ಬೆಂಗಳೂರು,ಜು.20- ಬೆಂಗಳೂರಿನಿಂದ ಜೋಗಜಲಪಾತಕ್ಕೆ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮ ಆರಂಭಿಸಿದೆ. ಕೆಎಸ್‍ಆರ್‍ಟಿಸಿ ಬೆಂಗಳೂರು ಕೇಂದ್ರಿಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು- ಜೋಗಜಲಪಾತ ಶಿವಮೊಗ್ಗ ಸಾಗರ ಮಾರ್ಗವಾಗಿ ನಾನ್ ಎಸಿ ಸ್ಲೀಪರ್ ವಾಹನದೊಂದಿಗೆ ವಾರಾಂತ್ಯದ ದಿನಗಳಲ್ಲಿ ಅಂದರೆ, ಶುಕ್ರವಾರ ಮತ್ತು ಶನಿವಾರ ಪ್ಯಾಕೇಜ್ ಪ್ರವಾಸವನ್ನು 22 ಜುಲೈ 2022ರಿಂದ ಪ್ರಾರಂಭಿಸಿ ಈ ಯೋಜನೆಯ ಕಾರ್ಯಾಚರಣೆಯಂತೆ ಮಾಡಲಾಗುತ್ತದೆ.
ಬೆಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಟು ಬೆಳಗ್ಗೆ 5.30 ತಲುಪುವುದು, ಬೆಳಗ್ಗೆ 7ರವರೆಗೂ ವಿಶ್ರಾಂತಿ ಪಡೆಯುವುದು. ನಂತರ 7ಕ್ಕೆ ಉಪಹಾರ ಸೇವನೆ ಮಾಡಬಹುದು, 7.15ಕ್ಕೆ ಸಾಗರದಿಂದ ಹೊರಟು ವರದಹಳ್ಳಿಗೆ 7.30ಕ್ಕೆ ತಲುಪಲಿದೆ. ವರದಹಳ್ಳಿಯಿಂದ 7.15ಕ್ಕೆ ಹೊರಟು ವರದ ಮೂಲಕ್ಕೆ 9ಕ್ಕೆ ತಲುಪುತ್ತದೆ.
ವರದ ಮೂಲ ನೋಡಿಕೊಂಡು ಇಕ್ಕೇರಿಗೆ 9.30ಕ್ಕೆ ತಲುಪುವುದು, ಅಲ್ಲಿ 10ರವೆರಗೂ ತಾಣ ನೋಡುವುದು. ನಂತರ ಇಕ್ಕೇರಿ ನೋಡಿಕೊಂಡು 10.30ಕ್ಕೆ ಹೊರಟು 11ಕ್ಕೆ ಕೆಳದಿಗೆ ತಲುಪುವುದು. 12ಕ್ಕೆ ಕೆಳದಿಯಿಂದ ಹೊರಟು 12.30ಕ್ಕೆ ಸಾಗರ ತಲುಪಲಾಗುತ್ತದೆ. ನಂತರ ಸಾಗರದಲ್ಲಿ 12.45ರಿಂದ 1.15ರವರೆಗೆ ಊಟದ ಸಮಯ, 1.30ವರೆಗೆ ಸಾಗರದಿಂದ ಹೊರಟು 2.13ಕ್ಕೆ ಜೋಗ ತಲುಪುವುದು ಅಲ್ಲಿ ಸಂಜೆ 5ರವರೆಗೂ ಜೋಗದ ಅಹ್ಲಾದಕರ ವಾತಾವರಣ ಸವಿಯಬಹುದು.
ನಂತರ 6.15ಕ್ಕೆ ಹೊರಟು ಸಂಜೆ 7ಕ್ಕೆ ಸಾಗರ ತಲುಪುವುದು, 7ರಿಂದ 8ರವರೆಗೆ ಒಂದು ಗಂಟೆ ಸಾಗರದಲ್ಲಿ ಶಾಪಿಂಗ್ ಸಮಯವಿರುತ್ತದೆ. ನಂತರ 8.30ಕ್ಕೆ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ನಂತರ ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಗ್ಗೆ 5ಗಂಟೆಗೆ ಬೆಂಗಳೂರು ತಲುಪುತ್ತದೆ.
ಬೆಂಗಳೂರು- ಜೋಗ ಜಲಪಾತ ಪ್ಯಾಕೇಜ್ ಟೂರ್‍ನ ಪ್ರಯಾಣದ ದರಗಳು ಇಂತಿವೆ. ವಯಸ್ಕರಿಗೆ 2,300 ರುಪಾಯಿಗಳು. 6ರಿಂದ 12 ವರ್ಷದ ಒಳಗಿನ ಮಕ್ಕಳಿಗೆ 2100 ರುಪಾಯಿಗಳು ಎಂದು ಕೆಎಸ್‍ಆರ್‍ಟಿಸಿ ಪ್ರಕಟಣೆ ತಿಳಿಸಿದೆ.