ಬೆಂಗಳೂರಿಗೆ ಬಂದಿಳಿದ ವಿಶ್ವದ ಅತಿದೊಡ್ಡ ವಿಮಾನ

Social Share

ಬೆಂಗಳೂರು.ಅ.14-ವಿಶ್ವದ ಅತಿದೊಡ್ಡ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದೆ. ಎಮಿರೇಟ್ಸ್ ಏರ್‍ಲೈನ್ಸ್ ನ ಏರ್‍ಬಸ್ ಅ380 ಡಬಲ್ ಡೆಕ್ಕರ್ ವಿಮಾನ ಮೊದಲ ಭಾರಿಗೆ ದುಬೈನಿಂದ ಬೆಂಗಳೂರಿದೆ ಬಂದಿದೆ,ನಿಗದಿತ ಸಮಯಕ್ಕಿಂತ ಎರಡು ವಾರ ಮುಂಚಿತವಾಗಿ ಬಂದಿರುವುದು ವಿಮಾನ ನಿಲ್ದಾಣ ಅಕಾರಿಗಳು ,ಸಿಬ್ಬಂದಿಗೆ ಖುಷಿ ತಂದಿದೆ.

ವಿಶ್ವದ ಅತಿದೊಡ್ಡ ವಿಮಾನ ಇಕೆ 562 ವಿಮಾನವು ದುಬೈನಿಂದ ಬೆಳಿಗ್ಗೆ 10 ಗಂಟೆಗೆ ಹೊರಟು ಶುಕ್ರವಾರ ಮಧ್ಯಾಹ್ನ 3:40 ರ ಸುಮಾರಿಗೆ ಬೆಂಗಳೂರಿಗೆ ಪ್ರವೇಶವನ್ನು ಮಾಡಲಿದೆ, ನಂತರ ಸಂಜೆ ಬೆಂಗಳೂರಿನಿಂದ ದುಬೈಗೆ ಹಿಂತಿರುಗಲಿದೆ .

ಬೆಂಗಳೂರಿನಿಂದ ಈ ಐಕಾನಿಕ್ ವಿಮಾನವನ್ನು ಹತ್ತುವ ಪ್ರಯಾಣಿಕರಿಗೆ ಇದು ಮೊದಲ ಐಷಾರಾಮಿ ಹಾರಾಟದ ಅನುಭವವಾಗಿದೆ.ವಿಮಾನ ನಿಲ್ದಾಣ ದೊಡ್ಡ ವಿಮಾನಗಳು ಇಳಿಯಲು ಸಾಧ್ಯ ಎಂಬುದು ಖಾತರಿಯಾಗಲಿದೆ ವಿಮಾನಯಾನ ಸಂಸ್ಥೆಗೆ ಇಲ್ಲಿನ ಅಧಿಕಾರಿಗಳು ಧನ್ಯವಾದ ಹೇಳಿದ್ದಾರೆ.

ಐಷಾರಾಮಿ ವಿಮಾನ ಎಂದೇ ಕರೆಸಿಕೊಳುವ ಇದರಲ್ಲಿ ನೀವು ಅರಮನೆಯ ಸೊಬಗು ನೋಡಬಹುದು.ಸುಮಾರು 500 ಆಸನದಲ್ಲಿ ಗರಿಷ್ಠ ಬಿಸನೆಸ್ ಕ್ಲಾಸ್ ಸೀಟು ಹೆಚ್ಚು .ಈ ಐತಿಹಾಸಿಕ ಕ್ಷಣಕ್ಕಾಗಿ ಬೆಳಗ್ಗೆಯಿಂದಲೆ ಸಂಭ್ರಮ ಕಾಣುತ್ತಿತ್ತು ವಿಶೇಷವಾಗಿ ಸ್ವಾಗತ ನೀಡಲಾಯಿತು

Articles You Might Like

Share This Article