ಕಾಗವಾಡ.:ಕಾಂಗ್ರೆಸ್ ನಾಯಕರಿಗೆ ತಾಕತ್ತು ದಮ್ಮು ಇದ್ದರೆ, ಕಾಂಗ್ರೆಸ್ ಶಾಸಕರನ್ನು ನಿಮ್ಮ ಪಕ್ಷದಲ್ಲಿ ಇಟ್ಟುಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಸವಾಲು ಎಸೆದಿದ್ದಾರೆ.
ಕಾಗವಾಡ ಮತಕ್ಷೇತ್ರ ವ್ಯಾಪ್ತಿಯ ಮದಭಾವಿ ಗ್ರಾಮದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಬಿಜೆಪಿ ಹಾಗೂ ಮೋದಿ ತಾಕತ್ತು ನೊಡಿ, ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷಕ್ಕೆ ವಲಸೆ ಬರುತ್ತಿದ್ದಾರೆ.ನಿಮ್ಮಲ್ಲಿ ತಾಕತ್ತು, ದಮ್ಮು ಇದ್ದರೆ ಅವರನ್ನು ತಡೆಯಿರಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಎಸೆದರು.