ಥಾಣೆ, ಡಿ .8 – ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಗುತ್ತಿಗೆದಾರನೊಬ್ಬನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಗಣೇಶ್ ಕೊಕಾಟೆ ಮೃತ ಗುತ್ತಿಗೆದಾರನಾಗಿದ್ದು, ಕಾರ್ಮಿಕ ಗುತ್ತಿಗೆ ನೀಡುವಲ್ಲಿನ ಪೈಪೋಟಿ ಹಿನ್ನಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕಳೆದ ರಾತ್ರಿ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಥಾಣೆ-ಭಿವಂಡಿ ರಸ್ತೆಯ ಕಶೇಲಿ ಗ್ರಾಮದ ಬಳಿ ಬಂದೂಕಿನಿಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಸುದ್ದಿ ತಿಳಿದ ಸ್ಥಳೀಯ ಪೊಲೀಸರು ಮತ್ತು ಅವರ ಸಂಬಂಧಿಕರು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ನಾಪೆರ್ಪೋಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‍ಪೆಕ್ಟರ್ ಮದನ್ ಬಲ್ಲಾಳ್ ತಿಳಿಸಿದ್ದಾರೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ(LiVE)
ಸ್ಥಳದಿಂದ ಪರಾರಿಯಾಗಿರುವ ದುಷ್ಕರ್ಮಿಯನ್ನು ಗುರುತಿಸಲಾಗಿದ್ದು, ಸೆರೆ ಹಿಡಿಯಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಗಂಗೂಲಿ, ರಿಕ್ಕಿ ದಾಖಲೆ ಸರಿಗಟ್ಟಲು ಕೊಹ್ಲಿ ತವಕ
ಮೃತ ಕಾರ್ಮಿಕ ಗುತ್ತಿಗೆದಾರ ಕೊಕಾಟೆ ಅವರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಈ ವರ್ಷ ಸೆಪ್ಟೆಂಬರ್ 18 ರಂದು, ಕೊಕಾಟೆ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ನಾಲ್ಕೈದು ಜನರು ಗುಂಡು ಹಾರಿಸಿದಾಗ ಅವರ ಬದುಕುಳಿದಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದರು ಅದರೆ ಈಗ ಹತ್ಯೆ ಮಾಡಲಾಗಿದೆ.
Labour, contractor, shot, dead, Bhiwandi,