ರಾಮೇಶ್ವರಂ, ಫೆ.8- ಶ್ರೀಲಂಕಾ ನೌಕಾಪಡೆಯು ತನ್ನ ಸಮುದ್ರ ಗಡಿಯನ್ನು ಉಲ್ಲಂಘಿಸಿದ ಆರೋಪದ ಮೇಲೆ 11 ಭಾರತೀಯ ಮೀನುಗಾರರನ್ನು ಮಂಗಳವಾರ ಬಂಧಿಸಿದೆ ಎಂದು ತಮಿಳು ನಾಡಿನ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೀನುಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಲಂಕಾ ನೌಕಾಪಡೆಯು ಮಂಗಳವಾರ 11 ಮೀನುಗಾರರನ್ನು ಬಂಧಿಸಿ ಅವರ ಮೂರು ದೋಣಿಗಳನ್ನು ವಶ ಪಡಿಸಿಕೊಂಡಿದೆ. ಆದರೆ ಭಾರತೀಯ ಮೀನುಗಾರರು ಸೀಮಾರೇಖೆಯನ್ನು ಉಲ್ಲಂಘಿಸಿರಲಿಲ್ಲ ಎಂದು ಹೇಳಲಾಗಿದೆ. ಶ್ರೀಲಂಕಾದ ನಡವಳಿಕೆಗೆ ಭಾರತೀಯ ಮೀನುಗಾರ ಸಮುದಾಯದ ಆಕ್ರೋಶ ವ್ಯಕ್ತ ಪಡಿಸಿದೆ.
ರಾಮನಾಥಪುರಂ ಲೋಕಸಭಾ ಸದಸ್ಯ ಕೆ.ನವಾಸ್ ಕಣಿ ಅವರು, ಕೇಂದ್ರದ ಸರ್ಕಾರ ಈ ವಿಚಾರಕ್ಕೆ ಶಾಶ್ವತ ಅಂತ್ಯ ಹಾಡಬೇಕೆಂದು ಆಗ್ರಹಿಸಿದ್ದಾರೆ.
