍ಎಸ್‍ಎಸ್ ಕಚೇರಿಯ ಮೆರಲೆ ತ್ರಿವರ್ಣ ಧ್ವಜವನ್ನು ಹಾರಿಸಿಯೇ ಇರಲಿಲ್ಲ. 2002ರಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ಬಿಜೆಪಿ ಶಕ್ತಿ ಕೇಂದ್ರಗಳ ನಾಯಕರಿಗೆ ಸಂವಿಧಾನದ ಮೇಲೆ ನಂಬಿಕೆ ಹೊಂದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ.ತ್ಯಾಗ ಬಲಿದಾನ ಮಾಡಿಲ್ಲ. ಹೀಗಾಗಿ ನಮಗೆ ಸಂವಿಧಾನ ಬೇಡ ಮನುಸ್ಮೃತಿಯೇ ಬೇಕು ಎಂದು ಸ್ವಾತಂತ್ರ್ಯ ನತರ ಆರ್‍ಎಸ್‍ಎಸ್ 120 ಬಾರಿ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಿತ್ತು.
ಬಿಜೆಪಿ ರಾಷ್ಟ್ರ ವಾದಿ ಎಂದು ಸಾಬೀತು ಪಡಿಸಲು ಈಗ ಸುವರ್ಣ ಅವಕಾಶವಿದೆ. ಸಚಿವ ಸಂಪುಟದಿಂದ ಸಚಿವ ಈಶ್ವರಪ್ಪ ಅವರನ್ನು ಉಚ್ಛಾಟಿಸಿ ನಿಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಿ ಎಂದು ಸವಾಲು ಹಾಕಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಹಾಯಕರಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರು ಗೊಂದಲಕ್ಕೊಳಗಾಗಿದ್ದಾರೆ. ಅವರ ಪಕ್ಷದ ಸರ್ಕಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಟೀಕೆ ಮಾಡಿದಾಗ ರಾಜ್ಯಾಧ್ಯಕ್ಷರಾಗಿ ಒಂದು ನೋಟಿಸ್ ಕೊಡಲು ಸಾಧ್ಯವಾಗಲಿಲ್ಲ. ಇನ್ನು ಬಿಟ್ ಕಾಯಿನ್ ವಿಷಯವಾಗಿ ತಾವು ಮಾಡಿದ ಆರೋಪಕ್ಕೆ ಈವರೆಗೂ ಬಾಯಿಬಿಟ್ಟಿಲ್ಲ ಎಂದು ತಿರುಗೇಟು ನೀಡಿದರು.
ಸಂವಿಧಾನ ಉಳಿವು ರಾಷ್ಟ್ರದ ಗೌರವದ ಆದ್ಯತೆಯ ವಿಷಯವಾಗಿದೆ. ಹೀಗಾಗಿ ನಮ್ಮ ನಾವು ಹೋರಾಟ ಅಹೋರಾತ್ರಿ ಮುಂದುವರೆಯಲಿದೆ. ಈಶ್ವರಪ್ಪನವರ ಹೇಳಿಕೆ ವಿರುದ್ಧ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೇಳಿದ್ದೇವೆ. ಅದನ್ನು ತಿರಸ್ಕರಿಸಿದ ಬಳಿಕವೇ ನಾವು ಸದನದ ಭಾವಿಗೆ ಇಳಿದು ಧರಣಿ ನಡೆಸುತ್ತಿದ್ದೇವೆ ಎಂದು ಹೇಳಿದರು.

Articles You Might Like

Share This Article