ಮಂಗಳಮುಖಿಯರಿಗೆ ಸರ್ಕಾರದಿಂದ ಜಮೀನು, ದೇಶದಲ್ಲೇ ಮೊದಲು

Social Share

ಟಿ.ದಾಸರಹಳ್ಳಿ , ನ.3- ತುಳಿತಕ್ಕೊಳಗಾಗಿರುವ ಮಂಗಳಮುಖಿಯರ ಬದುಕು ಭವಿಷ್ಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಆ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದರು.

ದಾಸನಪುರ ಹೋಬಳಿ, ಗಂಗೊಂಡನಹಳ್ಳಿಯಲ್ಲಿ ನಮ್ಮನೆ ಸುಮ್ಮನೆ ನಿರಾಶ್ರಿತರ ಆಶ್ರಮ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಮಂಗಳಮುಖಿಯರ ವಿಷಯದಲ್ಲಿ ಸಮಾಜ ತುಂಬಾ ಕ್ರೂರವಾಗಿ, ನಿಕೃಷ್ಟವಾಗಿ ನಡೆದುಕೊಳ್ಳುತ್ತದೆ. ಈ ಅಮಾನವೀಯ ದೃಷ್ಟಿಕೋನ ಬದಲಾಗಬೇಕು.

ಮಂಗಳಮುಖಿಯರಲ್ಲೂ ಸಾಕಷ್ಟು ವಿದ್ಯಾವಂತರಿದ್ದಾರೆ. ಉದ್ಯೋಗ ನೀಡಿ ಬದುಕು ಕೊಟ್ಟಿಕೊಳ್ಳಲು ನೆರವು ನೀಡಬೇಕು, ಸಾಮಾನ್ಯರಂತೆ ಬದುಕು ಸಾಗಿಸಲು ಅನುವು ಮಾಡಿಕೊಡಬೇಕು ಎಂದರು.

ಶೋಷಿತ ಸಮುದಾಯದ ಜೀವನಮಟ್ಟ ಸುಧಾರಣೆಗೆ ಈವರೆಗೆ ಪ್ರಯತ್ನಗಳೇ ನಡೆದಿಲ್ಲ ಹಾಗಾಗಿ ಈ ಸಮುದಾಯ ತಿರಸ್ಕರಿಸಲ್ಪಟ್ಟು ಬಹಳ ಹಿಂದುಳಿದಿದೆ ಸರ್ಕಾರ ಸಮುದಾಯಕ್ಕೆ ನ್ಯಾಯ ಒದಗಿಸಲು ಮುಂದಾಗಿದೆ ಎಂದರು.
ಮೊದಲ ಬಾರಿಗೆ ಕೇಂದ್ರ ಸರ್ಕಾರ ಜೋಗತಿ ಮಂಜಮ್ಮ ಅವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಿದೆ. ರಾಜ್ಯ ಸರ್ಕಾರ ಮಂಗಳಮುಖಿ ಸಮುದಾಯದ ಶ್ರೇಯೋಭಿವೃದ್ಧಿಗೆ ಹಾಗೂ ಅವರ ಬದುಕಿಗೆ ಆಸರೆ ಒದಗಿಸುವ ನಿಟ್ಟಿನಲ್ಲಿ ದೇಶದಲ್ಲಿ ಇದೆ ಮೊದಲ ಬಾರಿಗೆ ಜಮೀನು ಮಂಜೂರು ಮಾಡಿದೆ.

ಆನ್‍ಲೈನ್ ಕ್ಲಾಸ್ ಎಫೆಕ್ಟ್, ಮೊಬೈಲ್ ದಾಸರಾದ ಮಕ್ಕಳು, ಪೋಷಕರು ಕಂಗಾಲು

ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರ ವಿಶೇಷ ಕಾಳಜಿಯಿಂದ 20 ಗುಂಟೆ ಜಮೀನು ನೀಡಿದ್ದು ಹೆಚ್ಚುವರಿ ಜಮೀನು ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಇದೇ ವೇಳೆ ತಿಳಿಸಿದರು.

ಆಶ್ರಮದ ಸಂಸ್ಥಾಪಕಿ ನಕ್ಷತ್ರ ಮಾತನಾಡಿ, ಮಂಗಳಮುಖಿಯಾದ್ದರಿಂದ ಹೆತ್ತವರಿಂದಲೇ ತಾತ್ಸಾರಕ್ಕೊಳಗಾಗಿ ಅನುಭವಿಸಿದ ವೇದನೆಯನ್ನು ಎಳೆ ಎಳೆಯಾಗಿ ವಿವರಿಸಿದರು.ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಸಾಹಿತಿ ವೈಬಿಎಚ್ ಜಯದೇವ್ ಸೇರಿ ಹಲವು ಸಾಧಕರಿಗೆ ಶ್ರೇಷ್ಠ ಕನ್ನಡಿಗ ಪುನೀತ್ ರಾಜಕುಮಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೆಂಪುಕೋಟೆ ಮೇಲೆ ದಾಳಿ ಪ್ರಕರಣ : ಎಲ್‍ಇಟಿ ಉಗ್ರನ ಮರಣದಂಡನೆ ಎತ್ತಿಹಿಡಿದ ಸುಪ್ರೀಂ

ಬಿಡಿಎ ಅಧ್ಯಕ್ಷ ಎಸ್.ಆರ. ವಿಶ್ವನಾಥ್, ಸಾಲುಮರದ ತಿಮ್ಮಕ್ಕ, ಸಂತೋಷ್ ಭಾರತಿ ಗುರೂಜಿ, ಮಾಜಿ ಶಾಸಕ ಎಸ್.ಮುನಿರಾಜು, ಜೋಗತಿ ಮಂಜಮ್ಮ, ಯಲಹಂಕ ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ಹನುಮಯ್ಯ, ಮಾದನಾಯಕನಹಳ್ಳಿ ನಗರಸಭೆ ಆಯುಕ್ತ ಹನುಮಂತೇಗೌಡ ಇದ್ದರು.

Articles You Might Like

Share This Article