ಆಗುಂಬೆ ಘಾಟ್‍ನಲ್ಲಿ ಭೂ ಕುಸಿತದ ಪರಿಶೀಲಿಸಿದ ಕಿಮ್ಮನೆ

Social Share

ಶೃಂಗೇರಿ, ಜು.13- ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಅವರು ಆಗುಂಬೆ ಘಾಟ್‍ನ ಧರೆ ಕುಸಿತ ಪ್ರದೇಶಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‍ಗಳಿಂದ ಮಾಹಿತಿ ಪಡೆದರು. ಭೂ ಕುಸಿದ ಪ್ರದೇಶದ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ತಮ್ಮ ಅವಯಲ್ಲಿಯೇ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಿದ್ದಾಗಿ ತಿಳಿಸಿದರು.

ಇದೇ ವೇಳೆ ಈ ಪ್ರದೇಶದಲ್ಲಿ ಭೂ ಕುಸಿತ ದಿಂದಾಗಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‍ಗಳಾದ ನಾಗರಾಜ್, ನವೀನ್, ಶಶಿಧರ್, ಅರಣ್ಯ ಇಲಾಖೆ ಆರ್‍ಎಫ್‍ಒ ಗೌರವ ಹೆಬ್ರಿ, ತೀರ್ಥಹಳ್ಳಿ ತಾಲ್ಲೂಕು ದಂಡಾಧಿಕಾರಿ ಅಮೃತ್ ರಾಜ್, ಆಗುಂಬೆ ಠಾಣೆಯ ಸಬ್‍ಇನ್ಸ್ಪೆಕ್ಟರ್ ಪೆಕ್ಟರ್
ಶಿವಕುಮಾರ್ ಅಧಿಕಾರಿಗಳು ಜೊತೆಯಲ್ಲಿದ್ದರು.

ಅನಾರೋಗ್ಯದಿಂದ ನಿಧನರಾಗಿದ್ದ ಯು.ಆರ್.ಅನಂತಮೂರ್ತಿ ಪ್ರೌಢಶಾಲೆಯ ಸಹ ಶಿಕ್ಷಕ ಕೌರಿ ಬೆಲ್ ಕೃಷ್ಣಮೂರ್ತಿ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಮುಳುಬಾಗಿಲು ಗ್ರಾಪಂ ಸದಸ್ಯ ಮಂಜುನಾಥ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಳೇಹಳ್ಳಿ ಪ್ರಭಾಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಹಸಿರುಮನೆ ಮಹಾಬಲೇಶ್, ಕಾಂಗ್ರೆಸ್ ಮುಖಂಡ ಗುಡ್ಡೇಕೇರಿ ಶಶಾಂಕ್ ಹೆಗ್ಡೆ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹೆಗ್ಡೆ, ಚಂದ್ರಶೇಖರ್, ಮಳಲಿ ಜಗದೀಶ್ ಜೊತೆಯಲ್ಲಿದ್ದರು.

Articles You Might Like

Share This Article