6 ದಶಕ ಪೂರೈಸಿದ ಸಂಭ್ರಮದಲ್ಲಿ ಕೆಎಸ್ಆರ್‌ಟಿಸಿ

ಬೆಂಗಳೂರು,ಆ.1- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 60ನೇ ವರ್ಷದ ಸಂಭ್ರಮ. ಕಳೆದ 1961ರ ಆಗಸ್ಟ್ 1ರಂದು ನಿಗಮ ಸ್ಥಾಪನೆಯಾಗಿದ್ದು, ಇಂದು ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ.

ಆರು ದಶಕಗಳ ಅಭೂತಪೂರ್ವ ಪ್ರಯಾಣದ ರೂವಾರಿಗಳಾದ ಸಮಸ್ತ ಸಿಬ್ಬಂದಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಸಂಸ್ಥಾಪನಾ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.

ನಿಗಮವು ಸದ್ಯ ಕ್ಲಿಷ್ಟಕರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಎಲ್ಲರ ಸಹಕಾರ, ಪರಿಶ್ರಮದಿಂದ ಹಾಗೂ ಯೋಜಿತ ಕಾರ್ಯಕ್ರಮಗಳ ಮೂಲಕ ಮುಂದಿನ ದಿನಗಳಲ್ಲಿ ತನ್ನ ವೈಭವದ ಪಯಣವನ್ನು ಮುಂದುವರೆಸಲಿದೆ ಎಂದು ಅವರು ಪ್ರಕಟಣೆಯಲ್ಲಿ ಆಶಿಸಿದ್ದಾರೆ.

Sri Raghav

Admin