ಪ್ರತ್ಯೇಕ ಅಪಘಾತ : ಐವರು ಪ್ರಾಣಾಪಯದಿಂದ ಪಾರು

Social Share

ಕುಣಿಗಲ್, ಫೆ.8- ರಾಷ್ಟ್ರೀಯ ಹೆದ್ದಾರಿ-75ರ ಅಂಚೆಪಾಳ್ಯ ಬಳಿ ನಡೆದ ಎರಡು ಪ್ರತ್ಯೇಕ ಭೀಕರ ಅಪಘಾತದಲ್ಲಿ ಐವರು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ತಾಲೂಕಿನ ಹುತ್ರಿದುರ್ಗ ಗ್ರಾಮದ ಮನು ಎಂಬ ಯುವಕ ಕೆಲಸದ ನಿಮಿತ್ತ ಬೈಕ್‍ನಲ್ಲಿ ಅಂಚೆಪಾಳ್ಯಕ್ಕೆ ಬಂದು ಹೊಟೇಲ್ ಮುಂಭಾಗದ ರಸ್ತೆಬದಿಯಲ್ಲಿ ಬೈಕ್ ಮೇಲೆ ಕುಳಿತುಕೊಂಡಿದ್ದರು. ಈ ವೇಳೆ ಹಾಸನ ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆಯ ಎಡಬದಿಗೆ ವೇಗವಾಗಿ ನುಗ್ಗಿದ್ದು, ಇದನ್ನು ಗಮನಿಸಿದ ಮನು ಕ್ಷಣಾರ್ಧದಲ್ಲಿ ಬೈಕ್ ಬಿಟ್ಟು ಓಡಿ ಹೊಗಿದ್ದಾನೆ. ಬೈಕ್ ಸಂಪೂರ್ಣ ನಜ್ಜುನುಜ್ಜಾಗಿ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಡ್ರೋನ್‍ಗಳ ನಿರ್ವಹಣೆಯಲ್ಲಿ ಅಮೆರಿಕಾ-ಭಾರತ ಬಾಂಧವ್ಯ ವೃದ್ಧಿ

ಪಲ್ಟಿಯಾದ ಕಾರು: ಮತ್ತೊಂದು ಘಟನೆಯಲ್ಲಿ ಬೆಂಗಳೂರು-ಹೆಗ್ಗನಹಳ್ಳಿಯಿಂದ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿ ಬೆಟ್ಟಹಳ್ಳಿ ಗ್ರಾಮಕ್ಕೆ ಹಬ್ಬಕೆಂದು ಹೋಗುತ್ತಿದ್ದ ಇನ್ನೋವಾ ಕಾರು ಚಾಲಕ ರಸ್ತೆ ಉಬ್ಬು ಇರುವುದನ್ನು ಅರಿಯದೆ ವೇಗವಾಗಿ ಬಂದಿದ್ದಾನೆ.

ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಕೊಡುಗೆ ಏನು?: ಕುಮಾರಸ್ವಾಮಿ

ಆದರೆ, ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಉಬ್ಬಿನಿಂದ ಹಾರಿ, ಸುಮಾರು ಎರಡು ಅಡಿ ಎತ್ತರಕ್ಕೆ ಕಾರು ಹಾರಿದೆ. ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಿದ್ದ ಸ್ಕಾರ್ಪಿಯೋ ಕಾರಿಗೆ ಡಿಕ್ಕಿ ಹೊಡೆದಿದೆ. ವೇಗದ ರಭಸಕ್ಕೆ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಹೆಗ್ಗನಹಳ್ಳಿಯ ಶ್ರೀನಿವಾಸ್ ಸೇರಿದಂತೆ ನಾಲ್ವರು ಇದ್ದರು ಎನ್ನಲಾಗಿದ್ದು, ಹಲವರಿಗೆ ಸಣ್ಣಪುಟ್ಟಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Kunigal, accident, Five, people, escaped,

Articles You Might Like

Share This Article