ಅಂಬಾರಿ ಉತ್ಸವ ಸ್ಲೀಪರ್ ಬಸ್‍ಗಳಿಗೆ ಚಾಲನೆ

Social Share

ಬೆಂಗಳೂರು,ಫೆ.21-ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಂಬಾರಿ ಉತ್ಸವ ಸ್ಲೀಪರ್ ಬಸ್‍ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ವಿಧಾನಸೌಧದ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಅಂಬಾರಿ ಉತ್ಸವದ ಬಸ್‍ಗಳಿಗೆ ಮುಖ್ಯಮಂತ್ರಿ ಹಸಿರುನಿಶಾನೆ ತೋರಿದರು.

ಕೆಎಸ್‍ಆರ್‍ಟಿಸಿಯು 50 ಓಲ್ವೊ ಸ್ಲೀಪರ್ ವಾಹನಗಳನ್ನು ಅಂಬಾರಿ ಉತ್ಸವದ ಬಸ್‍ಗಳನ್ನಾಗಿ ಕಾರ್ಯಾಚರಣೆ ನಡೆಸಲಿದ್ದು, ಮೊದಲ ಹಂತವಾಗಿ ಇಂದು 15 ಅಂಬಾರಿ ಉತ್ಸವದ ಬಸ್‍ಗಳಿಗೆ ಚಾಲನೆ ನೀಡಲಾಯಿತು.

ಅಂಬಾರಿ ಉತ್ಸವ ಎಂಬ ಬ್ರಾಂಡ್ ಹೆಸರು ಹೊಂದಿರುವ ಹಾಗೂ ಸಂಭ್ರಮದ ಪ್ರಯಾಣ ಎಂಬ ಟ್ಯಾಗ್‍ಲೈನ್ ಹೊಂದಿರುವ ವೋಲ್ವೊ ಬಿಎಸ್- ಐ್ಖ 9600 ಎಸ್ ಮಾದರಿಯ ಮಲ್ಟಿ ಆಕ್ಷನ್ ಸ್ಲೀಪರ್ ಬಸ್‍ಗಳಾಗಿವೆ.
ಬೆಂಗಳೂರಿನಿಂದ ಸಿಕಂದರಬಾದ್, ಹೈದರಾಬಾದ್,ಯರ್ನಾಕುಲಂ, ತಿರುವನಂತಪುರಂ, ಪಣಜಿ, ಕುಂದಾಪುರದಿಂದ ಬೆಂಗಳೂರು, ಮಂಗಳೂರಿನಿಂದ ಪೂನಾಗೆ ಈ ಬಸ್‍ಗಳ ಸೇವೆಯನ್ನು ಒದಗಿಸಲಾಗಿದೆ.

ಗ್ಯಾಂಗ್‍ಸ್ಟರ್ ಬಿಷ್ಣೋಯ್ ಅಡ್ಡೆಗಳ ಮೇಲೆ NIA ದಾಳಿ

50 ಮೀಟರ್ ಉದ್ದವಿರುವ ಈ ಬಸ್‍ನಲ್ಲಿ 30 ಆಸನಗಳಿವೆ. ಬಲಿಷ್ಠ ಕಾಂಡಿ ನೇವಿಯನ್ ಸಂಪ್ರದಾಯದ ವಿನ್ಯಾಸದಲ್ಲಿ ರೂಪಗೊಂಡಿದೆ. ಬಸ್ ಚಲಿಸುವಾಗ ಗಾಳಿಯ ಸೆಳೆತವನ್ನ ಕಡಿಮೆ ಮಾಡಲು ಪೂರಕವಾಗಿ ಇಂಧನ ಉಳಿತಾಯಕ್ಕೆ ಕಾರಣವಾಗಲಿದೆ.

ಪ್ರಯಾಣಿಕರಿಗೆ ಬಸ್‍ನಲ್ಲಿ ವಿಹಂಗಮ ನೋಟವನ್ನು ನೋಡಬಹುದು ಮುಂತಾದ ಐಷರಾಮಿ ಸೌಲಭ್ಯಗಳನ್ನು ಈ ಬಸ್‍ಗಳು ಹೊಂದಿವೆ.

KSRTC, launch, Ambari Ustav, buses, CM Bommai,

Articles You Might Like

Share This Article