ಶ್ರೀನಗರ,ಫೆ.20- ಜಮ್ಮು-ಕಾಶ್ಮೀರದಲ್ಲಿ ಸಂಭವಿಸಿದ ಭೂಕುಸಿತಕ್ಕೆ 13 ಮನೆಗಳು ನೆಲಸಮವಾಗಿದೆ. ಸಂತ್ರಸ್ಥ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ರಾಂಬನ್ ಜಿಲ್ಲೆಯ ಸಂಗಲ್ದನ್‍ಗೂಲ್ ರಸ್ತೆ ಸಮೀಪದ ಗೂಲ್ ತಹಸಿಲ್‍ನ ಸಂಗಲ್ದಾನ್ ದುಕ್ಸರ್ ದಲ್ವಾದ ಸುಮಾರು ಒಂದು ಚದುರ ಕಿ.ಮೀ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತದಿಂದ 13 ಮನೆಗಳು ನೆಲಸಮವಾಗಿದ್ದು, ಎಲ್ಲಾ ಸಂತ್ರಸ್ತ ಕುಟುಂಬಗಳನ್ನು ಟೆಂಟ್‍ಗಳಿಗೆ ಸ್ಥಳಾಂತರಿಸಲಾಗಿದೆ ಮತ್ತು ಕಂಬಳಿಗಳು ಮತ್ತು ಪಾತ್ರೆಗಳನ್ನು ಸಹ ಒದಗಿಸಲಾಗಿದೆ. ಸೇನೆಯು ಅವರಿಗೆ ಆಹಾರವನ್ನೂ ನೀಡುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಅಸುರರ ಪಟ್ಟಿಯೇ ಇದೆ : ಸಿಎಂ ಗರಂ
ಭೂಕುಸಿತದಿಂದಾಗಿ 33 ಕೆವಿ ವಿದ್ಯುತ್‍ಲೈನ್ ಹಾಗೂ ಪ್ರಮುಖ ನೀರು ಸಂಪರ್ಕ ಪೈಪ್‍ಲೈನ್‍ಗೆ ಭಾರಿ ಅಪಾಯ ಉಂಟು ಮಾಡಿದೆ. ಭೂಕುಸಿತಕ್ಕೆ ಕಾರಣ ಕಂಡು ಹಿಡಿಯುವಂತೆ ರಾಂಬನ್ ಡಿಸಿ ಮುಸ್ಸರತ್ ಇಸ್ಲಾಂ ಅವರು ಭೂ ವಿಜ್ಞಾನ ಗಣಿಗಾರಿಕೆ ಇಲಾಖೆಯ ವಿಜ್ಞಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಗೂಲ್ ತಹಸಿಲ್ ಪ್ರಧಾನ ಕಛೇರಿಗಾಗಿ ಪರ್ಯಾಯ ರಸ್ತೆಯನ್ನು ರಚಿಸಲು ತುರ್ತು ವ್ಯವಸ್ಥೆ ಮಾಡಲು ಜನರಲ್ ರಿಸರ್ವ್ ಇಂಜಿನಿಯರಿಂಗ್ ಫೋರ್ಸ್ ಕಳುಹಿಸುವಂತೆಯೂ ಅವರು ಮನವಿ ಮಾಡಿಕೊಂಡಿದ್ದಾರೆ.
Landslide, Ramban, district, damages, 13 houses,