ಕಾರ್ಮಿಕರ ಮಕ್ಕಳಿಗೆ ಪೈಲಟ್ ತರಬೇತಿ

Social Share

ಬೆಂಗಳೂರು, ಮಾ.14- ಶ್ರಮಿಕ ವರ್ಗ ವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಮಹತ್ವಾ ಕಾಂಕ್ಷೆಯೊಂದಿಗೆ ವಿವಾಹ ಸಹಾಯಧನ, ಉನ್ನತ ಶಿಕ್ಷಣಕ್ಕೆ ತರಬೇತಿ ಸೇರಿದಂತೆ ಹಲವು ಯೋಜನೆಗಳನ್ನು ಜಾರಿ ಮಾಡಿರುವ ರಾಜ್ಯ ಕಾರ್ಮಿಕ ಇಲಾಖೆ, ಇದೀಗ ಕಾರ್ಮಿಕ ಮಕ್ಕಳ ಬಾನಂಗಳ ಕನಸು ನನಸು ಮಾಡುವ ವಿಶಿಷ್ಟ ಯೋಜನೆ ಜಾರಿಗೆ ಮುಂದಾಗಿದೆ.

ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣದ ತರಬೇತಿ ನೀಡುತ್ತಿರು ವಂತೆಯೇ ಪೈಲೆಟ್ ತರಬೇತಿ ನೀಡಲು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನಿರ್ಧರಿಸಿದ್ದು, ಈಗಾಗಲೇ ಪ್ರಕ್ರಿಯೆ ಆರಂಭಿಸಿದೆ.
ಪ್ರಧಾನಿ ನರೇಂದ್ರಮೋದಿ ಅವರ ಆಶಯದಂತೆ 2ನೇ ಹಂತದ ನಗರಗಳಿಗೂ ವೈಮಾನಿಕ ಸೇವೆ ಒದಗಿಸುವ ಉಡಾನ್ ಯೋಜನೆ ಯಿಂದ ವೈಮಾನಿಕ ಕ್ಷೇತ್ರ ವಿಸ್ತಾರಗೊಳ್ಳುತ್ತಿದೆ.

ತರಬೇತಿ ಪೂರ್ಣಗೊಳಿಸಿದವರಿಗೆ ಉದ್ಯೋಗ ಲಭಿಸುವುದು ನಿಶ್ಚಿತ. ಹೀಗಾಗಿ ಕಾರ್ಮಿಕ ಇಲಾಖೆ ಪೈಲಟ್ ಪಕ್ಕಾ ಎಂಬ ಸೂತ್ರದಡಿ ಪೈಲೆಟ್ ತರಬೇತಿ ಯೋಜನೆ ರೂಪಿಸಿ ಜಾರಿ ಮಾಡುತ್ತಿದೆ.

ರಾಜ್ಯದ ವಿವಿಧೆಡೆಗಳಿಂದ ವಿಮಾನ ಚಲಾಯಿಸುವ (ಪೈಲೆಟ್) ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಿ ತಾಂತ್ರಿಕ ರೀತಿಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೊಂದಾಯಿತರ ಮಕ್ಕಳನ್ನು ಆಯ್ಕೆ ಮಾಡಲಾಗಿದೆ.

ರೋಹಿಂಗ್ಯಗಳ ಒಳನುಸಳುವಿಕೆಗೆ ನೆರವು ನೀಡುತ್ತಿದ್ದ ಆರೋಪಿಯ ಬಂಧನ

ಆಯ್ಕೆಯಾದ ಅಭ್ಯರ್ಥಿಗಳ ಅರ್ಜಿ ಶುಲ್ಕದಿಂದ ಆರಂಭಗೊಂಡು ತರಬೇತಿ ಶುಲ್ಕ, ಎಫ್‍ಆರ್ ಟಿಒಎಲ್ ಪರೀಕ್ಷಾ ಶುಲ್ಕ, ಗ್ರೌಂಡ್ ಸಬ್ಜೆಕ್ಟ್ ಪರೀಕ್ಷಾ ಶುಲ್ಕ, ವೈದ್ಯಕೀಯ ಪರೀಕ್ಷಾ ಶುಲ್ಕ ಹೀಗೆ ಎಲ್ಲ ಖರ್ಚು ವೆಚ್ಚಗಳನ್ನು ಮಂಡಳಿಯೇ ಒದಗಿಸುವ ಮೂಲಕ ಕಾರ್ಮಿಕ ಮಕ್ಕಳ ಪೈಲೆಟ್ ತರಬೇತಿಯನ್ನು ಸಂಪೂರ್ಣ ಉಚಿತವಾಗಿ ದೊರಕಿಸಿ ಕೊಡುವ ಯೋಜನೆ ಜಾರಿ ಮಾಡಲಾಗಿದೆ.

ದೇಶದಲ್ಲೇ ಮೊಟ್ಟ ಮೊದಲು ಹಲವು ಯೋಜನೆಗಳನ್ನು ಜಾರಿ ಮಾಡಿರುವ ಕಾರ್ಮಿಕ ಇಲಾಖೆ ಪೈಲೆಟ್ ತರಬೇತಿ ಯೋಜನೆಯಡಿ ಪ್ರತಿ ಅಭ್ಯರ್ಥಿಗೆ 37 ಲಕ್ಷ ರೂ. ಗಳನ್ನು ವ್ಯಯಿಸಲಿದೆ.

