ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತನೆ

Social Share

ಬೆಂಗಳೂರು,ಸೆ.30- ರಾಜ್ಯದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.ಯೋಜನಾ ಪ್ರಾಕಾರದ ವ್ಯಾಪ್ತಿಯ ಪ್ರದೇಶಗಳಲ್ಲಿ ಸರಳವಾಗಿ ಕೃಷಿ ಭೂಮಿ, ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಭೂ ಪರಿವರ್ತನೆಗೆ ಮುಂದಾಗಿರುವ ಸರ್ಕಾರ, ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತದೆ.

ಮುಂದಿನ ಬೆಳಗಾವಿ ಅವೇಶನದಲ್ಲಿ ಈ ವಿಧೇಯಕ ಮಂಡಿಸಲು ನಿರ್ಧರಿಸಲಾಗಿದೆ. ಇದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸಹಕಾರಿಯಾಗಲಿದೆ.

ರಾಜ್ಯದೆಲ್ಲೆಡೆ ಕಂದಾಯ ನಿವೇಶನಗಳನ್ನು ಖರೀದಿಸಿದವರು ಮತ್ತು ಇಂತಹ ನಿವೇಶನಗಳಲ್ಲಿ ಕಟ್ಟಡ ನಿರ್ಮಿಸಿಕೊಂಡ 30 ಲಕ್ಷದಷ್ಟು ಜನರಿದ್ದಾರೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳದ ಇಂತಹ ನಿವೇಶನಗಳನ್ನು ದಂಡ ಶುಲ್ಕದೊಂದಿಗೆ ಭೂ ಪರಿವರ್ತನೆ ಸಾಧ್ಯವಾದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ.

ಈಗ ಕಂದಾಯ ನಿವೇಶನಗಳಿಗೆ, ಅಂತಹ ನಿವೇಶನಗಳಲ್ಲಿ ಮನೆ ನಿರ್ಮಿಸಲು ಬ್ಯಾಂಕ್ ಸಾಲ ದೊರೆಯುವುದಿಲ್ಲ. ಈಗ ಕಂದಾಯ ನಿವೇಶನಗಳ ಭೂ ಪರಿವರ್ತನೆಗೆ ಅವಕಾಶ ನೀಡಿದರೆ, ನಿವೇಶನ ಮತ್ತು ಕಟ್ಟಡಗಳ ಮಾಲೀಕರಿಗೆ ಬ್ಯಾಂಕ್ ಸಾಲ ಪಡೆಯಲು ಅವಕಾಶವಾಗುತ್ತದೆ.

ಹೀಗಾಗಿ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ಮಾಡಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಕಾಯ್ದೆಯಲ್ಲಿ ಇದಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿದ್ದರೆ ನಿಶ್ಚಿತವಾಗಿಯೂ ಅವಕಾಶ ಕಲ್ಪಿಸಲಾಗುತ್ತದೆ.

ಆಕ್ರಮ ಕಟ್ಟಡಗಳನ್ನು ಸಕ್ರಮ ಮಾಡಲು ಸರ್ಕಾರ ಬಯಸಿದ್ದರೂ, ಅದಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆಯಾe್ಞÉ ನೀಡಿದೆ. ಹೀಗಾಗಿ ಕಂದಾಯ ನಿವೇಶನಗಳ ಭೂ ಪರಿವರ್ತನೆಗೆ ಅವಕಾಶ ನೀಡಿದರೆ ಗೊಂದಲದಲ್ಲಿರುವ ಜನರಿಗೆ ಅನುಕೂಲವಾಗುತ್ತದೆ. ಇದೇ ರೀತಿ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡಿಸಿಕೊಳ್ಳಲು ಅರ್ಜಿ ನೀಡಿದರೆ ಒಂದೇ ವಾರದಲ್ಲಿ ಅರ್ಜಿಯನ್ನು ಇತ್ಯರ್ಥಗೊಳಿಸಲಾಗುತ್ತದೆ.

