ರಾಜಕೀಯ ದ್ವೇಷ : ಕೆರೆಗೆ ಕ್ರಿಮಿನಾಶಕ ಹಾಕಿ 5 ಲಕ್ಷ ಮೀನುಗಳನ್ನು ಕೊಂದ ಪಾಪಿಗಳು

Social Share

ಕುಣಿಗಲ್,ನ.28- ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೆರೆಗೆ ಕ್ರಿಮಿನಾಶಕ ಸಿಂಪಡಿಸಿದ ಪರಿಣಾಮ ಸುಮಾರು 5 ಲಕ್ಷಕ್ಕೂ ಹೆಚ್ಚು ಮೀನಿನ ಮರಿಗಳು ಸಾವನಪ್ಪಿರುವ ಘಟನೆ ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಾಲ್ಲೂಕಿನ ಹುತ್ರಿ ದುರ್ಗ ಹೋಬಳಿ ವಡಾಘಟ್ಟ ಗ್ರಾಮದ ಕೆರೆಯಲ್ಲಿ ಈ ಕ್ರತ್ಯ ಎಸಗಲಾಗಿದೆ. ಗ್ರಾಮದ ರೈತ ಚಂದನ್ ಎಂಬುವವರು ಗ್ರಾಮ ಪಂಚಾಯತಿ ಹರಾಜಿನಲ್ಲಿ ಕೆರೆಯಲ್ಲಿ ಮೀನು ಸಾಕಲು ಗುತ್ತಿಗೆ ಪಡೆದು ಈ ಸಂಬಂಧ ಗ್ರಾಮದ ದೇವಾಲಯಕ್ಕೆ 2.50 ಲಕ್ಷ ರೂ. ಹಾಗೂ ಪಂಚಾಯತಿಗೂ ಹಣ ನೀಡಿ ತಮ್ಮ ಹೆಸರಿಗೆ ಹರಾಜು ನಿಲ್ಲಿಸಿಕೊಂಡಿದ್ದರು.

ಚಂದನ್ ಅವರು ಕೆರೆಯಲ್ಲಿ ಮೀನಿನ ಮರಿಗಳನ್ನು ತಂದು ಬಿಟ್ಟಿದ್ದರು. ಆದರೆ ಕೆಲವು ಕಿಡಿಗೇಡಿಗಳು ದ್ವೇಷದ ಮನೋಭಾವ ದಿಂದ ಕೆರೆಗೆ ವಿಷ ಹಾಕಿದ್ದರಿಂದ ನೀರಿನಲ್ಲಿದ್ದ ವಿವಿಧ ಬಗೆಯ ಜಲ ಚರಗಳು ಸಾವನಪ್ಪಿದ್ದು, ಸ್ಥಳೀಯ ಜಾನುವಾರುಗಳು ಮತ್ತು ಪಕ್ಷಿ ಸಂಕುಲಗಳು ಬಾಯಾರಿಕೆ ನೀಗಿಸಿ ಕೊಳ್ಳಲು ಕೆರೆಗೆ ಹೋಗುವುದರಿಂದ ಅಪಾಯ ತಪ್ಪಿದ್ದಲ್ಲ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಚಂದನ್ ಈ ಸಂಬಂಧ ಪಟ್ಟಣದ ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಗಾಗಿ ಶೋಧ ನಡೆಸುತಿದ್ದಾರೆ.

#Tumakuru, #Kunigal, #Babyfish, #PoliticalRevenge,

Articles You Might Like

Share This Article