ಬೆಂಗಳೂರು,ಮಾ.9-ರಾಜಧಾನಿ ಬೆಂಗಳೂರ ಸೇರಿದಂತೆ ಭಾಗಗಳಲ್ಲಿ ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ನದಿನೀರು ಯೋಜನೆಯನ್ನು ತಮಿಳುನಾಡಿನ ಒಪ್ಪಿಗೆ ಇಲ್ಲದೆ ರಾಜ್ಯ ಸರ್ಕಾರ ಇಚ್ಛಾಸಕ್ತಿ ಪ್ರದರ್ಶಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಈ ಯೋಜನೆಯನ್ನು ಅನುಷ್ಠಾನ ಮಾಡಲು ತಮಿಳುನಾಡು ಇಲ್ಲವೇ ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಅಗತ್ಯವಿಲ್ಲ. ಪರಿಸರ ಇಲಾಖೆಯಿಂದ ಒಪ್ಪಿಗೆ ಪಡೆದು ಯೋಜನೆಯನ್ನು ಅನುಷ್ಠಾನ ಮಾಡಬೇಕು. ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಅವರು ಹೆಚ್ಚಿನ ಶ್ರಮ ವಹಿಸಿದರೆ ಇದು ಸಾಧ್ಯ ಎಂದು ಸಲಹೆ ಮಾಡಿದರು.
ಪಾದಯಾತ್ರೆ ಮಾಡುವುದರಿಂದ ಯೋಜನೆ ಅನುಷ್ಠಾನ ಸಾಧ್ಯವಿಲ್ಲ. ಹೇಗಿದ್ದರೂ ಸರ್ಕಾರ ಇದಕ್ಕೆ ಬಜೆಟ್‍ನಲ್ಲಿ ಒಂದು ಸಾವಿರ ಕೋಟಿ ಅನುದಾನವನ್ನು ಘೋಷಣೆ ಮಾಡಿದೆ. ಇದಕ್ಕೆ ಕೆಲವರು ನಮ್ಮಿಂದ ಹೆದರಿ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ ಎಂದು ಬೀಗುತ್ತಿದ್ದಾರೆ ಎಂದು ಕಾಂಗ್ರೆಸ್‍ನವರಿಗೆ ತಿರುಗೇಟು ನೀಡಿದರು.
ನಮ್ಮ ನೀರು ನಮ್ಮ ಹಕ್ಕು ಎಂದು ಈಗ ಕೆಲವರು ಪಾದಯಾತ್ರೆ ಹೊರಟಿದ್ದಾರೆ. ಮಹದಾಯಿ ಯೋಜನೆಯನ್ನು ಅನುಷ್ಠಾನ ಮಾಡಬೇಕೆಂದು ಗದಗ ಮತ್ತು ನರಗುಂದಲ್ಲಿ ರೈತರು ಧರಣಿ ನಡೆಸುತ್ತಿದ್ದರು. ಆಗ ರೈತರು, ಮಹಿಳೆಯರು, ಮಕ್ಕಳು ಎನ್ನದೆ ಮನೆ ಮನೆಗೆ ನುಗ್ಗಿ ಪೆÇಲೀಸರ ಲಾಠಿಯಿಂದ ಹೊಡಿಸಿದ್ದೀರಿ. ಆವಾಗ ನಿಮಗೆ ಬದ್ದತೆ ಇರಲಿಲ್ಲವೇ ಎಂದು ಕಾಂಗ್ರೆಸ್‍ನವರನ್ನು ಪ್ರಶ್ನಿಸಿದರು.
ರಾಜ್ಯದಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ನಾವೇ ಅನುಷ್ಠಾನ ಮಾಡುತ್ತಿದ್ದೇವೆ, ಅಣೆಕಟ್ಟುಗಳನ್ನು ನಾವೇ ಕಟ್ಟಿಸಿದ್ದೇವೆ ಎಂದು ಕೆಲವರು ಮಾತನಾಡುತ್ತಾರೆ. ಅಕಾರದಲ್ಲಿದ್ದಾಗ ಏನೂ ಮಾಡದ ಕೆಲವರು ಈಗ ಪಾದಯಾತ್ರೆ ಹೊರಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ನಮ್ಮ ವಿಪಕ್ಷ ನಾಯಕರು ತಮಗೆ ಕೇಂದ್ರಕ್ಕೆ ಹೋಗಿ ಗ್ರ್ಯಾಂಟ್ ತರಲು ಒತ್ತಡ ಹಾಕಿ ಅಂದಿದ್ದಾರೆ. ಹಿಂದೆ ಬರುತ್ತಿದ್ದ ಕೇಂದ್ರದ ಅನುದಾನಗಳು 73% ಯಿಂದ 49% ಕ್ಕೆ ಇಳಿದಿದೆ ಎಂದು ವಿಪಕ್ಷ ನಾಯಕರು ಹೇಳಿದರು. ಇದಕ್ಕೆ ಏನು ಕಾರಣ? ಸರ್ಕಾರ ಬಜೆಟ್‍ನಲ್ಲಿ ಕೊರತೆ ಯಾಕೆ ತೋರಿಸಿದೆ? ಕೇಂದ್ರದ ಅನುಕಂಪ ಪಡೆಯಲು ಕೊರತೆ ತೋರಿಸಿದ್ದೀರಿ ಎಂದು ಪ್ರಶ್ನಿಸಿದರು.