ಭೂ ಪರಿವರ್ತನೆ ಕೋರಿ ಅರ್ಜಿ ಸಲ್ಲಿಸುವವರಿಂದ ಪ್ರಮಾಣ ಪತ್ರ ಪಡೆದು ಒಂದು ವಾರದಲ್ಲಿ ಭೂ ಪರಿವರ್ತನೆ ಕಾರ್ಯ ಮಾಡಿಕೊಡಲಾಗುತ್ತದೆ. ಒಂದು ವೇಳೆ ಸದರಿ ಭೂಮಿ ದಲಿತರಿಗೆ ಸಂಬಂಧಿಸಿದ್ದು ಎಂಬುದರಿಂದ ಹಿಡಿದು ಯಾವುದೇ ತೊಡಕುಗಳಿದ್ದರೆ ತಕ್ಷಣವೇ ಗೊತ್ತಾಗುತ್ತದೆ.
ಹೀಗಾಗಿ ತೊಡಕುಗಳಿಲ್ಲದ ಅರ್ಜಿಯ ಆಧಾರದ ಮೇಲೆ ಒಂದು ವಾರದಲ್ಲಿ ಭೂ ಪರಿವರ್ತನೆ ಕಾರ್ಯ ನಡೆಯಲಿದೆ. ಒಂದು ವೇಳೆ ಈ ಕಾರ್ಯದಲ್ಲಿ ವಿಳಂಬವಾದರೆ, 15 ದಿನಗಳಲ್ಲಿ ಆಯಾ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಈ ಭೂ ಪರಿವರ್ತನೆ ಕಾರ್ಯ ಪೂರ್ಣವಾಗಲಿದೆ.

ತೊಡಕುಗಳಿಲ್ಲದ ಭೂಮಿಯನ್ನು ಪರಿವರ್ತನೆ ಮಾಡಿಸಿಕೊಳ್ಳುವವರಿಗೆ ಯಾವ ತೊಂದರೆಯೂ ಇಲ್ಲ. ಮಧ್ಯವರ್ತಿಗಳ ಹಾವಳಿಯೂ ಇಲ್ಲದೆ ಅವರ ಕಾರ್ಯ ಪೂರ್ಣವಾಗುತ್ತದೆ. ನಗರ ಪ್ರದೇಶಗಳಲ್ಲಿ ಭೂ ಪರಿವರ್ತನೆ ಕಾರ್ಯವನ್ನು ಮೂರೇ ದಿನಗಳಲ್ಲಿ ಪೂರ್ಣಗೊಳಿಸಲು ತೀರ್ಮಾನಿಸಲಾಗಿತ್ತಾದರೂ, ಇಲಾಖೆ ಅಧಿಕಾರಿಗಳ ಸಲಹೆಯ ಮೇರೆಗೆ ಈ ಕಾರ್ಯ ಮಾಡಿಕೊಡಲು ಒಂದು ವಾರ ಅವಕಾಶ ನೀಡಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಅರ್ಜಿ ಇತ್ಯರ್ಥ:

ಇದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ ಭೂ ಪರಿವರ್ತನೆಗಾಗಿ ಅರ್ಜಿ ಸಲ್ಲಿಕೆಯಾದರೆ, 30 ದಿನಗಳಲ್ಲಿ ಈ ಅರ್ಜಿ ಇತ್ಯರ್ಥವಾಗಲಿದೆ. ಈ ಕಾರ್ಯ ವಿಳಂಬವಾದರೂ ಜಿಲ್ಲಾಕಾರಿಗಳ ಹೆಸರಿನಲ್ಲಿ ತನ್ನಿಂತಾನೇ ಭೂ ಪರಿವರ್ತನೆ ಕಾರ್ಯ ನಡೆಯಲಿದೆ. ಕಂದಾಯ ಇಲಾಖೆಯ ಹಲವು ಯೋಜನೆಗಳು ಜನರಿಗೆ ಸುಲಭವಾಗಿ ತಲುಪಲಿ ಎಂಬ ಕಾರಣಕ್ಕಾಗಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ

Articles You Might Like

Share This Article