ದೀಪಾವಳಿ ಪ್ರಯುಕ್ತ KSRTCಯಿಂದ 1500 ಹೆಚ್ಚುವರಿ ಬಸ್ ಸೇವೆ

Social Share

ಬೆಂಗಳೂರು,ಅ.17- ದಿಪಾವಳಿ ಹಬ್ಬದ ಪ್ರಯುಕ್ತ ಅ.21ರಿಂದ ಅ.24ರ ವರೆಗೆ ಮತ್ತು ಅ.26ರ ರಿಂದ ಅ.30 ರ ವರೆಗೆ ಕೆಎಸ್ಆರ್‌ಟಿಸಿ ವತಿಯಿಂದ 1500 ಹೆಚ್ಚುವರಿ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ. 26ರರಿಂದ ಅ.30ರವರೆಗೆ ವಿಶೇಷ ಬಸ್‍ಗಳ ಸೇವೆ ಕೂಡ ಕಲ್ಪಿಸಲಾಗಿದೆ.

ಕೆಂಪೇಗೌಡಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ ಹಾಸನ, ಮಂಗಳೂರು,
ಕುಂದಾಪುರ, ಶೃಂಗೇರಿ ,ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ , ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ ರಾಯಚೂರು, ಕಲಬುರಗಿ, ಬಳಾ ್ಳರಿ, ಕೊಪ್ಪಳ, ಯಾದಗಿರಿ , ಬೀದರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು.ಹೊರ ರಾಜ್ಯಗಳಿಗೂ ಸೇವೆ ಇರಲಿದೆ.

ಇದಲ್ಲದೆ ಮಲ್ಲೇಶ್ವರ 18ನೇ ಅಡ್ಡರಸ್ತೆ, ಬನಶಂಕರಿ ಜೀವನ್‍ಭೀಮಾನಗರ , ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರ ಮುಂತಾದ ಕಡೆಗಳಿಂದ ಶಿವಮೊಗ್ಗ,ದಾವಣಗೆರೆ ಮಂಗಳೂರು,ಕುಂದಾಪುರ ಸೇರಿ ಹಲವು ಕಡೆ ಸೇವೆ ಕಲ್ಪಿಸಲಾಗಿದೆ.

ಹೆಚ್ಚುವರಿ ಸಾರಿಗೆಗಳಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಇ-ಟಿಕೇಟ್ ಬುಕಿಂಗ್‍ನ್ನು ವೆಬ್ ಸೈಟ್ ಮುಖಾಂತರವೂ ಮಾಡಬಹುದಾಗಿದೆ. ನಾಲ್ಕು ಅಥವಾ ಹೆಚು ್ಚ ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದಲಿ ್ಲ ಶೇಕಡಷ್ಟು ರಿಯಾಯಿತಿ ನೀಡಲಾಗುವುದು.

ಹೋಗುವುದು -ಬರುವುದು ಪ್ರಯಾಣದ ಟಿಕೇಟ್‍ನ್ನು ಒಟಿ ್ಟಗೆ ಕಾಯ್ದಿರಿಸಿದಾಗ ಬರುವ ಪ್ರಯಾಣದಲ್ಲಿ ಶೇಕಡ 10 ರಷ್ಟು ರಿಯಾಯಿತಿ ನೀಡಲಾಗುವುದು.

Articles You Might Like

Share This Article