ಇಡಿಯಿಂದ ಮತ್ತೊಂದು ಹೊಸ ಕತೆ : ತೇಜೆಸ್ವಿ ಯಾದವ್

Social Share

ಪಾಟ್ನಾ,ಮಾ.12- ತಮ್ಮ ಮನೆ, ಕಚೇರಿ ಮತ್ತು ಆಪ್ತರಿಗೆ ಸೇರಿ ಸ್ಥಳಗಳಲ್ಲಿ ನಡೆದ ಶೋಧ ಕಾರ್ಯಾಚರಣೆಯಲ್ಲಿ 600 ಕೋಟಿ ರೂಪಾಯಿ ಪತ್ತೆಯಾಗಿದೆ ಎಂಬುದು ಸುಳ್ಳು ವದ್ಧಂತಿ ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅಲ್ಲಗಳೆದಿದ್ದಾರೆ.

ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಅಪರಾಧಿಕ ಮೊತ್ತ 600 ಕೋಟಿ ರೂಪಾಯಿಗಳು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ನಿನ್ನೆ ಹೇಳಿಕೆ ನೀಡಿತ್ತು. ಇದನ್ನು ಅಲ್ಲಗಳೆದ ತೇಜೆಸ್ವಿ ಯಾದವ್ ಜಾರಿನಿರ್ದೇಶನಾಲಯದ ಹೇಳಿಕೆಗಳು ವದ್ಧಂತಿಗಳು ಎಂದು ಅಲ್ಲಗಳೆದಿದ್ದಾರೆ.

ಮೋದಿ ರೋಡ್‌ ಶೋ : ‘ಉರಿಗೌಡ ಮತ್ತು ದೊಡ್ಡ ನಂಜೇಗೌಡ’ ಹೆಸರು ತೆರವು

ಪ್ರಸ್ತುತ ದೆಹಲಿಯಲ್ಲಿ ದೂರದಲ್ಲಿರುವ ಆರ್‍ಜೆಡಿ ನಾಯಕ, ದಾಳಿಯ ನಂತರ ಸಹಿ ಮಾಡಿದ ಪಂಚನಾಮ (ವಶಪಡಿಸಿಕೊಳ್ಳುವ ಪಟ್ಟಿ) ಅನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದರೆ ಬಿಜೆಪಿಗೆ ಮುಜುಗರವಾಗುತ್ತದೆ ಎಂದು ಹೇಳಿದ್ದಾರೆ. 2007ರಲ್ಲಿ ಮಾಲ್ ಮತ್ತು ನೂರಾರು ಜಮೀನು ಸೇರಿದಂತೆ 8,000 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆದಿದೆ ಎಂದು ಆರೋಪಿಸಲಾಗಿತ್ತು.

ತಮ್ಮ ತಂದೆ ಲಾಲು ಪ್ರಸಾದ್ ರೈಲ್ವೆ ಸಚಿವರಾಗಿದ್ದಾಗ ಹೋಟೆಲ್‍ಗಳಿಗಾಗಿ ಭೂ ಹಗರಣ ನಡೆದಿತ್ತು. ಈಗ ಅದೇ ಅವಗೆ ಸಂಬಂಸಿದ ಭೂಮಿ-ಉದ್ಯೋಗದ ಹಗರಣ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಗುರುಗ್ರಾಮ್‍ನಲ್ಲಿ ವಶಪಡಿಸಿಕೊಂಡ ಮಾಲ್ ಅನ್ನು ತಮಗೆ ಸೇರಿದ್ದು ಎಂದು ವದ್ಧಂತಿಗಳನ್ನು ಹರಡಲಾಗಿತ್ತು.

ಅದು ಖಾಸಗಿ ಕಂಪನಿಯ ಒಡೆತನದಲ್ಲಿದೆ ಎಂದು ಸತ್ಯ ಹೊರ ಬಂದ ನಂತರ ಆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರು ಎಂದು ಹೇಳಿದ್ದಾರೆ. ತೇಜೆಸ್ವಿಯಾದವ್ ವಾಣಿಜ್ಯ ಸಂಸ್ಥೆಯನ್ನು ಹೊಂದಿದ್ದಾರೆ ಎಂದು ತಪ್ಪಾಗಿ ವರದಿ ಮಾಡಿದ ಮಾಧ್ಯಮಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಸಿದ್ದಾರೆ.

ಸರ್ಕಾರಿ ನೌಕರರ ಅಮರಣಾಂತರ ಉಪವಾಸ ಅಂತ್ಯಗೊಳಿಸಲು ರಾಜ್ಯಪಾಲರ ಮನವಿ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಅನಧಿಕೃತ ಮೂಲಗಳನ್ನು ಬಳಸಿ ವದಂತಿಗಳನ್ನು ಹರಡುತ್ತಿದೆ. 600 ಕೋಟಿ ರೂಪಾಯಿ ವಶ ಪಡಿಸಿಕೊಳ್ಳಲಾಗಿದೆ ಎಂದು ಹೊಸ ಕತೆ ಸೃಷ್ಟಿಸುವ ಮೊದಲು ಹಿಂದಿನ ತನ್ನ ಕಾರ್ಯಾಚರಣೆಗಳ ಖಾತೆಯನ್ನು ಮೊದಲು ಇತ್ಯರ್ಥಪಡಿಸಬೇಕಿತ್ತು ಎಂದು ಯಾದವ್ ಹೇಳಿದ್ದಾರೆ.

ರೈಲ್ವೇ ಭೂಮಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಕುಟುಂಬದ ಮೇಲೆ ದಾಳಿ ನಡೆಸಿದ ನಂತರ ಇಡಿ 1 ಕೋಟಿ ರೂಪಾಯಿಗಳ ಲೆಕ್ಕವಿಲ್ಲದ ನಗದು ಮತ್ತು 600 ಕೋಟಿ ರೂಪಾಯಿ ಮೌಲ್ಯದ ಅಪರಾಧದ ಆದಾಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಿನ್ನೆ ಹೇಳಿಕೆ ನೀಡಿದೆ.

ಗುಡಿಸಲಿಗೆ ಬೆಂಕಿ ಬಿದ್ದು ಮೂರು ಮಕ್ಕಳು ಸೇರಿ ಐವರು ಸಜೀವ ದಹನ

ಇದನ್ನು ಸವಾಲಾಗಿ ಪರಿಗಣಿಸಿರುವ ತೇಜೆಸ್ವಿಯಾದವ್, ದಾಳಿಯ ವೇಳೆ ಸಹಿ ಮಾಡಿದ ಪಂಚನಾಮ ಪಟ್ಟಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ.

Land, Job, Scam, Tejashwi Yadav, raise, questions, ED raids,

Articles You Might Like

Share This Article