ಬೆಂಗಳೂರು,ಆ.19- ಅಧಿಕಾರದ ಆಸೆಗಾಗಿ ಟಿಪ್ಪುಗೆ ಪೂಜೆ ಮಾಡಿದ ತಮಗೆ ಬೇಕಾದಾಗ ಗಲಭೆ ಮಾಡಿಸುವ ಅಭ್ಯಾಸವಿದೆ ಎಂಬ ಸತ್ಯ ಗೊತ್ತಿರುವ ವಿಷಯವೇ ಎಂದು ಮಾಜಿ ಸಚಿವಕೆ.ಎಸ್. ಈಶ್ವರಪ್ಪ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾನ್ಯ ಸಿದ್ದರಾಮಯ್ಯನವರೇ ನನ್ನದು ನಿಮ್ಮಂತೆ ಅಧಿಕಾರಕ್ಕಾಗಿ ವಿಲಿವಿಲಿ ಒದ್ದಾಡುವ ಜಾಯಮಾನವಲ್ಲ. ಕಳ್ಳನ ಮನಸ್ಸು ಹುಳ್ ಹುಳ್ಗೆ ಎಂಬ ಗಾದೆ ಮಾತಿನ ತರ ನಿಮ್ಮ ಮನಸ್ಸಿನಲ್ಲಿರುವುದನ್ನೇ ಹೇಳಿದೀರಿ ಎಂದು ತಿರುಗೇಟು ಕೊಟ್ಟಿದ್ದಾರೆ.