ಛತ್ತೋಗ್ರಾಮ್, ಡಿ. 16- ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ 2 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 40 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಭಾರತದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಕನ್ನಡಿಗ ಅನಿಲ್ಕುಂಬ್ಳೆ ಅವರ ದಾಖಲೆ ಮುರಿದಿದ್ದಾರೆ.
ಪಾಕಿಸ್ತಾನದ ವಿರುದ್ಧ ಇನ್ನಿಂಗ್ಸ್ನಲ್ಲಿ 10 ವಿಕೆಟ್ ಕಬಳಿಸುವ ಮೂಲಕ ವಿಶ್ವ ದಾಖಲೆ ಮಾಡಿರುವ ಅನಿಲ್ಕುಂಬ್ಳೆ, ಬಹುತೇಕ ಟೆಸ್ಟ್ ತಂಡಗಳ ವಿರುದ್ಧ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಆದರೆ ಬಾಂಗ್ಲಾದೇಶ ವಿರುದ್ಧ2004ರಲ್ಲಿ ನಡೆದ ಚೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ 55 ರನ್ ನೀಡಿ 4 ವಿಕೆಟ್ ಕೆಡವಿರುವುದೇ ಅತ್ಯಕ ವಿಕೆಟ್ ಆಗಿದೆ.
ಛತ್ತೋಗ್ರಾಮ್ನಲ್ಲಿ ನಡೆದ ಟೆಸ್ಟ್ನಲ್ಲಿ 40 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಭಾರತದ ಸ್ಪಿನ್ನರ್ಗಳು ಮಾಡಿದ ದಾಖಲೆಗಳನ್ನು ಮುರಿದಿದ್ದಾರೆ.2015ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಅವರು 87 ರನ್ ನೀಡಿ 5 ವಿಕೆಟ್ ಕಬಳಿಸಿದ್ದು ಬಾಂಗ್ಲಾದೇಶ ವಿರುದ್ಧ ಭಾರತದ ಸ್ಪಿನ್ನರ್ ಮಾಡಿದ್ದ ಸಾಧನೆ ಆಗಿತ್ತು. 2000ರಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಸುನೀಲ್ ಜೋಶಿ 142 ರನ್ ನೀಡಿ 5 ಬ್ಯಾಟರ್ಗಳಿಗೆ ದಾರಿ ತೋರಿಸಿದ್ದರು.
ಪರಮಾಣು ಸಾಮರ್ಥ್ಯದ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ
ಒಟ್ಟಾರೆ ಬಾಂಗ್ಲಾದೇಶ ವಿರುದ್ಧ 5 ವಿಕೆಟ್ಗಳ ಸಾಧನೆ ಮಾಡಿದವರ ಸಾಲಿನಲ್ಲಿ ಕುಲ್ದೀಪ್ ಯಾದವ್ 7ನೆಯ ಬೌಲರ್ ಆಗಿದ್ದಾರೆ.ಭಾರತದ ವೇಗಿಗಳ ಪರ ಜಹೀರ್ ಖಾನ್ ಅವರು 3 ಬಾರಿ ಬಾಂಗ್ಲಾದೇಶ ವಿರುದ್ಧ 5 ವಿಕೆಟ್ ಕೆಡವಿದ ಸಾಧನೆ ಮಾಡಿದ್ದರೆ, ಇರ್ಫಾನ್ ಪಠಾಣ್, ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ಅವರು 2 ಬಾರಿ 5 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ 5 ವಿಕೆಟ್ ಪಡೆದು ಬಾಂಗ್ಲಾ ತಂಡವನ್ನು 150ರನ್ಗಳಿಗೆ ಕಟ್ಟಿ ಹಾಕುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಕುಲ್ದೀಪ್ ಯಾದವ್ ಬ್ಯಾಟಿಂಗ್ನಲ್ಲೂ ಮಿಂಚಿ 40 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು.
#KuldeepCreates, #History, #Smashes, #Ashwin, #Kumble, #massiverecord, #Bangladesh,