ರಾಯಚೂರು, ಜ.29-ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ಇಂದು ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಶ್ರೀ ಮಠದ ಪೀಠಾಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರ ಆಶೀರ್ವಾದವನ್ನು ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ರಾಯರ ದರ್ಶನ ಪಡೆಯಲಾಗಿರಲಿಲ್ಲ. ಪಂಚರತ್ನ ರಥಯಾತ್ರೆಯಶಸ್ಸಿಗೆ ಆಶೀರ್ವಾದ ಮಾಡಲು ರಾಯರು ಕರಿಸಿಕೊಂಡಿದ್ದಾರೆ. ರಾಯರ ಸನ್ನಿಯಲ್ಲಿ ನನ್ನ ಗುರಿ ಮುಟ್ಟುವಂತೆ ಪ್ರಾರ್ಥಿಸಿದ್ದೇನೆ. ಬಡ ಜನತೆಯ ಕಣ್ಣೀರು ಒರೆಸಲು ಸ್ವತಂತ್ರ ಸರ್ಕಾರ ಕೊಡುವಂತೆ ಬೇಡಿರುವುದಾಗಿ ತಿಳಿಸಿದರು.




ಅನಿತಾಕುಮಾರ ಸ್ವಾಮಿ ಅವರು ಮಾತನಾಡಿ, ಹಾಲ್ಲಾದರೂ ಹಾಕು, ನೀರಲ್ಲಾದರೂ ಹಾಕು ಎಂದು ಬೇಡಿರುವೆ. ನಾನು ರಾಯರ ಭಕ್ತೆ. ನಾನು ಆಗಾಗ ಮಂತ್ರಾಲಯಕ್ಕೆ ಬರುತ್ತಿರುವೆ ಎಂದರು.
ನಂತರ ಮಂತ್ರಾಲಯದ ಗೋ ಶಾಲೆಗೆ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿಯವರ ಭೇಟಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಸಾ.ರಾ.ಮಹೇಶ್, ಭೋಜೇಗೌಡ, ಮಾಜಿ ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ಸಿದ್ದು ಬಂಡಿ, ಈ. ವಿನಯಕುಮಾರ, ಶಿವಶಂಕರ ವಕೀಲ, ಬುಡ್ಡನಗೌಡ ಮತ್ತಿತರರಿದ್ದರು.
#HDKumaraswamy, #AnitaKumaraswamy, #Mantralayam,