ಮೊಟ್ಟ ಮೊದಲ ಬಾರಿಗೆ ವಸತಿ ಯೋಜನೆ ಜತೆಗೆ ಕಾರ್ಮಿಕ ಮಕ್ಕಳಿಗೆ ಉನ್ನತ ಶಿಕ್ಷಣದ ತರಬೇತಿ ಒದಗಿಸಲಾಗುತ್ತಿದೆ. ಈ ಯೋಜನೆ ಗಳಿಗೆ ಶ್ರಮಿಕ ವರ್ಗದಿಂದ ವ್ಯಕ್ತ ವಾದ ಅಭೂತಪೂರ್ವ ಪ್ರತಿಕ್ರಿಯೆ ಯಿಂದ ಮಂಡಳಿಯು ಇದೀಗ ಶ್ರಮಿಕ ವರ್ಗದ ಅವಲಂಭಿತರನ್ನು ವೈಮಾನಿಕ ಕ್ಷೇತ್ರಕ್ಕೆ ಪರಿಚಯಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ನನಸಾಗಿಸುತ್ತಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ.

ಕಾರ್ಮಿಕ ಸಚಿವ ಮತ್ತು ಮಂಡಳಿ ಅಧ್ಯಕ್ಷ ಶಿವರಾಂ ಹೆಬ್ಬಾರ್ ನೇತೃತ್ವದಲ್ಲಿ ನಡೆದ 36ನೇ ಮಂಡಳಿ ಸಭೆಯಲ್ಲಿ 2022-23ನೇ ಸಾಲಿನಲ್ಲಿ 70 ಕೋಟಿ ರೂ. ವ್ಯಯಿಸಲು ನಿರ್ಣಯ ಕೈಗೊಳ್ಳಲಾಗಿತ್ತು.

ಪೈಲೆಟ್ ತರಬೇತಿ ಸಂಪೂರ್ಣ ತಾಂತ್ರಿಕ ವಿಷಯವಾಗಿರುವುದರಿಂದ ಅಭ್ಯರ್ಥಿಗಳ ಆಯ್ಕೆಯನ್ನು ಜಕ್ಕೂರು ತರಬೇತಿ ಸಂಸ್ಥೆಯ ಹೆಗಲಿಗೆ ವಹಿಸಿ ಕಳೆದ ನವೆಂಬರ್ ನಲ್ಲಿ ಪೈಲಟ್ ತರಬೇತಿಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೊಂದಾಯಿತ ರಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಇಲಾಖೆಯ ಈ ಮಹತ್ವಾಕಾಂಕ್ಷಿ ಯೋಜನೆ ಲಾಭ ಪಡೆಯಲು ಒಟ್ಟಾರೆ 1858 ಅರ್ಜಿಗಳು ಸಲ್ಲಿಕೆ ಯಾಗಿದ್ದು, ಈ ಅರ್ಜಿಗಳ ಪೈಕಿ 1573 ಅರ್ಜಿಗಳು ಕ್ರಮಬದ್ಧ ವಾಗಿದ್ದವು.

ಸಂಸತ್‍ನಲ್ಲಿ ಇಂದೂ ಪ್ರತಿಧ್ವನಿಸಿದ ರಾಹುಲ್‍ ವಿವಾದಿತ ಹೇಳಿಕೆ

ಪಿಯುಸಿಯಲ್ಲಿ ವಿಜ್ಞಾನ ವಿಷಯ ದಲ್ಲಿ ತೇರ್ಗಡೆ ಹೊಂದಿರುವ ವೈದ್ಯಕೀಯ ಪರೀಕ್ಷೆಗಳಲ್ಲಿ ಉತ್ತೀರ್ಣ ರಾಗಿರುವ 17 ಮಂದಿ ಯನ್ನು ಈಗಾಗಲೇ ಆಯ್ಕೆ ಮಾಡ ಲಾಗಿದ್ದು, ಪ್ರಸ್ತುತ ಆಯ್ಕೆ ಆಗಿರುವ ಅಭ್ಯರ್ಥಿಗಳ ಪೈಕಿ ಮೂರು ಮಹಿಳಾ ಅಭ್ಯರ್ಥಿಗಳೂ ಇದ್ದಾರೆ.

ಒಟ್ಟಾರೆ ಎರಡು ವರ್ಷಗಳ ತರಬೇತಿಯ ನಂತರ ಅಭ್ಯರ್ಥಿಗಳು ವಾಣಿಜ್ಯ ಪೈಲೆಟ್ ಲೈಸೆನ್ಸ್ ಪಡೆಯಲಿದ್ದು, ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗಾವಕಾ ಪಡೆಯಲಿದ್ದಾರೆ.

Labor, workers, children, Pilot, training, Minister, Shivaram Hebbar,

Articles You Might Like

Share This Article