ಪುಣೆ,ಜ.29- ವಿರೋಧ ಪಕ್ಷದ ನಾಯಕರು ಹೇಳುವ ಭೂಮಿಯನ್ನು ವಾಸ್ತವವಾಗಿ 1962 ರಲ್ಲಿ ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದಾಗ ನಡೆದ ಯುದ್ಧದಲ್ಲಿ ಚೀನಾ ಆಕ್ರಮಿಸಿಕೊಂಡಿತ್ತು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಇತ್ತೀಚೆಗೆ ಲಡಾಖ್ನಲ್ಲಿ ಭಾರತ ಭೂಪ್ರದೇಶವನ್ನುಕಳೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂ ಹೇಳಿಕೆ ವಿರುದ್ಧ ಜೈಶಂಕರ್ ವಾಗ್ದಾಳಿ ನಡೆಸಿದ್ದು,
ಕೆಲವೊಮ್ಮೆ ಅವರು ಸುಳ್ಳು ಸುದ್ದಿಗಳನ್ನು ಹರಡುತ್ತಾರೆ. 1962 ರಲ್ಲಿ ಸಂಭವಿಸಿ ಘಟನೆ ಬಗ್ಗೆ ಮಾತನಾಡುವುದಿಲ್ಲ ಎಂದು ಅವರು ಹೇಳಿದರು,ಪೂರ್ವ ಲಡಾಖ್ನಲ್ಲಿ ಭಾರತವು 65 ಗಸ್ತು ಕೇಂದ್ರಗಳಲ್ಲಿ 26 ಗೆ ಪ್ರವೇಶವನ್ನು ಕಳೆದುಕೊಂಡಿದೆ ಎಂದು ಹೇಳಿದರು.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಿದ್ದ ದೇಶದ ಉನ್ನತ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ವರದಿ ಸಲ್ಲಿಸಲಾಗಿದೆ.
Land occupied in 1962…: Jaishankar takes swipe at Rahul Gandhi over his ‘territory loss’ remark