ಬೆಂಗಳೂರು,ಜೂ.1-ಭಕ್ತಾದಿಗಳಿಗೆ ನಾಳೆಯಿಂದ ಎರಡು ದಿನಗಳ ಬನಶಂಕರಿ ದೇವಿಯ ದರ್ಶನ ಭಾಗ್ಯವಿರಲ್ಲ.
ಪ್ರತಿ 12 ವರ್ಷಗಳಿಗೊಮ್ಮೆ ನಡೆಯಲಿರುವ ಕುಂಬಾಭಿಷೇಕದ ಪ್ರಯುಕ್ತ ಇಂದಿನಿಂದ ಮೂರು ದಿನಗಳ ಕಾಲ ವಿವಿಧ ಪೂಜಾ ವಿಧಾನಗಳು ನೆರವೇರಲಿರುವುದರಿಂದ ನಾಳೆ ಮತ್ತು ನಾಡಿದ್ದು, ದೇವಿಯ ದರ್ಶನವಿರಲ್ಲ.
ನಾಳೆಯಿಂದ ಎರಡು ದಿನ ಪುನರಷ್ಟಬಂಧ ಸಂಪೋಕ್ಷಣಾಕ ಕುಂಭಾಭಿಷೇಕ ಮಹೋತ್ಸವ ಆಯೋಜನೆ ಮಾಡಲಾಗಿರುವುದರಿಂದ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಎರಡು ದಿನ ಬನಶಂಕರಿ ತಾಯಿ ಮೂಲ ವಿಗ್ರಹ ದರ್ಶನ ಭಕ್ತರಿಗಿಲ್ಲರವುದಿಲ್ಲ ಆದರೆ, ಶಾಕಾಂಬರಿ ದೇವಿಯ ದರ್ಶನ ಇರಲಿದ್ದು, ದೀಪೋತ್ಸವಕ್ಕೂ ಕೂಡ ದೇವಾಲಯದಲ್ಲಿ ಅವಕಾಶವಿರಲಿದೆ.
ಭಾರತ-ಚೀನಾ ನಡುವೆ ಶಾಂತಿ ಮಾತುಕತೆ ಪುನರಾರಂಭ
ಮಹೋತ್ಸವದ ಹಿನ್ನಲೆಯಲ್ಲಿ ನಾಳೆ ದೇವಾಲಯದಲ್ಲಿ ಲಕ್ಷ ಕುಂಕುಮಾರ್ಚನೆ ಹಾಗೂ ಬೃಹತ್ ಯಾಗ ಹೋಮ ನಡೆಯಲಿದೆ ಎಂದು ಬನಶಂಕರಿ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
108 ಮುತ್ತೈದೆಯರು ನಾಳೆ ಸಂಜೆ ಏಕಕಾಲಕ್ಕೆ ಲಕ್ಷ ಕುಂಕುಮಾರ್ಚನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಇನ್ನಿತರ ಹಲವಾರು ಯಾಗ ಹೋಮಗಳು ನಡೆಯಲಿವೆ. ಜೂ.4 ರ ಭಾನುವಾರ ಶತಚಂಡಿ ಯಾಗ ಹಾಗೂ ಕುಂಭಾಭಿಷೇಕ ಕಾರ್ಯಕ್ರಮಗಳು ನೆರವೇರಲಿವೆ.
ಎಲ್ಲಾ ಪೂಜಾಕಾರ್ಯಕ್ರಮಗಳು ಪೂರ್ಣಗೊಂಡ ನಂತರ ಅಂದರೆ ಭಾನುವಾರ ಬೆಳಿಗ್ಗೆ 11.30 ರ ನಂತರ ಭಕ್ತರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.
Kumbabishekam, #bengaluru, #banashankari, #temple,