ಬೆಂಗಳೂರು,ಫೆ.7- ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಯಿಂದ ನಮಗೆ ಮತ ವಿಭಜನೆಯಾಗುವುದಿಲ್ಲ. ಮೊದಲು ಜೆಡಿಎಸ್ ಪಕ್ಷ ಉಳಿಸಿಕೊಳ್ಳಲಿ ಎಂದು ಸಚಿವ ಅಶ್ವಥ್ ನಾರಾಯಣ ತಿರುಗೇಟು ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಜಾತಿ ಹೆಸರಿನಲ್ಲಿ ಹೇಳಿದ್ದಾರೆ. ನಮ್ಮದು ಜಾತಿ ಮೀರಿದ ಪಕ್ಷ. ಜಾತಿ ಹೆಸರಿನಲ್ಲಿ ಹೇಳಿಕೆ ಕೊಟ್ಟಿದ್ದು ಖಂಡನೀಯ. ಧರ್ಮಾತೀತವಾಗಿ ನಾವು ಕೆಲಸ ಮಾಡುತ್ತೇವೆ.
ಕುಮಾರಸ್ವಾಮಿ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅವರೇ ತಮ್ಮ ಹೇಳಿಕೆಯಿಂದ ವಿಚಲಿತರಾಗಿದ್ದಾರೆ. ಜಾತಿ ವಿರುದ್ಧ ಕೊಟ್ಟ ಹೇಳಿಕೆಯನ್ನು ಖಂಡಿಸುತ್ತೇವೆ. ಅವರು ಕ್ಷಮೆ ಯಾಚಿಸುವುದು ಸೂಕ್ತ ಎಂದು ನುಡಿದರು.
ಬಿಎಂಟಿಸಿ ಎಂಡಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದ ಚಾಲಕ ಸಸ್ಪೆಂಡ್
ಬಿಜೆಪಿ ನಾಯಕರು ನಪುಂಸಕರು ಎಂಬ ಜೆಡಿಎಸ್ ಟ್ವೀಟ್ ಮಾಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಶ್ವಥ್ ನಾರಾಯಣ, ವೆಸ್ಟೆಂಡ್ ಹೋಟೇಲ್‍ನಲ್ಲಿದ್ದವರು ಹತಾಶರಾಗಿ ಅಕಾರ ನಡೆಸುವುದಕ್ಕೆ ಆಗೋಲ್ಲ ಎಂದು ಕೈಚೆಲ್ಲಿದರು. 20:20ನಲ್ಲಿದ್ದಾಗ ಅವರು ಹೇಗೆ ನಡೆದುಕೊಂಡರು? ಕಾಂಗ್ರೆಸ್ ಜೊತೆ ಇದ್ದಾಗ ಹೇಗೆ ನಡೆದುಕೊಂಡರು? ಎಂದು ಪ್ರಶ್ನಿಸಿದ ಅವರು, ಅಕಾರ ಸಿಕ್ಕಾಗ ಏನೂ ಮಾಡಲಿಲ್ಲ. ಈಗ ಮೈಪರಚಿಕೊಂಡರೆ ಏನು ಮಾಡೋಕೆ ಆಗುತ್ತೆ? ಇದು ಜೆಡಿಎಸ್‍ನವರ ಕಾಯಿಲೆ ಎಂದು ಅಪಹಾಸ್ಯ ಮಾಡಿದರು.
ಉಗ್ರ ಭಾಷಣ ಮಾಡಿ ಸಿದ್ದರಾಮಯ್ಯ ಉಗ್ರವಾದಿ ಆಗಿದ್ದಾರೆ. ಸಿದ್ದರಾಮಯ್ಯ ಸಾಧನೆ ಏನು, ರೀಡೂ ಕೇಸು, ಭ್ರಷ್ಟಾಚಾರ ಮಾಡುವುದು ಅವರ ಸಾಧನೆ. ಅರ್ಜಿ ಹಾಕದೆನೇ ಶಿಕ್ಷಕರನ್ನು ಮಾಡುವುದು, ಜನರ ಮೇಲೆ ಸಾಲದ ಹೊರೆ ನೀಡಿದವರು ಅವರು. ಇದು ಸಿದ್ದರಾಮಯ್ಯನವರ ಸಾಧನೆ. ಸಿದ್ರಾಮುಲ್ಲಾ ಖಾನ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಸಿಡಿ ಯಾತ್ರೆ ಮಾಡಿಕೊಳ್ಳಲಿ, ಡಿಕೆಶಿ ಯಾರಾದಾರೂ ಮಾಡಿಕೊಳ್ಳಲಿ. ಸಿಡಿ ಫ್ಯಾಕ್ಟರಿ ಯಾರು ಮಾಡುವುದು ಎಂದು ಪ್ರಶ್ನಿಸಿದರು.
ವಿಜಯ ಸಂಕಲ್ಪ ಅಭಿಯಾನ ಯಶಸ್ವಿ: ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಡಿ ಒಟ್ಟು 40,50,351 ಸದಸ್ಯತ್ವ ನೋಂದಣಿ ಮಾಡಿದ್ದೇವೆ ಎಂದು ಅಭಿಯಾನದ ಸಂಚಾಲಕರೂ ಆಗಿರುವ ಅಶ್ವತ್ಥನಾರಾಯಣ್ ತಿಳಿಸಿದರು.
