ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್‌ಗೆ 10 ವರ್ಷಗಳ ಜೈಲು ಶಿಕ್ಷೆ..!

Social Share

ತಿರುವನಂತಪುರಂ/ನವದೆಹಲಿ, ಜ 14- ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯವು ಅಪರಾಧಿ ಎಂದು ಆದೇಶಿಸಿರುವುದರಿಂದ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಅನರ್ಹಗೊಳಿಸಿ ಲೋಕಸಭೆಯ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಅಸೂಚನೆಯ ಪ್ರಕಾರ, ಲಕ್ಷದ್ವೀಪದ ಕವರಟ್ಟಿಯ ಸೆಷನ್ಸ್ ನ್ಯಾಯಾಲಯವು ಶಿಕ್ಷೆ ವಿಸಿದ ಜನವರಿ 11 ರಿಂದ ಫೈಝಲ್ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

ಜನತಾ ಪ್ರಾತಿನಿಧ್ಯ ಕಾಯಿದೆ, 1951 ರ ಸೆಕ್ಷನ್ 8 ರೊಂದಿಗೆ ಓದಿದ ಭಾರತದ ಸಂವಿಧಾನದ 102 (ಎಲï) (ಇ) ನಿಬಂಧನೆಗಳ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

ಮದ್ಯ ಖರೀದಿ ವಯೋಮಿತಿ 21ರಿಂದ 18ಕ್ಕಿಳಿಸಲು ಮುಂದಾದ ಸರ್ಕಾರ

ಕಳೆದ 2009 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ ಎಂ ಸಯೀದ್ ಅವರ ಅಳಿಯ ಮೊಹಮ್ಮದ್ ಸಾಲಿಹ್ ಅವರನ್ನು ಕೊಲ್ಲಲು ಪ್ರಯತ್ನ ಪ್ರಕರಣ ಸುದೀರ್ಘ ವಿಚಾರಣೆ ನಡೆದು ಕವರಟ್ಟಿ ಸೆಷನ್ಸ ನ್ಯಾಯಾಲಯವು ಫೈಝಲ್ ಸೇರಿದಂತೆ ನಾಲ್ವರು ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಗಳಿಗೆ 10 ವರ್ಷಗಳ ಜೈಲು ಶಿಕ್ಷೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಪರಾಗಳೆಲ್ಲರೂ ಸಂಬಂಧಿಕರಾಗಿದ್ದಾರೆ.

#LakshadweepMP, #MohammedFaizal, #10yearsJail, #attemptedmurder, disqualified,

Articles You Might Like

Share This Article