ಪುಷ್ಪಗಳ ಮಧ್ಯೆ ಪುನೀತ್, ಫಲಪುಷ್ಪ ಪ್ರದರ್ಶನದಲ್ಲಿ ಅಪ್ಪು ಪ್ರತ್ಯಕ್ಷ

Social Share

ಬೆಂಗಳೂರು,ಆ.5- ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಗಳಿಗಾಗಿ ರದ್ದುಪಡಿಸಿದ್ದ ಬಹು ಆಕರ್ಷಣೆಯ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಕನ್ನಡ ಚಿತ್ರರಂಗದ ಕರ್ನಾಟಕ ರತ್ನದ್ವಯರಾದ ಡಾ.ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಅವರ ಪುಷ್ಪಾಲಂಕೃತ ಪ್ರತಿಮೆಗಳು ಎಲ್ಲರನ್ನು ಆಕರ್ಷಿಸುತ್ತಿವೆ.

ಲಾಲ್‍ಬಾಗ್‍ನಲ್ಲಿ ಇಂದಿನಿಂದ ಆರಂಭವಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತೋಟಗಾರಿಕೆ ಸಚಿವ ಮುನಿರತ್ನ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನಿತ್ ರಾಜ್‍ಕುಮಾರ್, ಹಿರಿಯ ಸೋದರ ರಾಘವೇಂದ್ರ ರಾಜ್‍ಕುಮಾರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕ ಗರುಡಾಚಾರ್ಯ ಸೇರಿದಂತೆ ಮತ್ತಿತರರು ಇಂದು ಚಾಲನೆ ನೀಡಿದರು.

ವಿದೇಶದಿಂದಲೂ ಹೂವುಗಳು ಬಂದಿದ್ದು ಇದು ಕೂಡ ಪ್ರವಾಸಿಗರನ್ನು ಆಕರ್ಷಿಸಿದೆ. ಗಾಜನೂರಿನಲ್ಲಿರುವ ಡಾ.ರಾಜ್‍ಕುಮಾರ್ ಹುಟ್ಟಿದ ಮನೆಯ ಮಾದರಿಯನ್ನು ಮಾಡಿ ಮನೆಯ ಅಂಗಳದಲ್ಲಿ ರಾಜ್ ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಕುಳಿತಿರುವ ಮಾದರಿಯಲ್ಲಿ ಪ್ರತಿಮೆ ಜನಮನ ಸೆಳೆಯುತ್ತಿದೆ.

ಒಟ್ಟು 30 ಅಡಿ ಪುನೀತ್ ಅವರ ಪ್ರತಿರೂಪದ ಚಿನ್ನದ ಲೇಪನದ ಪ್ರತಿಮೆಯನ್ನು ಪ್ರದರ್ಶನ ಸ್ಥಳದಲ್ಲಿ ಇರಿಸಲಾಗಿದೆ. ಡಾ.ರಾಜ ಕುಮಾರ್ ವಾಸ ಮಾಡಿರುವ ಮನೆಯ ಮಾದರಿಯನ್ನು ಹೂವಿನ ಅಲಂಕಾರದಲ್ಲಿ ನಿರ್ಮಿಸಲಾಗಿದೆ.

ರಾಜಕುಮಾರ್ ಅವರ ಬೇಡರ ಕಣ್ಣಪ್ಪ, ಬಂಗಾರದ ಮನುಷ್ಯ, ಕಸ್ತೂರಿ ನಿವಾಸ ಸೇರಿದಂತೆ ಇನ್ನು ಕೆಲವು ಸಿನಿಮಾದಲ್ಲಿ ರಾಜಕುಮಾರ್ ಅವರು ಕೊಟ್ಟ ಸಂದೇಶವನ್ನು ಫಲ ಪುಷ್ಪ ಪ್ರದರ್ಶನದಲ್ಲಿ ಬಿಂಬಿಲಾಗಿದೆ. ಜೊತೆಗೆ ಸಸ್ಯಕಾಶಿಯಲ್ಲಿ ಗಾಜನೂರಿನಲ್ಲಿರುವ ಡಾ.ರಾಜ್‍ಕುಮಾರ್ ಹುಟ್ಟಿದ ಮನೆಯ ಮಾದರಿಯನ್ನು ನಿರ್ಮಿಸಿರುವುದು ವಿಶೇಷವಾಗಿದೆ.
ಗಾಜನೂರು ಮನೆಯ ಅಂಗಳದಲ್ಲಿ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಕುಳಿತಿರುವ ಮಾದರಿ ಈ ಬಾರಿಯ ಫಲಪುಷ್ಪ ಪ್ರದರ್ಶನದ ಕೇಂದ್ರಬಿಂದುವಾಗಿದೆ.

ಟಿಕೆಟ್ ದರದಲ್ಲೂ ರಿಯಾಯಿತಿ: ಶಾಲಾಮಕ್ಕಳಿಗೆ ಮಕ್ಕಳಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗಿದೆ.
10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಫಲಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶ ಇರಲಿದೆ. ಈ ಬಾರಿ ಪುಷ್ಪ ಪ್ರದರ್ಶನದಲ್ಲಿ ಒಟ್ಟು 15 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ಹೆಚ್ಚು ಫಲಪುಷ್ಪ ಪ್ರದರ್ಶನ ಮಾಡಿದವರಿಗೆ ಆ.12ರಂದು ಬಹುಮಾನ ವಿತರಣೆ ಮಾಡಲಾಗುತ್ತದೆ.

Articles You Might Like

Share This Article