ಅನಾಮಧೇಯ ವ್ಯಕ್ತಿಗಳಿಗೆ ಕುಮಾರ ಕೃಪಾ ಪ್ರವೇಶ ನಿರ್ಬಂಧ

Social Share

ಬೆಂಗಳೂರು,ಜ.10- ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದದ ಕೇಂದ್ರಬಿಂದುವಾಗಿರುವ ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಕುಮಾರಕೃಪ ಅತಿಥಿಗೃಹಕ್ಕೆ ಅನಾಮಧೇಯ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ.

ಕುಮಾರಕೃಪ ಅತಿಥಿ ಗೃಹಕ್ಕೆ ಯಾರೇ ಬಂದರೂ ಕಡ್ಡಾಯವಾಗಿ ತಮ್ಮ ಗುರುತಿನಚೀಟಿ ತೋರಿಸಲೇಬೇಕು. ಎಲ್ಲಿಂದ ಬಂದಿದ್ದೇವೆ? ಯಾರನ್ನು ಭೇಟಿಯಾಗಬೇಕು? ಯಾವ ಕೆಲಸ? ಎಷ್ಟು ದಿನ ಉಳಿದುಕೊಳ್ಳುತ್ತೇವೆ, ಬಂದುಹೋಗುವ ಸಮಯ, ಆಗಮನ-ನಿರ್ಗಮನದ ಸಮಯದ ಮಾಹಿತಿಯನ್ನು ಸಂಬಂಧಪಟ್ಟವರಿಗೆ ತಿಳಿಸಲೇಬೇಕು.

ಕುಮಾರಕೃಪದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ದೇವರಾಜ್ ಅವರನ್ನು ಶನಿವಾರ ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿತ್ತು. ತೆರವಾಗಿದ್ದ ಈ ಸ್ಥಾನಕ್ಕೆ ಪ್ರಸ್ತುತ ದೇವರಾಜ್ ಎನ್ನುವವರನ್ನು ನೇಮಿಸಲಾಗಿದೆ.

ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಕಳೆದ ಒಂದು ವಾರದಿಂದ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದು, ಅಪರಿಚಿತರು ಇಲ್ಲವೇ ಅನಾಮಧೇಯ ವ್ಯಕ್ತಿಗಳು ಬಂದುಹೋಗುವುದು, ಇಲ್ಲವೇ ವಾಸ್ತವ್ಯ ಹೂಡುವ ಪರಿಪಾಠಕ್ಕೆ ಬ್ರೇಕ್ ಹಾಕಿದೆ.

ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಅರಗಜ್ಞಾನೇಂದ್ರ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದು, ಮನಸೋ ಇಚ್ಛೆ ಬಂದು ಹೋಗುವವರು ಇಲ್ಲವೇ ಪರಿಚಯವಿಲ್ಲದವರಿಗೆ ವಾಸ್ತವ್ಯ ಹೂಡಲು ಅವಕಾಶ ನೀಡದಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಾಂಗ್ಲಾ ವಿಮಾನದಲ್ಲಿ ಬಟ್ಟೆ ಬಿಚ್ಚಿ ಬಡಿದಾಡಿಕೊಂಡ ಪ್ರಯಾಣಿಕರು

ರಾಜಕಾರಣಿಗಳು ಮತ್ತು ಫಿಕ್ಸರ್‍ಗಳು ಮಾಡಿದ ಅನೈತಿಕ ಕೆಲಸದಿಂದಾಗಿ ಸರ್ಕಾರಿ ಸ್ವಾಮ್ಯದಲ್ಲಿರುವ ಕುಮಾರಕೃಪಾ ಮತ್ತು ಬಾಲಬ್ರೂಯಿ ಅತಿಥಿಗೃಹಗಳು ರಾತ್ರೋರಾತ್ರಿ ಕೋಟೆಗಳಾಗಿ ಮಾರ್ಪಟ್ಟಿವೆ ಎಂಬ ಆರೋಪ ಕೇಳಿಬಂದಿತ್ತು.
ಸ್ಯಾಂಟ್ರೋ ರವಿ ವಿಷಯ ವೈರಲ್ ಆದ ನಂತರ ಸರ್ಕಾರ ಈ ಎರಡು ಗೆಸ್ಟ್ ಹೌಸ್ ಗಳಿಗೆ ಪ್ರವೇಶ ನಿರ್ಬಂಧಿಸಿದೆ.

ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ, ಇತ್ತೀಚೆಗೆ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಕುಮಾರಕೃಪದಲ್ಲಿ ಕೂತು ಈತ ಭಾರೀ ವ್ಯವಹಾರ ನಡೆಸಿದ್ದಾನೆ. ಇವನ ಹಿಂದೆ ಅಡಗಿ ಕೂತಿರುವ ಅಸಲಿ ವ್ಯಕ್ತಿ ಯಾರು? ಎಂದು ಪ್ರಶ್ನಿಸಿದ್ದರು.

ಪ್ರಮುಖ ಹುದ್ದೆಗಾಗಿ ಬಯಸಿದ್ದ ಅಧಿಕಾರಿಯೋಬ್ಬರಿಗೆ ಇವನು ಮೊಬೈಲ್ ಕರೆ ಮಾಡಿ, ನಾಳೆ ಬಂದು ನೋಡು ಎಂದು ಹೇಳುತ್ತಾನೆ. ತನ್ನ ಸರ್ ಎಂದು ಕರೆಯುವಂತೆ ಆ ಪೊಲೀಸ್ ಅಧಿಕಾರಿಗೆ ತಾಕೀತು ಮಾಡುತ್ತಾನೆ. ರೀ ಏನು ತಿಳಿದುಕೊಂಡಿದ್ದೀರಾ? ಸ್ವತಃ ಮುಖ್ಯಮಂತ್ರಿಯೇ ನನ್ನನ್ನು ಸರ್ ಅಂತ ಕರೀತಾರೆ.

ಚಳಿಯಲ್ಲೂ ರಾಹುಲ್‍ ಟೀ ಶರ್ಟ್ ಧರಿಸೋದೇಕೆ..? ಇದರ ಹಿಂದಿದೆ ಮನಕಲಕುವ ಕಥೆ

ನೀನು ಸರ್ ಅಂತಿಲ್ಲ ಅಂತ ಆ ಪೊಲೀಸ್ ಅಧಿಕಾರಿಗೆ ಸ್ಯಾಂಟ್ರೋ ರವಿ ಎಂಬ ವ್ಯಕ್ತಿ ಧಮ್ಕಿ ಹಾಕುತ್ತಾನೆ. ತನ್ನನ್ನು ಕೆಕೆ ಅತಿಥಿಗೃಹದಲ್ಲಿ ಭೇಟಿಯಾಗಬೇಕೆಂದು 1996ರ ಬ್ಯಾಚ್ ಅಧಿಕಾರಿಗೆ ಸೂಚಿಸುತ್ತಾನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಸ್ಯಾಂಟ್ರೋ ರವಿ ಪ್ರಕರಣದ ನಂತರ ಸರ್ಕಾರ ಬಾಲಬ್ರೂಯಿ ಅತಿಥಿ ಗೃಹಕ್ಕೆ ನಿರ್ಬಂಧ ವಿಧಿಸಿದೆ.

kumara krupa, guest house, restricted, Bengaluru,

Articles You Might Like

Share This Article