ಈ ಬಾರಿ ಬೆಂಗಳೂರು ಇತಿಹಾಸ ತಿಳಿಸುವ ಫಲಪುಷ್ಪ ಪ್ರದರ್ಶನ : ಸಚಿವ ಮುನಿರತ್ನ

Social Share

ಬೆಂಗಳೂರು,ಜ.16- ಉದ್ಯಾನಗರಿ ಬೆಂಗಳೂರಿನ ಇತಿಹಾಸ ತಿಳಿಸುವ ಮೂಲ ಉದ್ದೇಶ ಹೊಂದಿದ್ದು, ಇದನ್ನೇ ಮುಖ್ಯ ಗುರಿಯಾಗಿಸಿಕೊಂಡು ಈ ಭಾರಿಯ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಜ.20ರಿಂದ 30ರ ವರೆಗೆ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಆಯೋಜಿಸಲಾಗಿದೆ ಎಂದು ತೋಟಗಾರಿಕ ಸಚಿವ ಮುನಿರತ್ನ ತಿಳಿಸಿದರು.

ಲಾಲ್‍ಬಾಗ್‍ನಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪುಷ್ಪಗಳಲ್ಲಿ ಬೆಂಗಳೂರಿನ ಇತಿಹಾಸ ತಿಳಿಸುವ ಕಲಾಕೃತಿಗಳು ಪ್ರೇಕ್ಷಕರ ಮನಸೆಳೆಯಲಿದೆ. ಈ ಭಾರಿ ಸುಮಾರು 10 ರಿಂದ 12 ಲಕ್ಷ ಜನರು ಇಲ್ಲಿಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

ವಿದೇಶಗಳಿಂದ 11 ಬಗೆಯ ವಿಶೇಷ ಹೂಗಳನ್ನು ಕೂಡ ಈ ಭಾರಿ ತರಿಸಲಾಗುತ್ತಿದ್ದು, ವಿಶೇಷ ಅಲಂಕಾರಗಳನ್ನು ಕಣ್ತುಂಬಿಕೊಳ್ಳಲು ಎಲ್ಲರಿಗೂ ಅವಕಾಶ ನೀಡುವ ನಿಟ್ಟಿನಲ್ಲಿ ಲಾಲ್‍ಬಾಗ್ ನಾಲ್ಕು ಗೇಟ್‍ಗಲ್ಲಿ ಟಿಕೇಟ್‍ಗಳನ್ನು ನೀಡಲಾಗುವುದು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜ.20 ರಂದು ಬೆಳಿಗ್ಗೆ ಫಲಪುಷ್ಪ ಪ್ರದರ್ಶವನ್ನು ಉದ್ಘಾಟಿಸಲಿದ್ದು, ಹಲವು ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. ಅಚ್ಚುಕಟ್ಟಾಗಿ ಎಲ್ಲವನ್ನು ಸುಸೂತ್ರವಾಗಿ ನಡೆಸಲು ಅಧಿಕಾರಿಗಳು ಹಾಗೂ ಸಿಬ್ಬಂಗಳು ಜೊತೆಗೂಡಿ ಕೆಲಸಮಾಡುತ್ತಿದ್ದಾರೆ.

ಅಂತೆಯೇ ಹಲವು ಸಂಘ ಸಂಸ್ಥೆಗಳು ಕೂಡ ತಮ್ಮ ಕಲಾತ್ಮಕ ಫಲಪುಷ್ಪಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಸುಮಾರು 360 ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದೆ, ಜ. 28ರಂದು ಇದರ ಬಹುಮಾನ ವಿತರಣೆಕೂಡ ನಡೆಯಲಿದೆ ಎಂದರು.

ಇದೇ ಸಂದರ್ಭದಲ್ಲಿ 2023 ಕ್ಯಾಲೆಂಡರ್‍ಗಳನ್ನು ಕೂಡ ಬಿಡುಗಡೆ ಮಾಡಲಾಯಿತು. ಪತ್ರಕಾಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟೇರಿಯ, ನಿದೇರ್ಶಕ ನಾಗೇಂದ್ರ ಪ್ರಸಾದ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿಗೆ ವಹಿಸಿ ಸರ್ಕಾರ ಆದೇಶ

ದಾಖಲೆ ಬಿಡುಗಡೆ ಮಾಡಲಿ, ಇಲ್ಲ ಶಿಕ್ಷೆ ಅನುಭವಿಸಲಿ
ಬೆಂಗಳೂರು,ಜ.16- ನನ್ನ ಮೇಲೆ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪಕ್ಕೆ ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಇಂದಿಲ್ಲಿ ಎಚ್ಚರಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ವಿನಾಕಾರಣ ಕಮೀಷನ್ ಆರೋಪ ಮಾಡಿ ವರ್ಚಸ್ಸು ತೇಜೋವಧೆಗೆ ಕುತಂತ್ರ ನಡೆಸಿದ್ದಾರೆ. ಈಗಾಗಲೇ ನಾನು ಅದಕ್ಕೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ವಿಚಾರಣೆ ನಡೆಯುತ್ತಿದೆ. ಪ್ರಸ್ತುತ ಅವರು ಎಚ್ಚೆತ್ತು ತಮ್ಮ ಬಳಿ ದಾಖಲಿ ಇದ್ದರೆ ಬಿಡುಗಡೆ ಮಾಡಲಿ ಇಲ್ಲದಿದ್ದರೆ ಅವರು ಶಿಕ್ಷೆ ಅನುಭವಿಸುವುದಂತೂ ನಿಜ ಎಂದು ಹೇಳಿದರು.

ದಾಖಲೆ ನೀಡಿದರೆ ಶಿಕ್ಷೆಯಾಗುವುದಿಲ್ಲ. ಇಲ್ಲದಿದ್ದರೆ ಪರಿಣಾಮ ಅನುಭವಿಸಬೇಕಾಗುತ್ತದೆ. ಹೂಡಿರುವ ಮಾನನಷ್ಟ ಅರ್ಜಿಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮಹತ್ವದ ಕಾರ್ಯಕಾರಿಣಿ : ಚುನಾವಣೆ ರಣತಂತ್ರ

ಎಲ್ಲರಿಗೂ ಪ್ರಶ್ನೆ ಮಾಡುವ ಅಕಾರವಿರುತ್ತದೆ. ಆದರೆ ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ. ಆದ್ದರಿಂದ ನಾನು ಕಾನೂನು ಚೌಕಟ್ಟಿನಲ್ಲೇ ಕೆಂಪಣ್ಣ ಅವರ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಹೇಳಿದರು.

Lalbagh, flower, show, history, Bangalore, Minister Muniratna,

Articles You Might Like

Share This Article