ಬೆಂಗಳೂರು, ಜು.5-ನಗರದಲ್ಲಿರುವ ಲೇಡಿಸ್ ಬಾರ್‌ಗಳು ಪ್ರತಿದಿನ ಸಿಸಿಟಿವಿ ವಿಡಿಯೋಗಳ ತುಣುಕುಗಳನ್ನು ಆಯಾಯ ಪೊಲೀಸ್ ಠಾಣೆಗಳಿಗೆ ನೀಡಬೇಕೆಂದು ಹಿರಿಯ ಪೊಲೀಸ್ ಅಧಿಕಾರಿ ಸೂಚಿಸಿದ್ದಾರೆ.ಲೇಡಿಸ್ ಬಾರ್‌ಗಳಲ್ಲಿ ನಿಯಮಗಳು ಉಲ್ಲಂಘನೆಯಾಗುತ್ತಿವೆ ಎಂಬ ಆರೋಪಗಳು ಆಗಾಗ್ಗೆ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಹಲವು ಲೇಡಿಸ್ ಬಾರ್‌ಗಳಲ್ಲಿ ತುಂಡುಡುಗೆ ಧರಿಸಿ ಸರ್ವಿಸ್ ಮಾಡುವುದು, ಅವಧಿ ಮೀರಿ ಬಾರ್‌ಗಳನ್ನು ತೆರೆಯುವುದು ಸೇರಿದಂತೆ ಇನ್ನಿತರ ನಿಯಮ ಉಲ್ಲಂಘಿಸಿದ ಬಗ್ಗೆ ದೂರು ಬಂದಿತ್ತು.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಗರ ಪೊಲೀಸರು ಕೇಂದ್ರ ಹಾಗೂ ಪಶ್ಚಿಮ ವಿಭಾಗದ ಲೇಡಿಸ್ ಬಾರ್‌ಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಕೆಲವು ನಿಯಮಗಳು ಉಲ್ಲಂಘನೆಯಾಗಿರುವುದು ಕಂಡು ಬಂದಿತ್ತು. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಕ್ರಮ ವಹಿಸಿರಲಿಲ್ಲ.
ಹಾಗಾಗಿ ಇದೀಗ ನಿಯಮ ಉಲ್ಲಂಘನೆಗಳಿಗೆ ಕಡಿವಾಣ ಹಾಕಲು ಸಿಸಿಬಿ ಹೊಸ ನಿಯಮಕ್ಕೆ ಮುಂದಾಗಿದೆ.ಪ್ರತಿ ದಿನದ ಸಿಸಿಟಿವಿ ವಿಡಿಯೋ ತುಣುಕನ್ನು ಪೆನ್ ಡ್ರೈವ್ ಅಥವಾ ಸಿಡಿಗೆ ಹಾಕಿ ಪೊಲೀಸ್ ಠಾಣೆಗಳಿಗೆ ನೀಡಬೇಕು. ಸಿಸಿಟಿವಿ ವೀಕ್ಷಣೆ ವೇಳೆ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂದಲ್ಲಿ ಅಂತಹ ಲೇಡಿಸ್ ಬಾರ್‌ಗಳ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
- ಬೆಂಗಳೂರಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು
- ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ಗೃಹಸಚಿವ ಪರಮೇಶ್ವರ
- ನೈರುತ್ಯ ಮುಂಗಾರು ಚೇತರಿಕೆ, ರಾಜ್ಯದ ಹಲವೆಡೆ ಮಳೆ
- 20 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಬೆಚ್ಚಿ ಬಿದ್ದ ದೆಹಲಿ
- ಟಿಆರ್ಎಫ್ನ್ನು ಜಾಗತಿಕ ಭಯೋತ್ಪಾದಕ ಸಂಘಟನೆಗೆ ಎಂದು ಘೋಷಿಸಿದ ಅಮೆರಿಕ ; ಭಾರತ ಸ್ವಾಗತ