ಅಭಿಯಾನದಲ್ಲಿ 58,186 ಬೂತ್ ಪೈಕಿ 39,572 ಬೂತ್‍ಗಳ ಸಂಪರ್ಕ ಮಾಡಲಾಗಿದೆ.
22,55,562 ಮನೆಗಳ ಸಂಪರ್ಕ ಮಾಡಿದ್ದೇವೆ. 13,35,254 ಮನೆಗಳ ಮೇಲೆ ಸ್ಟಿಕರ್ ಅಂಟಿಸಲಾಗಿದೆ. 4,91,067 ವಾಹನಗಳ ಮೇಲೆ ಸ್ಟಿಕರ್ ಅಂಟಿಸಲಾಗಿದೆ. 1.94 ಲಕ್ಷ ಗೋಡೆ ಬರಹ ಮಾಡಲಾಗಿದೆ. 31,260 ಬೂತ್‍ಗಳಲ್ಲಿ ಮನ್ ಕಿ ಬಾತ್ ಅನ್ನು 5 ಲಕ್ಷ ಜನರು ಆಲಿಸಿದ್ದಾರೆ. ಅಲ್ಲದೆ, 32,489 ಡಿಜಿಟಲ್ ವಾಲ್ ಪೈಂಟಿಂಗ್ ಮಾಡಲಾಗಿದೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ ಮತ್ತೆ ಜಾರಿಗೆ ಬರಲಿದೆ ಹೊಸ ಜಾಹೀರಾತು ನೀತಿ
ಈ ಮೂಲಕ ಪಕ್ಷದ ಸಂದೇಶವನ್ನು ತಲುಪಿಸಿದ್ದೇವೆ. ವಿಜಯಸಂಕಲ್ಪ ಅಭಿಯಾನ ಯಶಸ್ವಿಗೊಳಿಸಿದ್ದೇವೆ. ಜನರ ಮನೆ ಬಾಗಿಲಿಗೆ ನಾವು ತಲುಪಿದ್ದೇವೆ. ಮತ್ತೊಮ್ಮೆ ಬಿಜೆಪಿ ಅಕಾರಕ್ಕೆ ತರಬೇಕು. ಬಸ್ ಹತ್ತಿ ಕೈ ಇಟ್ಕೊಂಡು ಹೋಗಿಲ್ಲ. ನಾವು ಪ್ರತಿ ಮನೆಗಳನ್ನು ತಲುಪಿದ್ದೇವೆ. ಉತ್ತಮ ಜನ ಬೆಂಬಲವು ನಮಗೆ ಸಿಕ್ಕಿದೆ ಎಂದು ಹೇಳಿದರು.
ಬಿಜೆಪಿಯೇ ಭರವಸೆ ಎಂಬ ಅಭಿಯಾನ ಇದಾಗಿತ್ತು. ಕನಿಷ್ಠ 150 ಶಾಸಕರನ್ನು ಗೆಲ್ಲಲು ಇದು ಪೂರಕ. ಸಶಕ್ತ ಬೂತ್ ಮೂಲಕ ಬೂತ್ ವಿಜಯ ಅಭಿಯಾನ ನಡೆದಿದೆ. ಜನರ ಸಹಕಾರ, ಬೆಂಬಲ ಕೋರಿದ್ದೇವೆ ಎಂದು ತಿಳಿಸಿದರು.
ಮಂಗಳೂರು- ಉಡುಪಿಯಲ್ಲಿ ಶೇ 100 ಮನೆಗಳ ಸಂಪರ್ಕ ಆಗಿದೆ. ದ್ವೀಪವಾಸಿಗಳನ್ನೂ ಸಂಪರ್ಕಿಸಲಾಗಿದೆ. ಕೊಡಗು, ಶಿವಮೊಗ್ಗ, ಮೈಸೂರಿನಲ್ಲಿ ಶೇ 100 ಮನೆ ಸಂಪರ್ಕ ನಡೆಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರನ್ನೂ ಸಂಪರ್ಕಿಸಲಾಗಿದೆ ಎಂದು ಅವರು ತಿಳಿಸಿದರು.
ನಮ್ಮ ನಾಯಕತ್ವ ಬಹಳ ಸ್ಪಷ್ಟವಿದೆ. ಸಿಎಂ, ಕಟೀಲ್,ಬಿಎಸ್ ವೈ ಎಲ್ಲರೂ ಇದ್ದಾರೆ. ಸಿಎಂ ಯಾರು ಎಂಬುದು ಪಕ್ಷ ನಿರ್ಧರಿಸುತ್ತದೆ. ನಮ್ಮ ನಾಯಕರ ಜೊತೆ ಚುನಾವಣೆಗೆ ಹೋಗುತ್ತಿದ್ದೇವೆ. ಸಿಎಂ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತದೆ. ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದು ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದರು.
Kumaraswamy, BJP, minister, ashwath narayan,