ವಿನೋದ್ ಪ್ರಭಾಕರ್ ನಟನೆಯ ‘ಲಂಕಾಸುರ’ ಚಿತ್ರ ರಿಲೀಸ್‌ಗೆ ರೆಡಿ

Social Share

ಟೈಗರ್ ಟಾಕೀಸ್’ ಸಂಸ್ಥೆಯ ಚೊಚ್ಚಲ ಸಿನಿಮಾವಾಗಿ ಪ್ರಮೋದ್ ಕುಮಾರ್ ನಿರ್ದೇಶನದ, ವಿನೋದ್ ಪ್ರಭಾಕರ್ ನಟನೆಯ ‘ಲಂಕಾಸುರ’ ಮೂಡಿ ಬರುತ್ತಿದೆ. ಈ ಚಿತ್ರದ ಟೀಸರ್ ಮತ್ತು ಸಂಸ್ಥೆಯ ಲೋಗೋವನ್ನು ಚಿತ್ರತಂಡ ಲೋಕಾರ್ಪಣೆಗೊಳಿಸಿದೆ.

ವಿನೋದ್ ಪ್ರಭಾಕರ್ ಪತ್ನಿ ನಿಶಾ ವಿನೋದ್ ಪ್ರಭಾಕರ್ ಜೊತೆಗೂಡಿ ಹೊಸ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ಅವರ ಮೊದಲ ನಿರ್ಮಾಣ ಮೊದಲ ಸಿನಿಮಾ ‘ಲಂಕಾಸುರ’ ಸೆಪ್ಟೆಂಬರ್ನಲ್ಲಿ ಬಿಡುಗಡೆಯಾಗಲಿದೆ.

ವಿನೋದ್ ಪತ್ನಿ ನಿಶಾ ಇದರ ನಿರ್ಮಾಪಕಿಯಾಗಿದ್ದು, ಪ್ರಮೋದ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ವಿನೋದ್ ಜೊತೆಗೆ ಲೂಸ್ ಮಾದ ಯೋಗಿ ಕೂಡ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ನಾಯಕಿಯರಾಗಿ ಪಾರ್ವತಿ ಅರುಣ್ ಮತ್ತು ಆದ್ಯಾ ಪ್ರಿಯಾ ನಟಿಸಿದ್ದಾರೆ. ದೇವರಾಜ್ ಡಾನ್ ಆಗಿ ಕಾಣಿಸಿಕೊಂಡರೆ, ರವಿಶಂಕರ್ ಅವರು ಪೊಲೀಸ್ ಆಫೀಸರ್ ಗೆಟಪ್ನಲ್ಲಿದ್ದಾರೆ.

ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಲಂಕಾಸುರ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ, ಹಿಂದಿ ಡಬ್ಬಿಂಗ್ ಹಕ್ಕುಗಳಿಗಾಗಿ ನಮ್ಮನ್ನು ಅನೇಕರು ಸಂಪರ್ಕಿಸಿದ್ದಾರೆ, ಆದರೆ ಇನ್ನೂ ಅಂತಿಮಗೊಂಡಿಲ್ಲ ಎಂದು ವಿನೋದ್ ತಿಳಿಸಿದ್ದಾರೆ. ಸೆನ್ಸಾರ್ ಸರ್ಟಿಫಿಕೇಟ್ ಮುಗಿದ ನಂತರ ಚಿತ್ರದ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗುವುದು. ಸೆಪ್ಟಂಬರ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ.

Articles You Might Like

Share This Article